08/08/2026

ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳಕ್ಕೆ ವೇಷ ಭೂಷಣದ ಸಂಪೂರ್ಣ ವೆಚ್ಚ ನೀಡಿದ ಶ್ರೀ ಗಂಗಾಧರ ಪೂಜಾರಿ ದುಬೈ ಅವರ ಭಕ್ತಿಯ ಸೇವೆ

0

ಶ್ರೀ ಗೆಜ್ಜೆಗಿರಿ ಮೇಳದ ಗೆಜ್ಜೆ ಸೇವೆಗೆ ಶ್ರೀ ಗಂಗಾಧರ ಪೂಜಾರಿ ದುಬೈ ಅವರ ಭಕ್ತಿಯ ಸೇವೆ

ಸಮಾಜ ಸೇವಕರು, ಕೊಡುಗೈ ಧಾನಿಗಳೂ, ಬಿಲ್ಲವಾಸ್ ದುಬೈ ಹಿರಿಯ ಸದಸ್ಯರು, ಗೆಜ್ಜೆಗಿರಿ ಕ್ಷೇತ್ರದ ಮಹಾ ಪೋಷಕರೂ ಆದಶ್ರೀಯುತ ಗಂಗಾಧರ ಪೂಜಾರಿ ದುಬೈ ಅವರು ತುಳುನಾಡಿನ ಪ್ರಸಿದ್ಧ ಕ್ಷೇತ್ರ ಗೆಜ್ಜೆಗಿರಿಯಿಂದ ನೂತನ ಯಕ್ಷಗಾನ ಮೇಳವು 2022-23 ಗೆಜ್ಜೆ ಸೇವೆಯ ತಿರುಗಾಟಕ್ಕೆ ಸನ್ನದ್ದ ಗೊಳ್ಳುತ್ತಿರುವ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇದರ ಶ್ರೀಗೆಜ್ಜೆಗಿರಿ ಮೇಳಕ್ಕೆ ವೇಷ ಭೂಷಣದ ಸಂಪೂರ್ಣ ವೆಚ್ಚ ಸುಮಾರು 5ಲಕ್ಷದ ಐದು ಸಾವಿರ ರೂಪಾಯಿಯನ್ನು ಸೇವಾ ರೂಪದಲ್ಲಿಸಮರ್ಪಿಸಲಿರುವ ಶ್ರೀಯುತರಿಗೆ ದೇಯಿ ಬೈದೆತಿ ಕೋಟಿಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪರವಾಗಿ ಧನ್ಯವಾದಗಳು.

ಹಿಂದೆಯೂ ಕ್ಷೇತ್ರದ ಪುನರುತ್ಥಾನದ ಯೋಜನೆಗೆ ಸುಮಾರು 10 ಲಕ್ಷ, ಅನ್ನ ಪ್ರಸಾದಕ್ಕೆ 1ಲಕ್ಷ, ಗೆಜ್ಜೆಗಿರಿ ಮೇಳದ ಗೆಜ್ಜೆ ಸೇವೆಗೆ5.5ಲಕ್ಷ ಒಟ್ಟು 16 ಲಕ್ಷದ 5ಸಾವಿರ ಮೊತ್ತವನ್ನು ಸೇವಾ ರೂಪದಲ್ಲಿ ನೀಡಿ ಸಹಕರಿಸಿರುವ ಸೇವೆಯನ್ನು ಸ್ಮರಿಸುತ್ತ ಶ್ರೀಯುತರಜೀವನದ ಮುಂದಿನ ದಿನಗಳು ಸಂತೋಷದಾಯಕವಾಗಿರಲಿ, ವ್ಯಾಪಾರವ್ಯವಹಾರದಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯಲಿಶ್ರೀಯುತರಿಗೆ ಮತ್ತು ಇವರ ಕುಟುಂಬಕ್ಕೆ ಕ್ಷೇತ್ರದ ಸರ್ವ ಶಕ್ತಿಗಳು ನೆಮ್ಮದಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕ್ಷೇತ್ರದವತಿಯಿಂದ ನಮ್ಮ ಹಾರೈಕೆಗಳು.


Leave a Reply

Your email address will not be published. Required fields are marked *

You may have missed