08/08/2026

ಬಂಟ್ವಾಳ: ದೆಹಲಿ ಪ್ರಜಾಪ್ರಭುತ್ವದ ಪಥ ಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ ಕರಾವಳಿಯ ಏಕೈಕ ಯುವಕ ಮಿಥುನ್

0

ಪ್ರಜಾಪ್ರಭುತ್ವ ದಿನದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಕರ್ನಾಟಕವನ್ನು ಏಕೈಕ ಯುವಕ ಪ್ರತಿನಿಧಿಸಲಿದ್ದು, ಅವರು ಕರಾವಳಿ ಮೂಲದವರಾಗಿದ್ದಾರೆ. ಬಂಟ್ವಾಳ ತಾಲೂಕಿನ ಸೇರಾ ನಿವಾಸಿ ಮಿಥುನ್ ಅವರು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಮಿಥುನ್ ಕುಮಾರ್, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸೇರಾ ನಿವಾಸಿ ದಿ.ಕೃಷ್ಣಪ್ಪ ಪೂಜಾರಿ ಹಾಗೂ ದಿ. ಭಾರತಿ ಅವರ ಏಕೈಕ ಪುತ್ರರಾಗಿದ್ದಾರೆ. ಭಾರತೀಯ ತಟರಕ್ಷಣಾ ಪಡೆಯಲ್ಲಿರುವ ಮಿಥುನ್ ಅವರು ಆಂದ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೆಹಲಿಯಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯುವ ಪಥಸಂಚಲನಕ್ಕೆ ಇಂಡಿಯಾನ್ ಕೋಸ್ಟ್ ಗಾರ್ಡ್ ನಿಂದ ಓರ್ವ ಭಾಗವಹಿಸುತ್ತಿದ್ದು, ರಾಜ್ಯಕ್ಕೆ ಅತ್ಯಂತ ಸಂತಸದ ವಿಷಯವಾಗಿದೆ. ನ.1 ರಿಂದ ನೊಯಿಡಾದಲ್ಲಿ ತರಬೇತಿ ನಡೆಯುತ್ತಿದ್ದು, ಜನವರಿಯಿಂದ ದೆಹಲಿಯ ಕರ್ತವ್ಯ ಪಥದಲ್ಲಿ ತರಬೇತಿ ನಡೆಯುತ್ತಿದೆ.

ಪ್ರಜಾಪ್ರಭುತ್ವ ದಿನದಂದು ನಡೆಯುವ ಪಥಸಂಚಲನದ ಒಂದು ಯುನಿಟ್ ನಲ್ಲಿ 144 ಜನರಿದ್ದು ಆ ತಂಡದಲ್ಲಿ ಮಿಥುನ್ ಪಥಸಂಚನದಲ್ಲಿ ಭಾಗವಹಿಸಲಿದ್ದಾರೆ.


Leave a Reply

Your email address will not be published. Required fields are marked *

You may have missed