ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..

0

ಬಿಲ್ಲವ ಸಮಾಜ ಬಂಧುಗಳೇ,

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ ನಿಂತಿರುವಂಥದ್ದು. ಆದರೆ ಕೆಲ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಕಾರಣ ಅಂಥವರನ್ನು ಗುರುತಿಸುವ ಜವಾಬ್ದಾರಿ ನಮ್ಮದು. ಸಾಧಕರ ಜೊತೆಗೆ ಸಂಕಷ್ಟದಲ್ಲಿರೋ ಸಮಾಜದ ಬಂಧುಗಳ ಬದುಕಿನ ಮೇಲೂ ಬೆಳಕು ಚೆಲ್ಲಬೇಕಾದ ಮತ್ತೊಂದು ಕಾರ್ಯವೂ ಅಗಬೇಕಿದೆ. ಕಷ್ಟದಲ್ಲಿರೋ ಬಿಲ್ಲವ ಬಂಧುಗಳಿಗೆ ನೆರವಿನ ಹಸ್ತ ಚಾಚುವ ಸಮಾಜಮುಖಿ ಉದ್ದೇಶವೂ ಇದೆ. ಅಂಥವರನ್ನು ಗುರುತಿಸಿ ಸಮಾಜದ ಮುಂದಿಟ್ಟರೆ ಅವರ ಬದುಕು ಹೊಸ ಬೆಳಕು ಕಾಣಬಹುದು ಅನ್ನೋ ನಂಬಿಕೆ ನಮ್ಮದು. ಹೀಗೆ ಬಿಲ್ಲವ ಸಮಾಜದ ಸಮಗ್ರ ವಸ್ತು-ವಿಚಾರಗಳ ಅನಾವರಣಕ್ಕೆ ನಾವು ಹೊಸ ವೇದಿಕೆಯೊಂದನ್ನು ಕಲ್ಪಿಸುತ್ತಿದ್ದೇವೆ. BILLAVA WARRIORS LOGO1a..’ ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಮ್ಮವರನ್ನು ತಲುಪಲು ಮತ್ತು ನಮ್ಮವರ ಸಾಧನೆಯ ಜೊತೆಗೆ ಸಮಗ್ರ ಮಾಹಿತಿಗಳನ್ನು ಅನಾವರಣಗೊಳಿಸಲು ಬಿಲ್ಲವಾಸ್ ವಾರಿಯರ್ಸ್ ತಂಡ ನಿಮ್ಮೆದುರು ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಮೂಲಕ ನಮ್ಮ ಸಮಾಜ ಬಂಧುಗಳನ್ನು ತಲುಪುವ ಉದ್ದೇಶ ನಮ್ಮದು. ನಮ್ಮವರ ಸಾಧನೆ, ಅಭಿವೃದ್ಧಿ, ಸಂಕಷ್ಟ, ನೆರವು, ಗೆಲುವು, ಜವಾಬ್ದಾರಿ, ಪ್ರತಿಭೆ…ಹೀಗೆ ಎಲ್ಲವಕ್ಕೂ ಒಂದೇ ವೇದಿಕೆಯಾಗಲಿದೆ ‘ಬಿಲ್ಲವಾಸ್ ವಾರಿಯರ್ಸ್‌’ …ನಮ್ಮೊಳಗಿನ ಯಾವುದೇ ಕ್ಷೇತ್ರದ ವಾರಿಯರ್ಸ್‌ಗಳನ್ನೂ ಸಮಾಜದ ಮುಂದೆ ಪರಿಚಯಿಸುವ ಜೊತೆಗೆ ಅಧ್ಯಯನ, ಕಾರ್ಯ, ಕಲ್ಪನೆಗಳನ್ನು ಒಂದುಗೂಡಿಸಿ ಸಾಮಾಜಿಕ ತಾಣಗಳ ಮೂಲಕ ಸಮಾಜದ ಮುಂದಿಟ್ಟು ಫಲಿತಾಂಶ ಪಡೆಯುವ ಹಂಬಲ ನಮ್ಮದು..ಬಿಲ್ಲವ ಬಂಧುಗಳೇ ಕೈ ಜೋಡಿಸಿ, ನೀವೂ ಬರೆಯಿರಿ, ಮಾಹಿತಿ ಹಂಚಿಕೊಳ್ಳಿ…ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ,ಲೈಕ್ ಮಾಡಿ…

ಧನ್ಯವಾದಗಳು
ಟೀಂ ಬಿಲ್ಲವಾಸ್ ವಾರಿಯರ್ಸ್‌

ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಲಿಂಕ್

Follow us on Instagram

Username: billavaswarriors
https://www.instagram.com/billavaswarriors

Follow Facebook Page:
https://m.facebook.com/billavawarriors/

www.billavasworriors.com


Leave a Reply

Your email address will not be published. Required fields are marked *