10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದ್ದು ಖಂಡನೀಯ ಪದ್ಮರಾಜ್ ಆರ್

0

10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನುಪಠ್ಯಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದ್ದು ಖಂಡನೀಯ

ಸಮಾಜ ಸುಧಾರಕ ಸಂತರೆನಿಸಿಕೊಂಡ ಇವರಿಬ್ಬರ ಸಂದೇಶಗಳಿರುವ ಪಠ್ಯ ಭಾಗವನ್ನು, ಪಠ್ಯಪುಸ್ತಕ ಪರಿಷ್ಕರಣೆಯ ವೇಳೆಪರಿಗಣಿಸದೆ ನಿರ್ಲಕ್ಷಿಸಿರುವುದು,CB060D77 85FC 4119 8A6E 8BC713FAFFE7 E1652810617869

ಜಾತಿಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆಯಾಗಿ ಕಂಡರೂ, ಪಠ್ಯ ಪರಿಷ್ಕರಣ ಸಮಿತಿ, ಇಲಾಖೆ ಅಥವಾ ಸರಕಾರ ಕುರಿತು ಯಾವುದೇ ಸ್ಪಷ್ಟೀಕರಣ ನೀಡದೆ, ಸಂತರ ತತ್ವಸಿದ್ಧಾಂತಗಳನ್ನು ಅನುಸರಿಸುತ್ತಿರುವ ಅವರ ಅನುಯಾಯಿಗಳಿಗೆ ಮಾಡಿದ ಬಹಿರಂಗ ಅವಮಾನ ಎಂಬುದು ಸತ್ಯ.

ಜಾತಿಪದ್ಧತಿಯ ಕಪಿ ಮುಷ್ಟಿಯಲ್ಲಿ ನಲುಗಿ, ಅಸ್ಪೃಶ್ಯತೆಯ ಪರಾಕಾಷ್ಠೆ ತಲುಪಿ, ಮತಾಂತರದ ಸುಳಿಗೆ ಸಿಲುಕಿದ್ದ ಸನಾತನಹಿಂದೂಧರ್ಮದ ಬಹುಸಂಖ್ಯಾತ ಹಿಂದುಳಿದ ವರ್ಗದ ಜನರ ಧ್ವನಿಯಾಗಿ, ಧಾರ್ಮಿಕ ಸುಧಾರಣೆಯ ಮೂಲಕ ಸಾಮಾಜಿಕಪರಿವರ್ತನೆಯ ಹರಿಕಾರರೆನಿಸಿದ ನಾರಾಯಣ ಗುರುಗಳ ತತ್ವ ಸಂದೇಶ, ಪ್ರಸ್ತುತ ಸನ್ನಿವೇಶದಲ್ಲಿ ಇಂದಿನ ಯುವ ಪೀಳಿಗೆಗೆ ಅತ್ಯಂತಮಹತ್ವಪೂರ್ಣದ್ದಾಗಿದೆ.

ಅಸಹಿಷ್ಣುತೆ, ಅಸ್ಪೃಶ್ಯತೆ, ಕೋಮುಭಾವನೆ ಕೆರಳಿಸುವ ಘಟನೆಗಳು ಸೇರಿದಂತೆ ಪ್ರಪಂಚದಾದ್ಯಂತ  ಆಂತರಿಕ ಕಲಹಗಳುನಡೆಯುತ್ತಿರುವ ಸಂದರ್ಭದಲ್ಲಿ, ಮುಂದಿನ ಪೀಳಿಗೆ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಲು ಇಂತಹ ತತ್ವಜ್ಞಾನಿಗಳ, ಸಾಮಾಜಿಕ ಪರಿವರ್ತಕರ ಜೀವನ ಸಂದೇಶ ಅತೀ ಅವಶ್ಯಕವಾದುದು.

ಆದ್ದರಿಂದ ಸರಕಾರ ಕುರಿತು ಮರುಚಿಂತನೆ ನಡೆಸಬೇಕಾಗಿ ಆಗ್ರಹಿಸುತ್ತಿದ್ದೇವೆ.

Lಪದ್ಮರಾಜ್ ಆರ್.

ಕೋಶಾಧಿಕಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಸಂಸ್ಥಾಪಕರು ಗುರು ಬೆಳದಿಂಗಳು (ರಿ) ಕುದ್ರೋಳಿ 


Leave a Reply

Your email address will not be published. Required fields are marked *