08/08/2026

ಪಡಿತರ ಅಕ್ಕಿ ತೆಗೆದುಕೊಂಡು ಹೋಗಲು ವಾಹನ ಇಲ್ಲದೆ ಪರದಾಡುತ್ತಿದ್ದ ಸಾರ್ವಜನಿಕರಿಗೆ ನೇರವಾದ ಕಿರಣ್ ಪೂಜಾರಿ

0

ಪಡಿತರ ಅಕ್ಕಿ ತೆಗೆದುಕೊಂಡು ಹೋಗಲು ವಾಹನ ಇಲ್ಲದೆ ಪರದಾಡುತ್ತಿದ್ದ ಸಾರ್ವಜನಿಕರಿಗೆ ನೇರವಾದ ಕಿರಣ್ ಪೂಜಾರಿ

ಕುಂದಾಪುರ : ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟದ ನಿಯಮವಳಿ ಸರಕಾರ ಜಾರಿಗೆ ತಂದಿದೆ. ವಾಹನ ರಸ್ತೆಗೆ ಇಳಿದರೆ ವಾಹನಮುಟ್ಟುಗೋಲು, ನಡುವೆ ಕೆಲವೊಂದು ಕೋವಿಡ್ ಸೊಂಕಿತರ ಮನೆಗೆ ದಿನ ಬಳಕೆಯ ಸಾಮಾನು, ಅಗತ್ಯ ವಸ್ತುಗಳನ್ನುಪತ್ರಕರ್ತ ಕಿರಣ್ ಪೂಜಾರಿ ಬೈಕ್ ಮೂಲಕ ಅವರ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಅಲ್ಲದೆ ಇಂದು ಸರಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿ ನೀಡುತ್ತಿದ್ದ ಮಾಹಿತಿ ತಿಳಿದು ಜನ ಪಡಿತರ ಪಡೆದು, ಅದನ್ನುಒಯ್ಯಲು ಪರದಾಟ ನಡೆಸುತ್ತಿದ್ದನ್ನು ನೋಡಿ ತನ್ನ ಬೈಕ್ ನಲ್ಲಿ ಅವರ ಮನೆಗೆ ಪಡಿತರ ಅಕ್ಕಿ ಸಾಗಿಸಲು ನೇರವಾಗಿದ್ದಾರೆ. ಕಳೆದಬಾರಿಯ ಲಾಕ್ ಡೌನ್ ನಲ್ಲಿ ಸಹ ಸಾಕ್ಷಷ್ಟು ಜನಪರ ಕೆಲಸ (ಫುಡ್ ಕಿಟ್, ಹಿರಿಯ ನಾಗರಿಕರಿಗೆ ಔಷಧಿ ಪೊರೈಕೆ, ಆಶಾಕಾರ್ಯಕರ್ತಜೊತೆ ಕೋವಿಡ್ ಜಾಗೃತಿ, ಆಶಕ್ತರಿಗೆ ಊಟ) ನೀಡಿರುವ ಕಿರಣ್ ಪೂಜಾರಿಯವರು ಎಲ್ಲಿಯೂ ಪ್ರಚಾರಕ್ಕೆ ಸಿಗದೇ ತನ್ನ ಕೆಲಸಮಾಡಿದವರು. ಈಗ ಮತ್ತೊಮ್ಮೆ ಕೋವಿಡ್ ಸಂಕಷ್ಟದಲ್ಲಿ ಸ್ಥಳಿಯ ನಾಗರಿಕರ ನೆರೆವಿಗೆ ನಿಂತಿದ್ದಾರೆ.

: ಪುರುಷೋತ್ತಮ್

 

www.billavawarriors.com


Leave a Reply

Your email address will not be published. Required fields are marked *