ಹಲವು ಸಂಸ್ಥೆಗಳ ಸರದಾರ,ಬಡವರ ಪಾಲಿಗೆ ಸೇವಕ,ನೊಂದ ಜೀವಕ್ಕೆ ಆಸರೆಯಾಗುವ ಸಮಾಜ ಸೇವಕ ಚಂದ್ರಶೇಖರ್ ಬಿ.ಸಿ ರೋಡ್

0

ಚಂದಿರನು ಹೇಗೆ ಮುಸ್ಸಂಜೆಯ ಹೊತ್ತಿಗೆ ಮೂಡುತ್ತ ಕತ್ತಲಾದ ಜಗತ್ತಿಗೆ ಬೆಳಕನ್ನು ಕೊಡುತ್ತಾನೋ ಹಾಗೆಯೇ ಕಷ್ಟದಲ್ಲಿರುವ,ದುಃಖದಲ್ಲಿರುವ, ನೊಂದ ಜೀವದ ಜೀವನಕ್ಕೆ ಬೆಳಕನ್ನು ಚೆಲ್ಲುತ್ತ,ತನ್ನಲ್ಲಿಗೆ ಬರುವ ಬಡ ಜೀವಿಯ ಕಣ್ಣೋರೊಸುವ ಸೇವಕನಾಗಿರುವ,ಕಲಾವಿದರನ್ನು ಪ್ರೋತ್ಸಾಹಿಸುತ್ತ ಕಲಾ ಸೇವೆಯನ್ನು ಮಾಡುತ್ತಿರುವ, ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಮಾಜ ಸೇವಕ ಚಂದ್ರಶೇಖರ್ ಬಿ.ಸಿ ರೋಡ್.

IMG 20200830 WA0016

ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಕರ್ವೆಲ್ ನ ಮೋನಪ್ಪ ಪೂಜಾರಿ ಮತ್ತು ಸುಶೀಲ ದಂಪತಿಗಳ ಎಂಟು ಜನ ಮಕ್ಕಳಲ್ಲಿ ಮೊದಲನೇಯ ಮಗನಾಗಿ ಹುಟ್ಟಿದರು.ಇವರದ್ದು ಆರು ಜನ ಸಹೋದರಿಯರ ಸುಂದರ ಸಂಸಾರ.

ಬಡ ಕುಟುಂಬದಲ್ಲಿ ಇದ್ದ ಕಾರಣ ವಿದ್ಯಾಭ್ಯಾಸ ಮಾಡಲು ತುಂಬಾ ಕಷ್ಟಪಟ್ಟ ಇವರು ಮನೆ ಕೆಲಸಕ್ಕೆ ಹೋಗಿ ತನ್ನ ಕೈಲಾದಷ್ಟು ಹಣವನ್ನು ಕೂಡಿಸುತ್ತ ಮತ್ತು ತಾಯಿಯ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಕಲಿಕೆಯಲ್ಲಿ ಮುಂದು ಇದ್ದ ಇವರು ಹತ್ತನೇ ತರಗತಿಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದುಕೊಂಡು ಶಾಲೆಗೆ ಮತ್ತು ತನ್ನ ಊರಿಗೆ ಕೀರ್ತಿ ತಂದು ಕೊಡುವಲ್ಲಿ ಯಶಸ್ವಿಯಾಗುತ್ತಾರೆ.
ಆದರೆ ಪ್ರಥಮ ಶ್ರೇಣಿಯನ್ನು ಪಡೆದ ಚಂದ್ರಣ್ಣನಿಗೆ ದೊಡ್ಡ ಅಘಾತ ಒಂದು ಎದುರಾಯಿತು.

IMG 20200830 WA0013I

ವಿದ್ಯಾಭ್ಯಾಸವನ್ನು ಮುಂದುವರಿಸುವ ಉತ್ಸಾಹದಲ್ಲಿ ಇದ್ದ ಇವರಿಗೆ,ಆಕಸ್ಮಿಕವಾಗಿ ತನ್ನ ತಂದೆಯು ತೆಂಗಿನ ಮರದಿಂದ ಬಿದ್ದು ಆಸ್ಪತ್ರೆಯ ಪಾಲಗುತ್ತಾರೆ ಮತ್ತು ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿಯೇ ಕಳೆದ ಚಂದ್ರಣ್ಣ ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಕೊನೆಗೊಳಿಸಬೇಕಾಗುತ್ತದೆ.ಕಲಿಯಲ್ಲಿ ಮುಂದು ಇದ್ದರು ವಿಧಿ ಅವರನ್ನು ವಿದ್ಯಾಭ್ಯಾಸವನ್ನು ಮುಂದುವರಿಸಲು ಬಿಡಲಿಲ್ಲ.

IMG 20200830 WA0015ತದನಂತರ ಆರು ಜನ ಸಹೋದರಿಯರು ಇರುವ ಕುಟುಂಬದ ಸಂಪೂರ್ಣ ಜವಾಬ್ದಾರಿ ಇವರ ಮೇಲೆ ಬಿದ್ದಾಗ ದೃತಿಗೆಡದ ಇವರು ಸ್ನೇಹಿತರ ಸಹಾಯದಿಂದ ಮಂಗಳೂರಿನ ಮೋತಿ ಮಹಲ್ ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಾರೆ ಆದರೆ ಒಂದು ಕಡೆ ಅಕ್ಕಂದಿರ ಮದುವೆಯ ಜವಾಬ್ದಾರಿ,ಇನ್ನೊಂದು ಕಡೆ ತಾಯಿಯ ಕನಸ್ಸುಗಳನ್ನು ಈಡೆರಿಸಬೇಕಾದರೆ ಸಣ್ಣ ಪುಟ್ಟ ಸಂಬಳದ ಕೆಲಸದಿಂದ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅರಿತ ಚಂದ್ರಣ್ಣ,ಹೋಟೆಲಿನಲ್ಲಿ ಕೆಲಸ ಮಾಡುತ್ತಲೇ ಬೆಳಗೆದ್ದು ಸೈಕಲ್ ನಲ್ಲಿ ಮನೆಮನೆಗೆ ಪೇಪರ್ ಹಾಕುತ್ತಾ, ಹಣವನ್ನು ಸೇರಿಸುತ್ತ, ತನ್ನ ದೊಡ್ಡ ಅಕ್ಕನ ಮದುವೆಯನ್ನು ಮುಗಿಸುತ್ತಾರೆ.

ಚಿಕ್ಕಂದಿನಿಂದಲೇ ವಿದೇಶಕ್ಕೆ ಹೋಗುವ ಕನಸು ಕಂಡಿದ್ದರು ಚಂದ್ರಣ್ಣ ಮತ್ತು ಅದು ನನಸು ಆಗುವ ಹೊತ್ತಿಗೆ ಅದರಿಂದ ದೊಡ್ಡ ಮೋಸ ಹೋಗುತ್ತಾರೆ. ವಿದೇಶದಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ಮನೆಯಿಂದ ಹೊರಟು ಮುಂಬೈಗೆ ಹೋಗುತ್ತಾರೆ. ಆದರೆ ಚಂದ್ರಣ್ಣನಿಗೆ ಕೆಲಸ ದೊರಕಿಸಿ ಕೊಡುವ ನೆಪದಲ್ಲಿ ಏಜೆಂಟ್ ಸಂಸ್ಥೆಯೊಂದು ಸುಮಾರು ಏಳು ಲಕ್ಷದವರೆಗೆ ಚಂದ್ರಣ್ಣನ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಮೋಸ ಮಾಡುತ್ತಾರೆ. ಬಹಳ ಕಷ್ಟದಿಂದ,ಎಲ್ಲರ ಸಹಾಯದಿಂದ ಹಣವನ್ನು ಕೂಡಿಸಿದ್ದ ಇವರಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿದಾಗ ಚಂದ್ರಣ್ಣನಿಗೆ ಒಂದು ಕ್ಷಣ ಆಕಾಶವೆ ಮೈಮೇಲೆ ಬಿದ್ದಂತಾಯಿತು.

ಮನೆಯಿಂದ ವಿದೇಶಕ್ಕೆ ಹೊಗುದಾಗಿ ಹೇಳಿ ಬಂದಿರುವ ಚಂದ್ರಣ್ಣನಿಗೆ ಮುಂಬೈನಲ್ಲಿ ತನಗೆ ಮೋಸವಾಗಿದೆ ಎಂದು ತಿಳಿದಾಗ ದಿಕ್ಕೆ ತೊಚದಂತ್ತಾಯಿತು.ಒಂದು ಕಡೆ ಕೈನಲ್ಲಿ ಪಾಸ್ಪೋರ್ಟ್ ಇಲ್ಲ,ಈ ಕಡೆ ಮನೆಗೂ ಹೋಗುವಂತಿಲ್ಲ. ಇದೆಲ್ಲದರಿಂದ ಮಾನಸಿಕವಾಗಿ ಜರ್ಜರಿತವಾದ ಚಂದ್ರಣ್ಣ ಒಂದು ಕ್ಷಣ ಆತ್ಮಹತ್ಯೆ ಮಾಡುವ ಅಲೋಚನೆಯನ್ನೂ ಮಾಡಿದರು,ಆದರೆ ಎಲ್ಲವನ್ನೂ ಒಮ್ಮೆಲೇ ನೆನೆಪಿಸಿಕೊಂಡು, ಮನಸ್ಸನ್ನು ಗಟ್ಪಿ ಮಾಡಿಕೊಂಡು ಮುಂಬೈನಿಂದ ಮಂಗಳೂರಿಗೆ ಮರಲುತ್ತಾರೆ.

ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ನೋವು,ಕಷ್ಟಗಳನ್ನು ಅನುಭವಿಸಿದ ಚಂದ್ರಣ್ಣನಿಗೆ,ತನ್ನ ಆತ್ಮೀಯ ಸ್ನೇಹಿತ ರೋಷನ್ ತೊಕ್ಕೊಟ್ಟು ಅವರು ಅಫ್ಘಾನಿಸ್ಥಾನದಲ್ಲಿ ಕೆಲಸ ದೊರಕಿಸಿ ಕೊಡುವ ಭರವಸೆ ನೀಡುತ್ತಾರೆ,ಆದರೆ ವಿದೇಶ ಎಂದ ಕೂಡಲೇ ಚಂದ್ರಣ್ಣ ಒಂದು ಬಾರಿ ಗಾಬರಿಯಾದರು ಮತ್ತು ಅಫ್ಘಾನಿಸ್ಥಾನದಲ್ಲಿ ನಡೆಯುವ ತಾಲಿಬಾನಿಗರ ಅಟ್ಟಹಾಸ ವಿಷಯ ತಿಳಿದಿದ್ದ ಎಲ್ಲರೂ ಅಲ್ಲಿಗೆ ಹೋಗಬೇಡ ಎಂದು ಗದರಿಸಿದರು,ಆದರೆ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದನಿಗೆ ಭಯ ಅನ್ನೋದು ಬಹಳ ಕಡಿಮೆ ಇರುತ್ತದೆ.ಹಲವು ಕೆಲಸಗಳನ್ನು ಕಳೆದುಕೊಂಡಿದ್ದ ಇವರಿಗೆ ಮೈತುಂಬ ಸಾಲ,ಮನೆಯ ಬಡತನ,ಸಹೋದರಿಯರ ಮದುವೆ ಮಾಡಿಸುವ ಜವಾಬ್ದಾರಿ ಮತ್ತು ತಾಯಿಯ ಕನಸಿನ ಮುಂದೆ ಇದೆಲ್ಲವು ತುಂಬಾ ಸಣ್ಣದೆನಿಸಿತು.

ಹಾಗೆಯೇ ಅಫ್ಘಾನಿಸ್ಥಾನದಲ್ಲಿ ಹಲವಾರು ವರ್ಷಗಳಿಂದ ಕೆಲಸವನ್ನು ಮಾಡುತ್ತಾರೆ ಮತ್ತು ದಿನ ಕಳೆದಂತೆ ಇವರಿಗೆ ಅಪ್ಪಲಿಸಿದ ಕಷ್ಟಗಳು ದೂರವಾಗುತ್ತ ಬಂತು. ಮೈತುಂಬ ಸಾಲ ಇದ್ದ ಇವರು, ತನ್ನೆಲ್ಲ ಸಾಲವನ್ನು ಪ್ರಾಮಾಣಿಕದಿಂದ ಹಿಂತಿರುಗಿಸುತ್ತಾರೆ.ಕಷ್ಟ ಪಟ್ಟು ದುಡಿದು ತನ್ನ ಸಹೋದರಿಯರನ್ನು ಮದುವೆ ಮಾಡಿಸುತ್ತಾರೆ ಮತ್ತು ತಂಗಿಯ ಮದುವೆಯ ಮೆಹೆಂದಿಯ ಸಂದರ್ಭದಲ್ಲಿ ದುಂದು ವೆಚ್ಚ ಮಾಡದೆ, *ವಿಶ್ವ ಮಾತೇ ಭಾರತಿ* ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಹಲವಾರು ಸೇವಾ ಸಂಘಟನೆಗಳನ್ನು ಗುರುತಿಸಿ,ಅವರಿಗೆ ಗೌರವಾರ್ಪಣೆ ಮತ್ತು ಕಡು ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ವಿತರಿಸಿ ಎಲ್ಲರೂ ಮೆಚ್ಚುವಂತ ಕೆಲಸವನ್ನು ಮಾಡಿ ಮಾದರಿಯಾಗುತ್ತಾರೆ.

ಚಿಕ್ಕಂದಿನಿಂದಲೂ ಬಡತನದ ಬೇಗೆಯಲ್ಲಿ ನೊಂದ ಇವರಿಗೆ,ತಾಯಿಯು ಕಟ್ಟುತ್ತಿದ್ದ ಬೀಡಿಯಿಂದ ತುಂಬುತ್ತಿದ್ದ ಹೊಟ್ಟೆ,ಕಷ್ಟ,ನೋವುಗಳನ್ನು ಅರಿತ್ತಿದ್ದ ಇವರಿಗೆ ನೊಂದವರಿಗೆ ಆಸರೆಯಾಗಬೇಕೆನ್ನುವ ಹಂಬಲ ಮನದಲ್ಲಿ ಇತ್ತು.ಹಾಗೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳಂತೆ *ಮಾತೃಭೂಮಿ ಸೇವಾ ಫೌಂಡೇಶನ್ ಎನ್ನುವ ಮಂಗಳೂರು ಘಟಕವನ್ನು ಸ್ಥಾಪಿಸಿ,ಕಾರ್ಣಿಯ ಮುಕ್ತ ಭಾರತ,ವಿದ್ಯಾಭ್ಯಾಸಕ್ಕೆ ನೆರವು, ವೈದ್ಯಕೀಯ ನೆರವು, ಹೀಗೆ ಹಲವಾರು ಸೇವಾ ಕಾರ್ಯಗಳನ್ನು ಮಾಡಲು ಶುರುಮಾಡುತ್ತಾರೆ.

ತಾನು ಹುಟ್ಟಿ ಬೆಳೆದ ಊರಿನ ಸುತ್ತ ಮುತ್ತ ಇರುವ ಅಶಕ್ತರನ್ನು ನೋಡುತ್ತಿದ್ದ ಇವರಿಗೆ ಅವರ ಕಷ್ಟಗಳನ್ನು ನೀಗಿಸುವ,ಅವರ ಕಣ್ಣೀರೊರೆಸಬೇಕು ಎನ್ನುವ ಕನಸು ಕಂಡಿದ್ದ ಚಂದ್ರಣ್ಣ 2017 ಜೂನ್ 19 ರಂದು *ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್* ಸಮಾಜ ಸೇವೆಯ ಸಂಘವು ಉಗಮವಾಗುತ್ತದೆ.

ಇಷ್ಟೇ ಅಲ್ಲದೆ ವಿಶ್ವ ಬಿಲ್ಲವರ ಸೇವಾ ಚಾವಡಿ,ಸೇವಾ ಸಂಸ್ಥೆಗಳ ಮಹಾ ಸಂಗಮ ಮತ್ತು ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ* ಹೀಗೆ ಹಲವಾರು ಸಂಸ್ಥೆಗಳ ಸಂಸ್ಥಾಪಕರಾಗಿದ್ದಾರೆ. ಇನ್ನಿತರ ಹಲವಾರು ಸಂಸ್ಥೆಗಳ ಸಕ್ರಿಯ ಸದಸ್ಯನಾಗಿ ತೊಡಗಿಸಿಕೊಂಡು ತಾನು ದುಡಿದ ಒಂದು ಪಾಲು ಸಮಾಜ ಸೇವೆಗಾಗಿಯೇ ಮೀಸಲಿಟ್ಟ ಸಮಾಜ ಸೇವಕನಾಗಿದ್ದಾರೆ. ತನಗೆ ಎದುರಾಗುವ ಕಷ್ಟಗಳನ್ನು,ಅವಮಾನಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ಅದನ್ನೇ ಸನ್ಮಾನವನ್ನಾಗಿಸಿಕೊಂಡು ನಾಯಕನಾಗಿ ಮುನ್ನಡೆಯುತ್ತಿದ್ದಾರೆ.ತನಗೆ ಬಂದ ಕಷ್ಟ,ನೋವುಗಳನ್ನು ಧೈರ್ಯದಿಂದಲೆ ಎದುರಿಸಿ ಇಂದು ಸಮಾಜಮುಖಿ ನಾಯಕನಾಗಿ ಹೊರಹೊಮ್ಮಿದ್ದಾರೆ.

ಚಂದ್ರಣ್ಣ ಅದೆಷ್ಟೋ ಬಡವರಿಗೆ ಆಸರೆಯಾಗಿದ್ದಾರೆ,ವೈದ್ಯಕೀಯ ನೆರವು ನೀಡಿ ರೋಗಿಗಳ ಕಣ್ಣೋರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಲಾವಿದರ ಪಾಲಿಗೂ ಅಣ್ಣನಾಗಿ ಮೆರೆದ್ದಿದ್ದಾರೆ.

ಬಿಲ್ಲವ ಮಾಣಿಕ್ಯದಾತರ ಸೇವೆ ಸಮಾಗಮ ಎನ್ನುವ ಸಂಸ್ಥೆಯನ್ನು ರಚಿಸಿ ತೆರೆಮರೆಯಲ್ಲಿ ಇರುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಸದಾ ನೋವುಗಳನ್ನು ಅನುಭವಿಸಿಕೊಂಡು ಬಂದಿರುವ,ನಿಸ್ವಾರ್ಥ ಮನೋಭಾವ ಚಂದ್ರಣ್ಣನಿಗೆ ದೇವರು ಓಳಿತನ್ನು ಮಾಡಲಿ,ನಿಮ್ಮ ಈ ನಿಸ್ವಾರ್ಥ ಸೇವೆಗೆ ಎಲ್ಲರ ಆರ್ಶಿವಾದ ಸದಾ ಇರಲಿ,ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಗಲಿ,ಪುರಸ್ಕಾರಗಳು ನಿಮ್ಮ ಮಡಿಲಿಗೆ ಸೇರಲಿ, ದೈವ-ದೇವರುಗಳ ಕೃಪೆ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ

– ರಾಜೇಶ್ ಎಸ್ ಬಲ್ಯ


Leave a Reply

Your email address will not be published. Required fields are marked *