ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳಕ್ಕೆ ಹೋಟೆಲ್ ಉದ್ಯಮ ಲೋಕದ ಸ್ಟಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯರಾಮ್ ಬನನ್ ಅವರ ಬಹು ದೊಡ್ಡ ಮೊತ್ತದ ಕೊಡುಗೆl

0

ಶ್ರೀ ಗೆಜ್ಜೆಗಿರಿ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಟಾಟಾ ಸಮೂಹದನೂತನ ಲಾರಿ ಸೇವೆ8AAD9B16 59DA 4991 8386 CE187E5C7A04 E1668073768192ಕೊಡುಗೈ ಧಾನಿಗಳೂ, ಸಮಾಜ ಸೇವಕರೂ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಗೌರವ ಸಲಹೆಗಾರರು, ಹೋಟೆಲ್ ಉದ್ಯಮಿ, ಸಾಗರ ರತ್ನಂ ಗ್ರೂಪ್ಸ್ MD, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸರಳ ಸಜ್ಜನಿಕೆಯ ಸಹೃದಯಿ ಶ್ರೀ ಜಯರಾಮ್ ಬನನ್ಅವರಿಂದ ಶ್ರೀ ಗೆಜ್ಜೆಗಿರಿಯ ನೂತನ ಯಕ್ಷಗಾನ ಮೇಳದ ಮಾತೆ ಅಮ್ಮನವರ ಗೆಜ್ಜೆ ಸೇವೆಯ ತಿರುಗಾಟಕ್ಕೆ ಸುಮಾರು 25 ಲಕ್ಷರೂಪಾಯಿ ಮೊತ್ತದ ನೂತನ ಲಾರಿಯ ಸೇವೆಯ ರೂಪದಲ್ಲಿ ಶ್ರೀ ದೇಯಿ ಬೈದೆತಿ ಕೋಟಿಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರಗೆಜ್ಜೆಗಿರಿಗೆ ಸಮರ್ಪಿಸಲಿದ್ದಾರೆ.

ದಿನಾಂಕ 27-11-2022 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅದ್ದೂರಿಯಾಗಿ ಜರುಗುವ ನೂತನ ಮೇಳದ ಉದ್ಘಾಟನೆ ಹಾಗೂಪ್ರಥಮ ದೇವರ ಸೇವೆಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಶ್ರೀಯುತರ ಭಕ್ತಿಯ ಸೇವೆಗೆ ಶ್ರೀಯುತರಿಗೆ ಇನ್ನಷ್ಟು ಕಾಲ ಸರ್ವರ ಹಾರೈಕೆಗಳೊಂದಿಗೆ ಆಯುರಾರೋಗ್ಯ ಸುಖ, ಶಾಂತಿನೆಮ್ಮದಿಯ ಜೀವನವನ್ನು ಭಗವಂತನು ಹಾಗು ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ದೇಯಿ ಬೈದೆತಿಕೋಟಿಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಗೆಜ್ಜೆಗಿರಿ ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಪರವಾಗಿಧನ್ಯವಾದಗಳು.


Leave a Reply

Your email address will not be published. Required fields are marked *