ಕೊರೊನಾ ವಿರುದ್ಧ ಯುಧ್ಧ ಸಾರಿ ಗೆದ್ದ ಯಂಗ್ ಕೋವಿಡ್ ವಾರಿಯರ್ ಪ್ರಶಸ್ತಿ ಪಡೆದ ಅಭಿನ್ ಬಂಗೇರ

0

ಕೊರೊನಾ ವಿರುದ್ಧ ಯುಧ್ಧ ಸಾರಿ ಗೆದ್ದ ಯಂಗ್ ಕೋವಿಡ್  ವಾರಿಯರ್ ಪ್ರಶಸ್ತಿ ಪಡೆದ ಅಭಿನ್ ಬಂಗೇರ8B44C51C 7663 482C 983E 1A547070732A E1633213028868

ಜಗತ್ತಿಗೆ ಕೊರೊನಾ ಎಂಬ ಮಹಾಮಾರಿಯ ಆರ್ಭಟದ ಸಮಯ .ಇಡೀ ಲೋಕದಲ್ಲಿ ನೀರವ ಮೌನ ಆವರಿಸಿದ ಕಾಲ. ಎಲ್ಲಿನೋಡಿದರು ಕೊರೊನಾ ಎಂಬ ಮೂರಕ್ಷರದ ವೈರಸ್ ಆರ್ಭಟದಿಂದ ಜಗತ್ತು ತತ್ತರಿಸಿದ ದಿನ.ಇಂತಹ ಸಮಯದಲ್ಲಿ ಸಂಕಷ್ಟದಲ್ಲಿಇರುವ ಜನರಿಗೆ ಸಹಾಯಕ್ಕೆ ಬಂದವರೇ ಈ ಕೊರೊನಾ ವಾರಿಯರ್ಸ್. ಕಷ್ಟದ ದಿನಗಳನ್ನು ಎದುರಿಸುತ್ತಾ ಅನ್ಯರ ಪಾಲಿಗೆಸಹಾಯದ ಬೆಳಕು ಚೆಲ್ಲುವ ಈ ವಾರಿಯರ್ಸ್ ಗಳ ಸೇವೆ ನಿಜಾಕ್ಕೂ ಅಧ್ಧುತ. ಇಂತಹ ಕೊರೊನಾ ವಾರಿಯರ್ಸ್ ಗಳ ಪಟ್ಟಿಯಲ್ಲಿನಮ್ಮ ಬಿಲ್ಲವ ಸಮಾಜದ ಯುವ ತರುಣ ಈಗ ಸುದ್ದಿಯಲ್ಲಿ ಇದ್ದಾರೆ. ವಿದ್ಯಾಭ್ಯಾಸದೊಂದಿಗೆ ಯುವ ಸಮಾಜ ಸೇವಕರಾಗಿಗುರುತಿಸಿಕೊಂಡು. ಜನಪ್ರಿಯ ಸಮಾಜಸೇವಕರಾಗಿ ಮೆಚ್ಚುಗೆ ಗಳಿಸಿದ ಇವರೇ ಅಭಿನ್ ಬಂಗೇರ. ಇವರ ಸಾಧನೆಯ ಹಾದಿಯನ್ನುನಿಮ್ಮ ಮುಂದೆ ಇಡಲು ಬಯಸುತ್ತೇನೆ.. ಬಂಟ್ವಾಳ ತಾಲೂಕಿನ ಸಂಜೀಪ ಮುನ್ನೂರು ಮೂಲದ  ಯೋಗೀಶ್ ಪೂಜಾರಿ ಮತ್ತು ಶ್ರೀಮತಿ ನೀತಾ ಯೋಗೀಶ್ ದಂಪತಿಗಳ ಮಡಿಲಿಗೆ ಹೂ ಮಳೆ ಸುರಿಸಿದ ಹೆಮ್ಮೆಯ ಸುಪ್ರುತ. ಪ್ರಸ್ತುತ ಬಿ.ಕಾಂ ವಿದ್ಯಾರ್ಥಿ. ಬಾಲ್ಯಕಾಲದಲ್ಲಿ ಇದ್ದ ಸಮಾಜಮುಖಿ ಕಾರ್ಯಗಳ ಬಗ್ಗೆ ಇದ್ದ  ಆತಿಯಾದ ಆಸ್ತಕಿ ಮುಂದೆ ಇವರ ಈ ಸಮಾಜಮುಖಿ ಕಾರ್ಯಕ್ಕೆಅಡಿಪಾಯವಾಯಿತು. ಮುಂದೆ ಜೀವನದಲ್ಲಿ ಸಮಾಜ ಮುಖಿ ಕಾರ್ಯಗಳಿಗೆ ಮುನ್ನುಡಿ ಬರೆದ ಇವರು ನಂತರ ಸೃಷ್ಟಿಸಿದೆಲ್ಲಇತಿಹಾಸ‌.32B050FA C637 4D0F A5F1 DF785957041F E1633213068375

2019 ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಹಾನಿಯಾದ ಕೊಡಗು ಜಿಲ್ಲೆಯ  ನಿರಾಶ್ರಿತರಿಗೆ ಹಣ ಸಂಗ್ರಹ ಮತ್ತು ಆಹಾರ  ಧಾನ್ಯಗಳ ಸಂಗ್ರಹವನ್ನು ಮಾಡುತ್ತಾರೆ.ಜೊತೆಗೆ  ಚಾರ್ಮಾಡಿ ಭೂ ಕುಸಿತ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲೂ ಕೈ ಜೋಡಿಸಿ ತಮ್ಮಕೈಲಾದಷ್ಟು ಸಹಾಯ ಮಾಡುತ್ತಾರೆ. ಹನಿ ಹನಿ ಕೂಡಿ ಹಳ್ಳ ಎಂಬ ನುಡಿಯಂತೆ ಬಂಟ್ವಾಳದಲ್ಲಿ ಯುವಕರನ್ನು ಒಂದುಗೂಡಿಸಿ  ತಮ್ಮಸಾರಥ್ಯದಲ್ಲಿ “ಟೀಮ್ ಎಸ್ ವಿ ಎಸ್“  ಎಂಬ ತಂಡವನ್ನು ನಿರ್ಮಿಸಿ ಹಲವಾರು  ಜನಜಾಗೃತಿ ಅಭಿಯಾನಗಳು ನಡೆಸಿದ್ದಾರೆ. ಈತಂಡದ ಮುಖೇನ “ಪ್ಲಾಸಿಕ್ ಮುಕ್ತ ಬಂಟ್ವಾಳ” ಮತ್ತು “ಗೋ ಗ್ರೀನ್ ಬಂಟ್ವಾಳ” ಹೀಗೆ ಮುಂತಾದ ಯಶ್ವಸಿ ಅಭಿಯಾನಗಳು ಈತಂಡದ  ಹೆಸರಿಗೆ ಸೇರಿದೆ. ಜೊತೆಗೆ ಅಲ್ಲಿಯ ಶಾಸಕರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಬೆನ್ನು ತಟ್ಟಿ ಪೋತ್ಸಾಹಿಸಿದ್ದಾರೆ.

ಹೀಗೆ ಸಾಗುವ ಇವರ ಸಮಾಜ ಮುಖಿ ಕಾರ್ಯ ಕೊರೊನಾ ಸಮಯದಲ್ಲಿ ಮತ್ತುಷ್ಟು ವೇಗ ಪಡೆಯುತ್ತಾದೆ. ಕೊರೊನಾದ ಅದಿನಗಳಲ್ಲಿ ಅನೇಕ ಬಡ ಜನರಿಗೆ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉಚಿತ ದಿನಬಳಕೆ ವಸ್ತುಗಳು ಒದಗಿಸಿ. ನೆರವಿನ ಹಸ್ತಚಾಚುತ್ತಾ ಬಂದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬೀದಿ ಬದಿಯ ಮೂಕಪ್ರಾಣಿಗಳಿಗೆ ಆಹಾರ ನೀಡುತ್ತಾ. ಇತರರಿಗೆಮಾದರಿಯಾಗಿದ್ದಾರೆ.

ತಮ್ಮ ದೈನಂದಿನ ಜೀವನದಲ್ಲಿ ಸಮಾಜ ಸೇವೆ ಒಂದು ಭಾಗ ಎಂದು ತೊಡಗಿಸಿಕೊಂಡಿರುವ ಇವರ ಕಾರ್ಯ ವೈಖರಿಯನ್ನು ಮೆಚ್ಚಿ. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೆನಪೊಯಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ278  ಸ್ಪರ್ಧಿಗಳ ಪೈಕಿ ಇವರ ಮಾಡಿರುವ ಕೋವಿಡ್ ಸೇವಾ ಕಾರ್ಯನ್ನು ಗುರುತಿಸಿ” Youth covid warrior” ಎಂಬ ರಾಷ್ಟೀಯಪುರಸ್ಕಾರವನ್ನು ನೀಡಿ ಗೌರವಿಸಿದೆ.

ಜೊತೆಗೆ “national council of rural education Dept of higher education minister  of Human resource  development  govt of India” ಇದರ ವೆಬಿನಾರ್ ನಲ್ಲಿ   ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಹೆಮ್ಮೆ ಇವರಿಗಿದೆ. ಹಾಗೇವಿಶ್ವದ ಅತೀ ದೀರ್ಘ ವೆಬಿನಾರ್ ನಲ್ಲಿ ಭಾಗವಹಿಸಿ  ಗಮನ ಸೆಳೆದ ಇವರು World book of record, Lodon  ಆಯ್ಕೆಯಾಗಿ ಸೈಎನಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಇತ್ತೀಚಿನ ದಿನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನದ ಅಂಗವಾಗಿ  Savitri bhai phule university of Pune ಎಂಬ ರಾಷ್ಟ್ರ ಮಟ್ಟದಲ್ಲಿ ನಡೆಯುವ ವೆಬಿನಾರ್ ನಲ್ಲಿ  ಕರ್ನಾಟಕ ರಾಜ್ಯವನ್ನು  ಪ್ರತಿನಿಧಿಸಿದಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಹೆಮ್ಮೆ ಇವರ ಹೆಸರಿನಲ್ಲಿದೆ. ಇವರ ಸಾಧನೆಯನ್ನು ಗುರುತಿಸಿ ಪ್ರಸಿಧ್ಧ “ಮಂಗಳೂರು ಆಕಾಶವಾಣಿ ” ಇದರ ಜನಪ್ರಿಯ ಕಾರ್ಯಕ್ರಮದಲ್ಲಿ ಇವರನ್ನು ಸಂದರ್ಶಿಸುವ ಮೂಲಕ ಗೌರವಿಸಲಾಗಿದೆ. ಮತ್ತು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳ ಕೈಯಿಂದ ಇವರ ಸಾಧನೆಗೆ  ಸನ್ಮಾನ ಹಾಗೂ ಗೌರವ ಮತ್ತು ಮೆಚ್ಚುಗೆಯ ಮಾತುಗಳನ್ನುಹಾಡಿದ್ದಾರೆ.

ಬದಲಾಗುತ್ತಿರುವ ಜಗದಲ್ಲಿ ಸಮಾಜ ಸೇವೆ ಎಂಬ ಕೊಡಲೆ ಹಿಂಜರಿಯುವ ಜನಗಳೇ ಹೆಚ್ಚು.ಅದರಲ್ಲೂ ವಿಶೇಷವಾಗಿವಿದ್ಯಾಭ್ಯಾಸದೊಂದಿಗೆ ಇವರ ಸಮಾಜಮುಖಿ ಕಾರ್ಯ ನೋಡಿ ಚಪ್ಪಾಳೆ ತಟ್ಟದ ವ್ಯಕ್ತಿ ಇರಲು ಸಾಧ್ಯವಿಲ್ಲ. ಸಮಾಜ ಸೇವೆಗೆ ಪಣತೊಟ್ಟ ನಿಂತ ಇವರ ಸಾಧನೆಯ ದಾರಿ  ಶ್ಲಾಘನೀಯ. ಇವರ ಈ ಸಾಧನೆ ಇತರ ಯುವಕರಿಗೂ ಸ್ಪೂರ್ತಿ ನೀಡಲಿ. ಇವರ ಹಸ್ತದಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ದೇವರು ಅನುಗ್ರಹಿಸಿಲಿ ಎಂಬುಂದು ನಮ್ಮ ತಂಡದ ಆಶಯವಾಗಿದೆ.

 

ಬರಹ:- ಶ್ರವಣ್ ಬಿ.ಸಿ.ರೋಡ್


Leave a Reply

Your email address will not be published. Required fields are marked *