ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!

0

ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರುಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಈ ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಆದರೆ ಇದೆಲ್ಲದರ ನಡುವೆ ಆಘಟನೆಯಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಗಳು ಪವಾಡ ಮೆರೆದಿರುವುದು ಗೋಚರವಾಗುತ್ತಿದೆ.4E9554C9 875F 4C37 88AB DB50395949C0 E1669058939452

ಶನಿವಾರ ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದುಘಟನೆಯಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕನು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಅನೇಕ ಆಯಾಮಗಳನ್ನುಪಡೆದುಕೊಂಡರೂ ಕೊನೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿದೆ.

ಭಯೋತ್ಪಾದನೆ ಸಂಚು ರೂಪಿಸಿದ್ದ ಶಾರೀಕ್ ಕುಕ್ಕರ್‌ನಲ್ಲಿ ಅನೇಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಪ್ರೀ ಪ್ಲಾನ್ ಎಂಬಂತೆಯೋಜನೆ ಹಾಕಿಕೊಂಡಿದ್ದ.F7C876B1 023A 4440 8382 45214B5D8880 E1669059033962

ಈತ ಮೈಸೂರಿನಿಂದ ಬಸ್ಸಿನಲ್ಲಿ ಬಂದು ಪಡೀಲ್‌ನ ಹತ್ತಿರ ಇಳಿದು ಪುರುಷೋತ್ತಮ್ ಎಂಬವರ ರಿಕ್ಷಾದಲ್ಲಿ ಕೂತು ಪಂಪ್‌ವೆಲ್‌ಗೆಹೋಗಬೇಕು ಎಂದಿದ್ದಾನೆ.

ಆದರೆ ಚಾಲಕ ರಿಕ್ಷಾ ಚಲಾಯಿಸುತ್ತಾ ಸಾಗುತ್ತಿರುವಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆ  ಬಳಿ ಆತ ಹೊತ್ತೊಯ್ಯುತ್ತಿದ್ದ ಬ್ಯಾಗ್‌ನಲ್ಲಿದ್ದ ಕುಕ್ಕರ್ ಅಚಾನಕ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಈತನ ಕೃತ್ಯದ ಬಗ್ಗೆ ಅನೇಕ ಪ್ರಶ್ನೆಗಳು, ಅನುಮಾನಗಳು, ಆತಂಕಗಳು ಸೃಷ್ಠಿಯಾಗುತ್ತಿದ್ದರೂ ಆತ ಆ ಸ್ಪೋಟಕ ತುಂಬಿದ್ದ ಕುಕ್ಕರನ್ನುತೆಗೆದುಕೊಂಡು ಜನರು ನಂಬಿಕೊಂಡು ಬಂದಿರುವ ತುಳುನಾಡ ಕಾರ್ಣಿಕ ಪುರುಷರ ದೈವಸ್ಥಾನವಾದ ಕೋಟಿ ಚೆನ್ನಯ್ಯ ಗರೋಡಿತನ್ನ ಗಡಿಯನ್ನೂ ದಾಟಲು ಬಿಡದೆ ಮುಂಚಿತವಾಗಿಯೇ ಈ ಅವಘಡ ನಡೆದಿರುವುದು ಎಲ್ಲೋ ಒಂದು ಕಡೆ ಜನ ಇದು ‘ಈ ಮಣ್ಣಿನಪವಾಡ ಪುರುಷರ ಶಕ್ತಿ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಘಟನೆಯ ಭೀಕರತೆ ಅದೆಷ್ಟಿತ್ತೋ ತಿಳಿದಿಲ್ಲ. ಆದರೆ ದುರಂತವನ್ನು ಇಷ್ಟರಲ್ಲಿಯೇ ಮುಗಿಸಿದ್ದು ಮಾತ್ರ ನಾವು ನಂಬಿಕೊಂಡುಬಂದಿರುವ ಈ ಜಾಗದ ಶಕ್ತಿಗಳು ಎನ್ನುತಾರೆ ಸ್ಥಳೀಯರು.92B64E63 E21F 4B8B AFDF E695FABA5315 E1669059116213ಇನ್ನು ದುರಾದೃಷ್ಟವಶಾತ್ ಅಂದು ‘ಪ್ರತಿದಿನದಂತೆ ಇದು ಕೂಡಾ ಬಾಡಿಗೆ’ ಎಂದುಕೊಂಡಿದ್ದ ಪ್ರಮಾಣಿಕ ಆಟೋ ಚಾಲಕಪುರುಷೋತ್ತಮ ಅವರಿಗೆ ಮಾತ್ರ ಕಾದಿತ್ತು ಆಶ್ಚರ್ಯ.

ತನ್ನ ರಿಕ್ಷಾದಲ್ಲಿ ಪ್ರಯಾಣಿಕನನ್ನು ಕರೆದುಕೊಂಡು ಚಲಾಯಿಸುತ್ತಿರುವಾಗಲೇ ದುರಂತ ನಡೆದಿದ್ದು ಅವರನ್ನಷ್ಟೇ ಅಲ್ಲದೆ ಅಲ್ಲಿದ್ದವರನ್ನುಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ಕರಾವಳಿಯಲ್ಲಿ ಏನು ಆಗುತ್ತೆ ಅಂತ ಭಯ ಇತ್ತೋ ಅದು ಘಟಿಸಿತ್ತು.

ಆದರೆ ಆ ಕುಕ್ಕರ್ ಬಾಂಬ್ ಮಂಗಳೂರು ನಗರ ಪ್ರವೇಶಿಸಿ ಯಾವುದೋ ಜನ ನಿಬಿಡ ಪ್ರದೇಶ, ಶಾಲೆಗಳ ಪ್ರದೇಶಗಳಲ್ಲಿ ಆ ಶಾಕೀರಕೊಂಡಿ ಹೋಗಿ ಸ್ಪೋಟಿಸಿದ್ದರೆ ಅದರ ಪರಿಣಾಮ ಬಹುಷ ಯಾರು ಕೂಡ ಊಹಿಸಲಸಾಧ್ಯ.

ಅಂತಹ ಸಜೀವ ಸ್ಪೋಟಕಗಳಿಂದ ತುಂಬಿದ್ದ ಟೈಮರ್ ಫಿಕ್ಸ್ ಮಾಡಿದ್ದ ಕುಕ್ಕರ್ ಬಾಂಬ್ ಜೊತೆಯಲ್ಲಿ ಶಾಕಿರನನ್ನು ಕಾರಣಿಕದ ಗರಡಿಕ್ಷೇತ್ರದ ಅವಳಿ ವೀರರು ಆಚೆಗೆ ದಾಟಿ ಬರಲು ಬಿಡದೇ ಮೊದಲೇ ಸ್ಪೋಟಗೊಂಡಿದ್ದು ದೈವ ಸಂಕಲ್ಪವಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಮುಂದಿನ ದಿನಗಳಲ್ಲಿ ಮಗಳ ಮದುವೆಯನ್ನು ಎದುರುನೋಡುತ್ತಿದ್ದ ಪುರುಷೋತ್ತಮರ ಸ್ಥಿತಿ ಅವರ ಕುಟುಂಬಸ್ಥರ ಮನಸ್ಸನ್ನು ತಲ್ಲಣಗೊಳಿಸಿದೆ.

ಸಂಸಾರಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದ ಪುರುಷೋತ್ತಮರು ಇದೀಗ ಸ್ಪೋಟಗಳ ಗಾಯಗಳಿಂದ ಆಸ್ಪತ್ರೆಯ ಹಾಸಿಗೆ ಮೇಲೆಮಲಗಿದ್ದಾರೆ.AF4180AF 338A 4871 8834 6FDB43C244A5

ಆಟೋ ಚಾಲಕ ಪುರುಷೋತ್ತಮ್ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರೂ ಅಪಾರ ದೈವಭಕ್ತ. ಮಹಾಕಾಳಿ ಮತ್ತು ಕೊರಗಜ್ಜ ದೈವದಭಕ್ತ ಕೂಡಾ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ. ಇವರು ದುರಂತದಲ್ಲಿ ಪಾರಾಗಲು ಉಜ್ಜೋಡಿಯ ಮಹಾಕಾಳಿಕೊರಗಜ್ಜ ದೈವಗಳೇ ಕಾರಣ ಅಂತ’ ಪತ್ನಿ ಚಿತ್ರಾಕ್ಷಿ ಕಣ್ಣೀರಿಟ್ಟಿದ್ದಾರೆ.


Leave a Reply

Your email address will not be published. Required fields are marked *