ಮಾನಹಾನಿ ಪ್ರಕರಣ ಆರೋಪಿಗಳನ್ನು ಬಂಧಿಸುವಲ್ಲಿ ಯಾಕೆ ಪೊಲೀಸ್ ಇಲಾಖೆ ವಿಫಲ? -ಪದ್ಮರಾಜ್ ಆರ್.

0

ಹೆಣ್ಣುಮಕ್ಕಳನ್ನು ಭಾರತದಲ್ಲಿ ಪೂಜನೀಯ ಭಾವನೆಯಲ್ಲಿ ನೋಡುತ್ತೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾಕುಳಾಯಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಮಾನಹಾನಿಕಾರವಾಗಿ ಬರೆದಿರುವ ಆರೋಪಿಗಳನ್ನು ಇನ್ನೂಬಂಧಿಸಿಲ್ಲ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡಸುವಂತೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ಖುದ್ದಾಗಿ ದೂರನ್ನೂನೀಡಲಾಗಿದೆ. ಹಲವಾರು ಸಂಘಟನೆಗಳಿಂದ ಆಗ್ರಹಗಳೂ ಕೇಳಿ ಬಂದಿವೆ. ಇಷ್ಟಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ಇಲಾಖೆ ದುರ್ಬಲ ಆಗಿದೆಯೇ? 00FC2322 47F9 43E1 8530 B7B190F147A3ಆರೋಪಿಯನ್ನು ಬಂಧಿಸಲು ಯಾಕೆ ಮೀನಮೇಷ ಎನಿಸುತ್ತಾರೆ? ಪ್ರಕರಣವನ್ನು ಇಡೀ ಸಮಾಜಗಮನಿಸುತ್ತಿದೆ. ಪ್ರಕರಣ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಿದೆ. ಪ್ರತಿಭಾ ಕುಳಾಯಿ ಮಾತ್ರವಲ್ಲ ಯಾವುದೇ ಹೆಣ್ಣುಮಕ್ಕಳಿಗೆ ರೀತಿಯ ದೌರ್ಜನ್ಯವಾದರೆ, ಸೂಕ್ತ ಕ್ರಮ‌ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಬಗ್ಗೆ ಯಾಕೆ ಸರ್ಕಾರ ಮೌನ ವಹಿಸಿದೆ?. ಸಣ್ಣಪುಟ್ಟ ಘಟನೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ಯಾಕೆ ಮೌನವಹಿಸಿದೆ?

ಪದ್ಮರಾಜ್ ಆರ್.

ವಕೀಲರು ಮತ್ತು ಸಾಮಾಜಿಕ ಚಿಂತಕರು ಮಂಗಳೂರು


Leave a Reply

Your email address will not be published. Required fields are marked *