07/08/2026

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ

0
IMG_0029

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ ನಿರ್ದೇಶನ ಗೊಂಡಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉಳಿದಂತೆ ಮುಹಮ್ಮದ್ ರಿಯಾಝ್ ನೆಹರೂ ನಗರ, ಜೋಸೆಫ್ ಪ್ರವೀಣ್ ರೋಡ್ರಿಗಸ್ ಕಾವಳಪಡೂರು, ಅಶೋಕ್ ಭಂಡಾರಿಬೆಟ್ಟು, ರೇಶ್ಮ ತೇಲೀಸ್ ಬೋಳಂಗಡಿ, ಪುರುಷೋತ್ತಮ ಬಂಗೇರ ಮಂಡಾಡಿ, ರವೀಂದ್ರ ಸಪಲ್ಯ ಬೋಳಂತೂರು, ಹಾಗೂ ಶಿವಾನಂದ ನಾಯ್ಕ ಕೊಳ್ನಾಡು ಅವರನ್ನು ರಾಜ್ಯಪಾಲರ ಆಜ್ಞಾನುಸಾರ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.


Leave a Reply

Your email address will not be published. Required fields are marked *

You may have missed