ಸಂಬಳವಿಲ್ಲದೆ ದುಡಿಯುತ್ತಿದ್ದಾರೆ ಪುತ್ತೂರು ಉಪ ವಲಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ

0

ಸರಕಾರಿ ಅಧಿಕಾರಿಯೋರ್ವರನ್ನು ವೈಯಕ್ತಿಕ ಧ್ವೇಷಕ್ಕೆ ಅಮಾನತು ಮಾಡಿ, ಸಂಬಳ ನೀಡದೇ ಸತಾಯಿಸುತ್ತಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.306051E0 4434 4A2D 9369 B660A190724F E1631977696839
ಪುತ್ತೂರು ಉಪ ವಲಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ಅವರನ್ನು ಹಿರಿಯ ಅಧಿಕಾರಿಗಳು ಸರಿಯಾದ ಕಾರಣವಿಲ್ಲದೇ ಅಮಾನತು ಮಾಡಿದ್ದರು. ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಅಧಿಕಾರಿ ಸಂಜೀವ್‌ ರಾಜ್ಯ ಆಡಳಿತ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣವು ಪುತ್ತೂರು ಉಪ ವಲಯಾಧಿಕಾರಿ ಪರವಾಗಿ ತೀರ್ಪು ನೀಡಿತ್ತು.ಆದಾಗ್ಯೂ, ಹಿರಿಯ ಅಧಿಕಾರಿಗಳು ಸಂಬಳ ನೀಡಿದೇ ಮತ್ತೆ ಸತಾಯಿಸುತ್ತಿದ್ದಾರೆ. ಈ ಮೂಲಕ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ನನಗೆ ಮೇಲಾಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ವೈಯಕ್ತಿಕ ಧ್ವೇಷದಿಂದಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಸಂಜೀವ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ


Leave a Reply

Your email address will not be published. Required fields are marked *