ಯುವವಾಹಿನಿ (ರಿ) ಬೆಂಗಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

0

ಯುವವಾಹಿನಿ (ರಿ) ಬೆಂಗಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಬಸವೇಶ್ವರನಗರದ ಪಿವಿಪಿಸ್ಕೂಲ್ ನಲ್ಲಿ ತಾ.13 ನವೆಂಬರ್ 2021 ಶನಿವಾರದಂದು ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ ಬಹಳ ಅದ್ದೂರಿಯಾಗಿಆಚರಿಸಲಾಯಿತು.9C82ADEF AE53 4D37 8549 F1CD492E9260 E1636873389628

ಮಕ್ಕಳೆಲ್ಲರೂ ಸೇರಿ ನಾಡಗೀತೆಯನ್ನು ಹಾಡಿ, ಶ್ರೀ ನಾರಾಯಣ ಗುರುಗಳ ಹಾಗೂ ನೆಹರೂ ಭಾವಚಿತ್ರಕ್ಕೆ ಪೂಜೆಯನ್ನುಸಲ್ಲಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮವನ್ನು ಘಟಕದ ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾದ ಶ್ರೀಮತಿ ಅನಿತಾಕಮಲಾಕ್ಷ  ಜೊತೆ ಕಾರ್ಯದರ್ಶಿ ಶ್ರೀಮತಿ ಅಕ್ಷತಾ ಸುಧೀರ್ ಇವರು ಮುನ್ನಡೆಸಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನುನಡೆಸಿಕೊಟ್ಟರು.

ಬಳಿಕ ಪ್ರೇರಕ ವಾಗ್ಮಿ ಶ್ರೀ ರಾಜೇಶ್ ಗೋಪೆ ಇವರು ಮಕ್ಕಳಿಗಾಗಿ ವಿವಿಧ ಪ್ರೇರೇಪಣಾ ಚಟುವಟಿಕೆಗಳನ್ನು ನಡೆಸಿ ಮಕ್ಕಳೊಂದಿಗೆಹಾಡಿ ಕುಣಿದರಲ್ಲದೆ ಮಕ್ಕಳೆಲ್ಲರನ್ನೂ ಧ್ಯಾನಾಸಕ್ತರನ್ನಾಗಿಸಿದರು.52869EFC EF74 4E1C B841 4863425354FC E1636873445426

11.30ರ ಸುಮಾರಿಗೆ ಸಭಾ ಕಾರ್ಯಕ್ರಮವು ಆರಂಭಗೊಂಡಿತು. ಪಿವಿಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಾಲೈವೇಣಿ ಅವರು ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಉದ್ಘಾಟಕರಾದ ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ. ಅವರು ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ಕಾರಿ ಶಾಲೆಯಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನುನೆನಪಿಸಿಕೊಂಡು ಶಾಲಾಮಕ್ಕಳಿಗೆ ಉತ್ತಮ ನಡವಳಿಕೆಯ ಕಿವಿಮಾತುಗಳನ್ನಾಡಿದರು.217BB0EE 6DE1 4A62 97C9 101C144BB4E3 E1636873501841

ಪಿವಿಪಿ ಶಾಲೆಯ ವಿದ್ಯಾಧಿಕಾರಿಗಳಾದ ಶ್ರೀ ಸೋಮಶೇಖರ್ ಅವರು ಮಾತನಾಡಿ ಯುವವಾಹಿನಿಯ ಸಮಾಜ ಸೇವಾಕಾರ್ಯಗಳನ್ನು ಶ್ಲಾಘಿಸಿದರು.

ಬಳಿಕ ಡಾ. ಉಷಾ ಮೋಹನ್ ಮತ್ತು ಬಿರುವೆರ್ ಕುಡ್ಲ ಮಂಗಳೂರು ಇವರ ಸಹಯೋಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಶೂವಿತರಣೆಯನ್ನು ಮಾಡಲಾಯಿತು.

ಮಕ್ಕಳಿಂದ ಹಾಗೂ  ಘಟಕದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಕೂಡ ನಡೆಸಲಾಯಿತು.DBB92DF4 2266 46E9 A92C A1DA93897048 E1636873550431

ಅತಿಥಿಗಳಾಗಿ ಆಗಮಿಸಿದ ಬಿಗ್ ಬಾಸ್ ಸ್ಪರ್ಧಿಗಳಾದ ಶ್ರೀ ಧನರಾಜ್ ಮತ್ತು ಶ್ರೀ ಶಮಂತ್ ( ಬ್ರೋ ಗೌಡ) ಇವರು ಮಾತನಾಡಿಮಕ್ಕಳನ್ನು ಮನರಂಜಿಸಿದರು.

ಪತ್ರಕರ್ತರಾದ ಶ್ರೀ ನವೀನ್ ಸೂರಿಂಜೆ ಯವರು ಕೂಡ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಹಿತವಚನ ಗಳನ್ನಾಡಿದರು.

ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ನೆ ಲ ನರೇಂದ್ರಬಾಬು ಅವರು ಮುಖ್ಯ ಅತಿಥಿಯ ಭೂಮಿಕೆಯಲ್ಲಿ ಮಾತನಾಡಿ ಪಿವಿಪಿ ಶಾಲೆಯಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ಸ್ಮರಿಸಿಕೊಂಡು, ಯುವವಾಹಿನಿ ಯಂತಹ ಸಂಘಟನೆಗಳುಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ  ಬರಬೇಕೆಂದು ಪ್ರೇರೇಪಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.4B0FCAAE F9FC 4A7A 9D1B 18568B9BCD99 E1636873594499

ಕಾರ್ಯಕ್ರಮದ ಅಧ್ಯಕ್ಷರು ನೆಲೆಯಲ್ಲಿ ಮಾತನಾಡಿದ ಶ್ರೀ ರಾಘವೇಂದ್ರ ಪೂಜಾರಿ ಅವರು ಈ ಮಕ್ಕಳ ದಿನಾಚರಣೆ ಕಾರ್ಯಕ್ರಮದಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು.

ಕಾರ್ಯಕ್ರಮದ ಗಣ್ಯ ಅತಿಥಿಗಳ ಸಾಲಿನಲ್ಲಿ ಶ್ರೀ ಪಿವಿಪಿ ಪಿಯು ಕಾಲೇಜಿನ ಪ್ರಾಂಶುಪಾಲರಾದ  ಶ್ರೀ ಪ್ರಕಾಶ್ ಎಸ್, ಯುವವಾಹಿನಿಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಅಶೋಕ್ ಕುಮಾರ್ ಪಡ್ಪು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸುಧೀರ್ಪೂಜಾರಿ, ಹಾಗೂ ಯುವವಾಹಿನಿ ಬೆಂಗಳೂರು ಘಟಕದ ಸಲಹೆಗಾರರಾದ ಶ್ರೀ ರಘು ಮಟ್ಟು ಇನ್ನಿತರರು ಭಾಗವಹಿಸಿದ್ದರು.

ಎಲ್ಲಾ ಗಣ್ಯ ಅತಿಥಿಗಳಿಗೆ ಪುಸ್ತಕ ನೀಡುವ ಮೂಲಕ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿಗಳಾದ ಶ್ರೀ ಶಶಿಧರ ಕೋಟ್ಯಾನ್ ಇವರು ಮಕ್ಕಳಿಗೆ 1098 ಮಕ್ಕಳ ಸಹಾಯವಾಣಿಯಮಾಹಿತಿಯನ್ನು ಒದಗಿಸಿಕೊಟ್ಟು ನೆರೆದ ಅತಿಥಿಗಳಿಗೆ ಹಾಗೂ ಶಾಲೆಯ ಆಡಳಿತ ವರ್ಗ, ಶಿಕ್ಷಕ ವರ್ಗಕ್ಕೆ ಮತ್ತು ಮಕ್ಕಳಿಗೆ ಹೃತ್ಪೂರ್ವಕಧನ್ಯವಾದಗಳನ್ನು ಸಮರ್ಪಿಸಿದರು.

ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು,

ಯುವವಾಹಿನಿ (ರಿ)  ಬೆಂಗಳೂರು ಘಟಕ


Leave a Reply

Your email address will not be published. Required fields are marked *