07/08/2026

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ

0
Screenshot

Screenshot


ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ  ಚತುರ್ಭಾಷಾ ತಾರೆ, ಚಿರಶ್ರೀ ಅಂಚನ್ ನಿಶ್ಚಿತಾರ್ಥ ನೆರವೇರಿದೆ. ಫೆ.3ರಂದು ಚಿರಶ್ರಿ ಹಸೆಮಣೆ ಏರಲಿದ್ದಾರೆ. ಚಿರಶ್ರೀ ಅಂಚನ್ ತುಳು, ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ನಟಿಸಿದ್ದಾರೆ. ಕಲ್ಪನಾ 2 (2016) ಮತ್ತು ಹುಲಿರಾಯ (2017) ಈ ಸಿನಿಮಾದ ಮೂಲಕ ಇವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಚಿರಶ್ರೀ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕಲಿವೀರ ಮತ್ತು ಉಡುಂಬಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


Leave a Reply

Your email address will not be published. Required fields are marked *

You may have missed