08/08/2026

ನಾರಾಯಣ ಗುರುಗಳ ವಿಚಾರಧಾರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಮೂಲಕ ವಿವಾದಕ್ಕೆ ಅಸ್ಪದ ಕೊಡದಿರುವಂತೆ ಸರ್ಕಾರಕ್ಕೆ ಮನವಿ ಪ್ರವೀಣ್ ಎಂ ಪೂಜಾರಿ

0

ನಾರಾಯಣ ಗುರುಗಳ ವಿಚಾರಧಾರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಮೂಲಕ ವಿವಾದಕ್ಕೆ ಅಸ್ಪದ ಕೊಡದಿರುವಂತೆಸರ್ಕಾರಕ್ಕೆ ಮನವಿ

ಸಾರ್ವಕಾಲಿಕ ಯೋಗ್ಯವಾದ ಸಂದೇಶಗಳನ್ನು ನೀಡಿದ ಸಮಾಜಸುಧಾರಕರಾದ ಬ್ರಹ್ಮಶ್ರಿ ನಾರಾಯಣ ಗುರುಗಳ ಕುರಿತಾದಪಠ್ಯವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿರುವುದು ಸಮಂಜಸವಲ್ಲ.  ಒಂದೇ ಜಾತಿ,ಒಂದೇ ಮತ,ಒಬ್ಬರೆ ದೇವರು ಎನ್ನುವ ವಿಶ್ವ ಸಮ್ಮತಪರಿಕಲ್ಪನೆಯನ್ನು ಪರಿಪಾಲಿಸಿದವರು.

ಅನ್ಯಾಯ,ಅನಾಚರಗಳಿಂದ ಹುಚ್ಚರ ಆಸ್ಪತ್ರೆ ಎಂದು ಕರೆಯಲ್ಪಟ್ಟಿದ್ದ ಕೇರಳದ ಸಮಗ್ರ ಚಿತ್ರಣವನ್ನು ಬದಲಾಯಿಸಿದವರು‌ ಹಾಗೂಜಗತ್ತಿಗೆ ಸುಧಾರಣೆಯ ದಿಕ್ಸೂಚಿಯಾದವರು.

ಸಮಾಜದಲ್ಲಿ ಧರ್ಮ & ರಾಜಕೀಯ ವಿಪ್ಲವಗಳು ಮೇರೆಮೀರುತ್ತಿರುವ ಕಾಲದಲ್ಲಿ ಮನುಷ್ಯಧರ್ಮವೇ ಶ್ರೇಷ್ಠವೆಂದ ಪರಮಗುರುವಿನ ತತ್ವಗಳು ಇಂದು ಅತೀ ಅಗತ್ಯವೆನಿಸಿದೆ‌.ವಿದ್ಯೆಯಿಂದ ಸ್ವತಂತ್ರರಾಗಿರಿ ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿಸರ್ವ‌ಆಯಾಮದ ಸಮಸ್ಯೆಗಳಿಂದ ಮನುಕುಲ ಪಾರಾಗಬೇಕೆಂದರೆ ವಿದ್ಯೆ ಅತಿ ಪ್ರಮುಖವೆಂದು ಜ್ಞಾನಪ್ರಸಾರಕ್ಕೆ ಹೆಚ್ಚು ಮಹತ್ವನೀಡಿದ ಗುರುಗಳ ಕುರಿತಾದ ಪಠ್ಯವನ್ನು ವಿನಾಕಾರಣದಿಂದ ತೆಗೆದುಹಾಕಿರುವುದು ಪ್ರಶ್ನಾರ್ಹ ಸಂಗತಿಯಾಗಿದೆ.

ಶಿಕ್ಷಣ ಇಲಾಖೆ ಕೂಡಲೆ ತನ್ನ ನಿರ್ಧಾರಗಳನ್ನು ಬದಲಿಸಿಕೊಂಡು ಇಡೀ ಜಗತ್ತಿಗೆ ಪಾಠದಂತಿರುವ ಬ್ರಹ್ಮಶ್ರೀ ನಾರಾಯಣಗುರುಗಳಪಠ್ಯವನ್ನು ಮರುಸೇರ್ಪಡೆಗೊಳಿಸುವಂತೆ ಅತಿ ಅಗತ್ಯವಾಗಿ ಕೇಳಿಕೊಳ್ಳುತ್ತೇವೆ.

  ಪ್ರವೀಣ್ ಎಂ ಪೂಜಾರಿ

ಅಧ್ಯಕ್ಷರು

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)


Leave a Reply

Your email address will not be published. Required fields are marked *

You may have missed