ಸ್ಫೋಟದಿಂದ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ನೆರವಿನ ಭರವಸೆ

0

ಮಂಗಳೂರು: ರಿಕ್ಷಾದಲ್ಲಿ ಕುಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋರಿಗುಡ್ಡೆ ನಿವಾಸಿಪುರುಷೋತ್ತಮ ಪೂಜಾರಿ ಅವರನ್ನು ಕುದೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಬ್ರಿಗೇಡ್ಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, ಕೃತಿನ್, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಭೇಟಿಯಾಗಿ ಎಲ್ಲ ರೀತಿಯ ಸಹಾಯನೀಡುವುದದಾಗಿ ಭರವಸೆ ನೀಡಿದರು.741E4E62 830F 4825 A894 172FCA3DF7E8ಬಳಿಕ ಪತ್ನಿ, ಮಕ್ಕಳ ಜತೆ ಸಮಾಲೋಚನೆ ನಡೆಸಿ ಅವರಿಗೂ ಧೈರ್ಯ ತುಂಬಿದರು.

ಪುರುಷೋತ್ತಮ ಅವರು 25 ವರ್ಷಗಳಿಂದ ರಿಕ್ಷಾದಿಂದ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದರು. ಇದೀಗ ರಿಕ್ಷಾವನ್ನು  ಪೊಲೀಸರು ಮುಟ್ಟುಗೋಲು ಹಾಕಿದ್ದು ಭಯೋತ್ಪಾದಕ ಕೃತ್ಯವಾದ ಕಾರಣ ಸದ್ಯ ಬಿಡುಗಡೆ ಭಾಗ್ಯವಿಲ್ಲ. ಮಗಳಿಗೆ ಮದುವೆ ಕೂಡಫಿಕ್ಸ್ ಆಗಿದ್ದು ಇಂತಹ ಸಂಕಷ್ಟವನ್ನು ಅರಿತು ಅವರ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆ ನಮ್ಮ ಸಮಾಜ ಕೂಡ ಇದೆ ಎಂದುಧೈರ್ಯ ತುಂಬಲಾಯಿತು.


Leave a Reply

Your email address will not be published. Required fields are marked *