ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ಲಕ್ಷ್ಮೀಶ್ ಸುವರ್ಣ.

0

ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ತಿಮ್ಮಪ್ಪ ಪೂಜಾರಿ ಮತ್ತು ಶಶಿಕಲಾ ಟಿ ಸುವರ್ಣ ಇವರ ಮುದ್ದಿನ ಮಗ ಲಕ್ಷ್ಮೀಶ್ ಸುವರ್ಣ

ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು ಆದರೆ ಇವರಿಗೆ ಶಾಲಾ ದಿನಗಳಲ್ಲಿ ಯಾವುದೇ ರೀತಿಯ ಬೆಂಬಲ ಅಥವಾ ತಾವೇ ಮುಂದೆ ಹೋಗುವಷ್ಟು ಧೈರ್ಯ ಇರಲಿಲ್ಲ. ಹಾಡುಗಾರನಾಗಿ ಬೆಳೆಯಬೇಕು ಎಂಬ ಆಸೆಯೂ ನೆರವೇರಲಿಲ್ಲ . ಆದರೆ ನಿರೂಪಕನಾಗಿ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು ಇವರ ಕಂಚಿನ ಕಂಠದ ಧ್ವನಿಯಿಂದ ಎಂಟು ವರ್ಷದಿಂದ ನಿರೂಪಣೆಯ ಹಾದಿಯಲ್ಲಿ ಮುಂದುವರಿದರು ಕರ್ನಾಟಕದ ಅನೇಕ ಕಡೆ ಮೈಸೂರ್, ಚಿಕ್ಕಮಂಗಳೂರು, ಶೃಂಗೇರಿ,ಕೊಪ್ಪ,ಉಡುಪಿ, ಮಂಗಳೂರು, ಜೈಪುರ್, ಬಾಳೆಹೊನ್ನೂರು, ಕಾಸರಗೋಡು, ಪುತ್ತೂರು, ಸುಳ್ಯ, ಮುಂಬೈಗಳಲ್ಲಿ ಕಾರ್ಯಕ್ರಮ ನೀಡಿ ತಮ್ಮ ವಾಕ್ ಚಾತುರ್ಯದಿಂದಲೇ ಜನ ಮನ ಗೆದ್ದಿದ್ದಾರೆ. ಓಮನ್ ಬಿಲ್ಲವಾಸ್ ಅವರು ಆಯೋಜಿಸಿದ ಬಲೇ ತೆಲಿಪಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು ಆದರೆ ಕೋರೋನ ದ ಲಾಕ್ ಡೌನ್ ಕಾರಣ ಅವಕಾಶ ಕಳೆದುಕೊಂಡರು 8965EC97 4D08 434D A6BB 6F47CD4D10C4

ತನ್ನ ಪ್ರಾಥಮಿಕ ಶಿಕ್ಷಣವನ್ನು ಜೆಪ್ಪಿನಮೊಗರು ಗವರ್ನಮೆಂಟ್ ಸ್ಕೂಲ್ ಮತ್ತು ಪ್ರೌಢ ಶಿಕ್ಷಣವನ್ನು ಕ್ಯಾಸಿಯಾ ಹೈ ಸ್ಕೂಲ್ ನಲ್ಲಿ ಮಾಡಿ ಮುಗಿಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕು ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಕೊಂಡಾಗ ಇವರ ಕೈ ಹಿಡಿದದ್ದು ಕಲಾ ಮಾತೆ ಇವರು ಕೇವಲ ನಿರೂಪಕರಾಗಿರದೆ ಅನೇಕ ತುಳು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಸಿನಿಮಾ, (ತಂಬಿಲ, ಭೋಜರಾಜ್ ಎಮ್ ಬಿ ಬಿ ಎಸ್, ಭಟ್ಕಳ,)ಧಾರಾವಾಹಿ (ಅಜನೆ) ಮತ್ತು ಕಿರು ಚಿತ್ರ (ಪ್ಲಾನ್ –ಸಿ, ಆ ಒಂದು ಕೆರೆ) ಹೀಗೆ ತನ್ನಲ್ಲೂ ಒಬ್ಬ ಕಲಾವಿದ ಇದ್ದಾನೆ ಎಂದು ತೋರಿಸಿಕೊಟ್ಟಿದ್ದಾರೆ. ಜೀವನದಲ್ಲಿ ದೊಡ್ಡ ಕಲಾವಿದ ಆಗಬೇಕು, ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆಯಂತೆ. ಹಾಗೆಯೇ ನಿರೂಪಣೆ ಯಲ್ಲಿಯೂ ಒಳ್ಳೆಯ ಹೆಸರು ಮಾಡಬೇಕು ಮತ್ತು ಹೊರ ದೇಶದಲ್ಲಿಯೂ ವಾಕ್ ಚಾತುರ್ಯ ತೋರಿಸಬೇಕು ಎನ್ನುವ ಕನಸು ನನಸಾಗಲಿ ಇವರ ಈ ಎಲ್ಲಾ ಆಸೆಗೆ ಮನೆಯವರು ಪ್ರೋತ್ಸಾಹ ಮತ್ತು ಮಡದಿ ಶ್ರೀಮತಿ ಶುಭ ಲಕ್ಷ್ಮಿ ಯವರ ಸಂಪೂರ್ಣ ಪ್ರೋತ್ಸಾಹ, ಬೆಂಬಲ ಇದೆ.8BCE2584 9FFB 4A15 AD8F BB8EAB32DE3E

ಪ್ರಸ್ತುತ ಈಗ ಇವರು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ನಾಮಫಲಕ ಕಲಾಗಾರರ ಸಂಘದ ಅಧ್ಯಕ್ಷರಾಗಿ ಬಿರ್ವೆರ್ ಕುಡ್ಲ ವಕ್ತಾರೆ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ED9A7BFE 3138 4BE9 87D0 7A008BF77763

ತನ್ನ ಜೀವನಕ್ಕಾಗಿ ತನ್ನದೇ ಆದ ಸುವರ್ಣ ಗ್ರಾಫಿಕ್ಸ್ ಸ್ಟುಡಿಯೋ ನಡೆಸಿಕೊಂಡು ಹೋಗುತ್ತಿದ್ದಾರೆ.(ಕಾರ್, ಬೈಕ್ ಇದರ ಗ್ರಾಫಿಕ್ಸ್, ಸ್ಟಿಕರ್ ಕಟ್ಟಿಂಗ್, ನೇಮ್ ಪ್ಲೇಟ್ )

ತಾನು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಇವರ ಕನಸು ಆದಷ್ಟು ಬೇಗ ಈಡೇರಲಿ.

ಕನ್ನಡ ತುಳು ಚಿತ್ರ ರಂಗದಲ್ಲಿ ಒಳ್ಳೆಯ ಅವಕಾಶ ಸಿಗಲಿ, ಕನ್ನಡದಲ್ಲಿ ಅಭಿನಯಿಸುವ ಆಸೆಯು ಬೇಗ ಫಲಿಸಲಿ, ಕಲಾಮಾತೆ ಮತ್ತು ತುಳುನಾಡಿನ ದೈವ ದೇವರುಗಳ ಅನುಗ್ರಹ ಸದಾ ಇರಲಿ ಒಳ್ಳೆಯದಾಗಲಿ ನಿಮಗೆ

 

ಬರಹ:✍ಪ್ರಶಾಂತ್ ಅಂಚನ್ ಮಸ್ಕತ್


Leave a Reply

Your email address will not be published. Required fields are marked *