ಬಿಲ್ಲವ ಜನಾಂಗದ ಮೂರ್ತೆದಾರರು, ಗರಡಿ ಅರ್ಚಕರು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಪರಿಹಾರ ನೀಡುವಂತೆ ಬಿ.ಎನ್.ಶಂಕರಪೂಜಾರಿ ಮನವಿ.

0

ಪ್ರಸಾರ ಮತ್ತು ಪ್ರಕಟಣೆಯ ಕೃಪೆಗಾಗಿ.

ಬಿಲ್ಲವ ಜನಾಂಗದ ಮೂರ್ತೆದಾರರು, ಗರಡಿ ಅರ್ಚಕರು, ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಪರಿಹಾರ ನೀಡುವಂತೆ  ಬಿ.ಎನ್.ಶಂಕರಪೂಜಾರಿ ಮನವಿ.08FC3F6A 46DD 496C BCB8 D063770BC988 E1622995323949

ಶೇಂದಿ ತೆಗೆದು ಬದುಕುವ ಬಿಲ್ಲವ/ಈಡಿಗ ಜನಾಂಗದ ಮೂರ್ತೆದಾರಿಕೆ ಕಸುಬು ಲಾಕ್ ಡೌನ್ ನಿಂದಾಗಿ ಸಂಪೂರ್ಣ ನಿಂತುಹೋಗಿದ್ದು, ಮೂರ್ತೆದಾರರ ಕುಟುಂಬಗಳು ಅನಾಥವಾಗಿವೆ. ಬಿಲ್ಲವ ಜನಾಂಗದ ಆರಾಧ್ಯ ದೇವರುಗಳಾದ ಕೋಟಿಚೆನ್ನಯ್ಯಗರಡಿಗಳಲ್ಲಿ ಪೂಜೆ ಮಾಡುವ ಗರಡಿ ಅರ್ಚಕರು, ದರ್ಶನ ಪಾತ್ರಿಗಳು ಇನ್ನಿತರ ಸಿಬ್ಬಂದಿಗಳು ಇತರ ದೇವಸ್ಥಾನಗಳ ಸಿಬ್ಬಂದಿಗಳಂತೆಸಂಕಷ್ಟದಲ್ಲಿದ್ದು, ರಾಜ್ಯ ಸರಕಾರ ಇವರ ನೆರವಿಗೆ ಬರಬೇಕಾಗಿದೆ. ಮೂರ್ತೆದಾರರ ಸಹಕಾರಿ ಸಂಘಗಳಲ್ಲಿ ಸ್ವಸಹಾಯ ಸಂಘವನ್ನುರಚನೆ ಮಾಡಿಕೊಂಡಿರುವ  40 ಸಾವಿರಕ್ಕೂ ಮಿಕ್ಕಿದ ಸದಸ್ಯೆಯರು ನಿರುದ್ಯೋಗಿಗಳಾಗಿದ್ದರೆ, ಈಡಿಗ/ಬಿಲ್ಲವರ ಕುಲಕಸುಬುಸ್ಥಬ್ದವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು, ಸಂಸದರು, ಸಚಿವರ ಸಹಿತ ಸರ್ವರು ಬಿಲ್ಲವ ಜನಾಂಗದ ಬಗ್ಗೆಗಮನ ಹರಿಸಿ, ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತಂದು, ಬಿಲ್ಲವ ಜನಾಂಗಕ್ಕೆ ನ್ಯಾಯ ಒದಗಿಸಿ ಕೂಡಲೇ ಪರಿಹಾರಘೋಷಿಸಬೇಕೆಂದು ಬಿಲ್ಲವ ಸಮಾಜದ ಮುಖಂಡ ಮಾಜಿ ಜಿ.ಪಂ.ಅಧ್ಯಕ್ಷರು, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರು ಆಗಿರುವಬಿ.ಎನ್.ಶಂಕರ ಪೂಜಾರಿಯವರು ಎಲ್ಲಾ ಶಾಸಕರಿಗೆ, ಸಂಸದರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಎಲ್ಲರಿಗೂ ಪರಿಹಾರನೀಡುವಾಗ ನಮ್ಮ ಜನಾಂಗವನ್ನು ಕೈ ಬಿಟ್ಟಿರುವುದು ನೋವುಂಟು ಮಾಡಿದೆ ಎಂದು ಬಿ.ಎನ್.ಶಂಕರ ಪೂಜಾರಿಯವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *