ಶ್ರೀ ಕ್ಷೇತ್ರ ಗೆಜ್ಜೆಗಿರಿ ನಿರ್ಮಾಣದ ಆರ್ಕಿಟೆಕ್ಚರ್ ಸಂತೋಷ್ ಕುಮಾರ್ ಕೊಟ್ಟಿಂಜ ಅಮರ್ ರಹೇ

0

ಅಮರ್ ರಹೇ ಸಂತೋಷ್ ಕುಮಾರ್ ಕೊಟ್ಟಿ೦ಜ.

ನಮ್ಮನ್ನು ಅಗಲಿದ ಸಂತೋಷ್ ಗೆ

ಇದು ಅಕ್ಷರದ ನಮನ  ಅಷ್ಟೇ.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಸೌಂದರ್ಯವನ್ನು ನೋಡಿದಾಗ ಯಾರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಅಂತಹ ಸುಂದರ ದೇವಸ್ಥಾನದನಿರ್ಮಾಣದ ಆರ್ಕಿಟೆಕ್ಚರ್ ಸಂತೋಷ್ ಕುಮಾರ್ ಕೊಟ್ಟಿಂಜ. ಕೆಲಸವನ್ನು ನಿಷ್ಠೆಯಿಂದ, ಭಕ್ತಿಯಿಂದ ಹಾಗೂಪ್ರಾಮಾಣಿಕತೆಯಿಂದ ಮಾಡಿದ ವ್ಯಕ್ತಿ ಸಂತೋಷ್.91E4B6AB 622C 424F A439 5F4FB3B208A2 E1652621595588

ಅವರು ಕೋಟಿಚೆನ್ನಯ್ಯ , ದೇಯಿ ಬೈದೆತಿ ಬಗ್ಗೆ ಅಧ್ಯಯನ ಮಾಡಿದ್ದರು. ತಜ್ಞರೊಂದಿಗೆ ಸಮಾಲೋಚನೆ ಮಾಡಿದ್ದರು. ಕಾರಣದಿಂದಲೇ ಸರ್ವರೂ ಮೆಚ್ಚುವ ದೇವಸ್ಥಾನದ ನಿರ್ಮಾಣದ ಆರ್ಕಿಟೆಕ್ಚರ್ ಆಗಿ ಅವರು ಯಶಸ್ವಿಯಾಗಿದ್ದರು.

ಅದು ಅಲ್ಲದೆ ಗೆಜ್ಜೆ ಗಿರಿಯ ಮೂಲಕ ಸಮಾಜಕ್ಕೆ ಕೊಡುಗೆ ಕೊಡಬೇಕು ಎಂಬ ಪ್ರಾಮಾಣಿಕ ಆಸೆ ಅವರಲ್ಲಿ ಇತ್ತು. ಮರಣಹೊಂದುವ ಎರಡು ದಿವಸದ ಮುಂದೆ ಅವರೊಂದಿಗೆ ಮಾತನಾಡಲು ಬಂದ ಕ್ಷೇತ್ರದ ಪದಾಧಿಕಾರಿ ಹಾಗೂ ಸಲಹೆಗಾರ ರಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು. ಅಂದರೆ ಗೆಜ್ಜೆಗಿರಿ ಬಗ್ಗೆ ಅವರಿಗಿದ್ದ ಕನಸು, ಆಶಯ ಅದನ್ನು ಶಬ್ದಗಳಲ್ಲಿ ವರ್ಣಿಸಲುಅಸಾಧ್ಯ.

ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ, ಉದ್ಯೋಗ ದೊರಕಿಸುವ ಕಾರ್ಯಕ್ರಮಗಳ

ಮೂಲಕ ಗೆಜ್ಜೆಗಿರಿಯ ಸ್ಥಾಪನೆಯ ನಿಜವಾದ ಉದ್ದೇಶವನ್ನು ಹಾಗೂ ಕೋಟಿಚೆನ್ನಯರ ಆಶಯಗಳನ್ನು ಅನುಷ್ಠಾನಿಸಲು , ಮೂಲಕ

ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಸ್ಪಷ್ಟ ಕಲ್ಪನೆ ಹೊಂದಿದ್ದ ಸಂತೋಷ್ ನಮ್ಮ ಜೊತೆ ಇಲ್ಲ.

ಅವರೊಬ್ಬ ಕ್ಷೇತ್ರದ ಆರ್ಕಿಟೆಕ್ಚರ್ ಮಾತ್ರ ಆಗಿರಲಿಲ್ಲ, ಅವರು ಕ್ಷೇತ್ರದ ಹಿನ್ನೆಲೆಯ  ಬೌದ್ಧಿಕ ಶಕ್ತಿ ಕೂಡ ಆಗಿದ್ದರು.

ಇಂತಹ ಸಂತೋಷ್ ಕುಮಾರ್ ಕೊಟ್ಟಿಂಜ ನಮ್ಮೊಂದಿಗಿಲ್ಲ. ಆದರೆ ಅವರು ಹಂಚಿಕೊಂಡ ಕನಸು ನಮ್ಮೊಂದಿಗಿದೆ. ಅದನ್ನು ನನಸುಮಾಡುವ ಜವಾಬ್ದಾರಿ ನಮ್ಮ ಮೇಲೆ  ಇದೆ. ಗೆಜ್ಜೆಗಿರಿ ಭಕ್ತರು ಹಾಗೂ ಸರ್ವ ಸಮಾಜ ಎಂದಿಗೂ ಸಂತೋಷ್ ಕುಮಾರ್ಕೊಟ್ಟಿಂಜ ಅವರನ್ನು ನೆನಪಿಸುತ್ತದೆ. ಅವರ ಕನಸನ್ನು ನನಸು ಮಾಡಿದಾಗಲೇ ಅದು ಅವರಿಗೆ ಸಲ್ಲುವ ಬಹುದೊಡ್ಡ ಗೌರವ.

ಮತ್ತೊಮ್ಮೆಅಮರ್ ರಹೇ ಸಂತೋಷ್ ಕುಮಾರ್ ಕೊಟ್ಟಿಂಜ.


Leave a Reply

Your email address will not be published. Required fields are marked *