ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್

0

ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್  ಹಿಂದೂ ಸಂಘಟನೆಯಲ್ಲಿ ನಾನಾ ಜವಾಬ್ದಾರಿ ನಿರ್ವಹಿಸಿದ್ದು, ಈ ಮೊದಲು ಉರ್ವಾಸ್ಟೋರ್ ವಾರ್ಡಿನ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ, ನಂತರ ಬಿಜೆಪಿ ಯುವಮೋರ್ಚಾ ಮಂಡಲ ಉಪಾಧ್ಯಕ್ಷರಾಗಿ, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿರುತ್ತಾರೆ.
ಸಾಕಷ್ಟು ಕಡೆ ಅಮಿತ್ ರಾಜ್ ಅನ್ನೋ ಹೆಸರನ್ನ ನೀವು ಕೇಳಿರುವಿರಿ. ಅದೆಷ್ಟೋ ಜನ ಅಮಿತ್ ರಾಜ್ ರವರ ಬಗ್ಗೆ ಹೇಳುವ ಮಾತು… ಅವರೊಂದು ಶಕ್ತಿ!!ಹಿಂದುತ್ವಗೋಸ್ಕರ ದುಡಿಯುವಂತಹ ಪ್ರಾಮಾಣಿಕ ನಾಯಕ, ಹಾಗೆ ಬಡವರ ಸೇವೆ ಮಾಡುವಂತಹ ಸಮಾಜಸೇವಕ..14E0B822 50AC 462E BCD4 2FA9321461AF
ತನ್ನ ಬಾಲ್ಯಜೀವನದಿಂದಲೇ “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ” ಸಂಘ ಶಿಕ್ಷಣ ಪಡೆದು ಸ್ವಯಂ ಸೇವಕರಾಗಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು.
ಬಾಲ್ಯದಿಂದಲೇ ಒಂದು ಆಸೆಯನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರು. ಸಮಾಜದಲ್ಲಿ ನಾನು ಮತ್ತೊಬ್ಬರಿಗೆ ಒಳ್ಳೆಯದನ್ನ ಮಾಡಬೇಕು, ಸಮಾಜಕ್ಕೆ ಒಳಿತಿನ ಹಸ್ತವಾಗಿ ದುಡಿಯಬೇಕು ಎಂಬ ಮನಸ್ಥಿತಿಯಲ್ಲಿ ಬೆಳೆದು ತಾನು ಅಂದುಕೊಂಡ ಹಾಗೆ ಬದುಕುತ್ತಿದ್ದಾರೆ.
ಅಮಿತ್ ಅಣ್ಣ ನಂತರದ ದಿನಗಳಲ್ಲಿ ಬಡವರ ಸೇವೆಯನ್ನ ಮಾಡಲು ಮುಂದಾದರು. ಇವತ್ತಿಗೂ ಅದೆಷ್ಟೋ ಬಡವರ ಕಷ್ಟಕ್ಕೆ ಮರುಗಿ, ಅವರ ಕಣ್ಣೀರ ನೋವಿಗೆ ಆಸರೆಯಾಗಿರೋದು ನಿಜಕ್ಕೂ ಶ್ಲಾಘನೀಯ ವಿಚಾರ. ಪ್ರಾಮಾಣಿಕತೆಗೆ ಮತ್ತೊಂದು ಪ್ರತೀಕವೆನ್ನಬಹುದು.495D1DB9 4F65 4FFA 9A43 398801CFB07C 1024x619
“ಅಮಿತ್ ಅಣ್ಣ”ನಿಗೆ ಅದೆಷ್ಟೇ ಹೆಸರಿದ್ದರೂ ಯಾವತ್ತು ತನ್ನ ಕಾರ್ಯಕರ್ತರ ಜೊತೆ ನಾಯಕನಂತೆ ಮೆರೆಯದೆ, ಅಹಂಕಾರವನ್ನ ತೋರದೆ ಸಾಮಾನ್ಯವಾಗಿ ಅವರೊಂದಿಗೆ ಕೆಲಸ ಮಾಡೋ ಆ ಕಾರಣಕ್ಕಾಗಿ ಅಭಿಮಾನಗಳು ಹುಟ್ಟಿಕೊಂಡಿವೆ. ನಿಜಕ್ಕೂ ಎಂತಹ ಸಾರ್ಥಕ ಜೀವನ…ಅವರ ನಿಲುವು ಹಾಗೆ!! ಅವರ ಮಾರ್ಗದರ್ಶನದ ಪ್ರತಿಯೊಂದು ಹೆಜ್ಜೆಯಲ್ಲೂ ಅರ್ಥವಿದೆ..

ಸಮಾಜಕ್ಕಾಗಿ ಅಮಿತ್ ಅಣ್ಣ  ಎಂದರೆ ಏನು?

ಅವರ ನೇತೃತ್ವದಲ್ಲಿ ಬಡಮಕ್ಕಳ ಶಾಲೆಗೆ ಭೇಟಿ ನೀಡಿ ಹಾಗೂ ಹಲವಾರು ಅಶಕ್ತ ಕುಟುಂಬದ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡುವುದರೊಂದಿಗೆ ಅನೇಕ ಸಮಾಜಮುಖಿ ‌ಕೆಲಸ ಮಾಡಿರುತ್ತಾರೆ.

ಅಲ್ಲದೆ 26-01-2018 ಮಂಗಳೂರಿನಲ್ಲಿ ಸುಮಾರು ನೂರು ಜನರ ನೇತ್ರದಾನ ಸಂಕಲ್ಪ ಮಾಡಿಸುವ ಮೂಲಕ #ನೇತ್ರದಾನ_ಶಿಬಿರ ನಡೆಸಿರುತ್ತಾರೆ..
ಇದಕ್ಕಿಂತ ಪುಣ್ಯದ ಕೆಲಸ ಬೇರೇನಿದೆ..ಇವೆಲ್ಲ ಸಮಾಜಕ್ಕೆ ಪ್ರಾಮುಖ್ಯತೆ ನೀಡೋ ಕೆಲಸವಾದರೆ ಇನ್ನು ಪರದೆಯ ಹಿಂದೆ ಅದೆಷ್ಟೋ ಒಳಿತಿನ ಸಹಾಯವನ್ನ ಇವರು ಮಾಡುತ್ತಲೇ ಬರುತ್ತಿದ್ದಾರೆ..ಕಾರಣವಿಷ್ಟೇ… ತಾನು ಮಾಡೋ ಕೆಲಸ ದೇವರಿಗೆ ಗೊತ್ತಾದರೆ ಸಾಕು ಸಮಾಜಕ್ಕೆ ಬೇಡ ಎಂಬ ಅರ್ಥದೊಳು ಕೆಲಸ ಮಾಡೋ ಸರಳತೆಯ ನಾಯಕನೇ ಇವರು.

ಹೆಚ್ಚು ಹೇಳಬೇಕೆಂದರೆ196F999B A7D8 4412 90B3 BF1EB9401D98

ಅತ್ತಾಗ ಕಣ್ಣೀರು ಒರೆಸೋ ನಾಯಕ
ಸೋತಾಗ ಹೆಗಲು ಕೊಡೊ ನಾಯಕ
ಬಡವರ ನೋವಿಗೆ ಶಕ್ತಿ ತುಂಬೋ ನಾಯಕ
ಕಾರ್ಯಕರ್ತರಿಗೆ ಧೈರ್ಯ ತುಂಬೋ ನಾಯಕ ಎಲ್ಲೇ ಯಾರಿಗೂ ತೊಂದರೆಯಾದರೂ ಕ್ಷಣ ಮಾತ್ರದಲ್ಲಿ ಸ್ಪಂದಿಸೋ ನಾಯಕ
ಅನ್ಯಾಯದ ವಿರುದ್ಧ ಗರ್ಜಿಸೋ ನಾಯಕ
ನೊಂದ ಜೀವಕ್ಕೆ ಆಸರೆಯಾಗೋ ನಾಯಕ
ಪ್ರಾಮಾಣಿಕ ಸಿದ್ದಾಂತಕ್ಕೆ ಸೈ ಎನ್ನೋ ನಾಯಕ
ಸರಳತೆಯಲ್ಲಿ ಬದುಕೋ ನಾಯಕ
ಒಟ್ಟಿನಲ್ಲಿ ನಾಯಕ ಅನ್ನೋ ಪದಗಳಿಗೆ ಅರ್ಹತೆಯ ಮಡಿಲು ತುಂಬೋ ನಿಸ್ವಾರ್ಥ ವ್ಯಕ್ತಿ
ಅನ್ಯಾಯ ಮಾಡುವರನ್ನ ಹತ್ತಿರವೂ ಸೇರಿಸದೆ ನ್ಯಾಯದ ಪರ ಕೆಲಸ ಮಾಡೋ ಜನರ ಜೊತೆ ಬೆರೆತು ನಾನಿದ್ದೇನೆ ಎಂಬ ಭರವಸೆಯ ಶಕ್ತಿಯಾಗಿ ದುಷ್ಟರಿಗೆ ಅಂಜದೆ, #ದೈವ_ದೇವರುಗಳ ಆಶೀರ್ವಾದ ಪಡೆದು ಹಿಂದೂ ಧರ್ಮದ ತತ್ವಗಳನ್ನ ಪಾಲಿಸುತ್ತ,
ಹಿಂದೂಭದ್ರಕೋಟೆಗೆ ಕಾವಲಿರೋ ಈ ನಾಯಕನ ಬಗ್ಗೆ ಅದೆಷ್ಟೇ ಮಾತುಗಳ ವರ್ಣನೆ ನೀಡಿದರು ಅದು ಕಡಿಮೆಯೇ..
ಇಲ್ಲಿಯವರೆಗೆ ನಾ ಇವರನ್ನ ಭೇಟಿಯಾಗಿಲ್ಲ..ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ #ನಿಜ!! ಆದರೆ ಭೇಟಿಯಾಗದಿದ್ದರು ಹತ್ತಿರದಿಂದ ನೋಡಿದ್ದೇನೆ ಎಂಬ ಅರಿವು ಅಭಿಮಾನಿಗಳ ಮಾತುಗಳಿಂದ ಹಾಗು ಅವರ ಕೆಲಸದಿಂದ ಗೊತ್ತಾಗುತ್ತದೆ..
ಸ್ವಾರ್ಥ ತುಂಬಿರೋ ಈ ಪ್ರಪಂಚದಲ್ಲಿ ಇಂತಹ ನಾಯಕರು ಹಲವರಿಗೆ ಮಾದರಿಯಾಗಬೇಕು..”#ಅಮಿತ್_ಅಣ್ಣ” ವೇದಿಕೆಯ ಮುಂಭಾಗ ನಿಂತು ಕೆಲಸ ಮಾಡುವರಲ್ಲ, ಪರದೆಯ ಹಿಂದೆ ದುಡಿಯುವಂತಹ ಕಾಯಕ..
ಹಾಗೆ “ಅಮಿತ್ ಅಣ್ಣ” “ರಾಷ್ಟ್ರೀಯ ಸ್ವಯಂಸೇವಕ ಸಂಘದ” ಸಂಘ ಶಿಕ್ಷಣ ಪಡೆದು RSS ನಲ್ಲಿ ಬಹಳ ಒಲವನ್ನು ಇಟ್ಟುಕೊಂಡವರು..ಆರ್ ಎಸ್ ಎಸ್ ಪ್ರಮುಖ ಅಂಶಗಳನ್ನ ತನ್ನೊಳಗೆ ಅಳವಡಿಸಿ ಹಿಂದೂರಾಷ್ಟ್ರದ ಭಗವಧ್ವಜ ಪತಾಕೆ ಬಹಳ ಎತ್ತರಕ್ಕೆ ಹಾರಲಿ ಎಂಬ ಕನಸು ಕಂಡವರು..
ಅಣ್ಣ ನೀವು ಹಿಂದೂ ಸಮಾಜಗೋಸ್ಕರ ಕೊಟ್ಟಿರೋ ಕೊಡುಗೆಗೆ ಬೆಲೆಕಟ್ಟಲಾಗದು..ನಿಮ್ಮಿಂದ ಇನ್ನು ಅನೇಕ ಒಳಿತಿನ ವಿಚಾರಗಳು ಮೂಡಿ ಬರೆಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..ನಿಮ್ಮ ಹೊಸ ಪಯಣದ ಆರಂಭ ಅದೆಷ್ಟೋ ಜನರಿಗೆ ಪ್ರೇರಣೆಯಾಗಲಿ..ಸದಾ ನಿಮ್ಮ ವ್ಯಕ್ತಿತ್ವದ ಅಭಿಮಾನಿ ನಾ

ಬರಹ-ಪ್ರವೀಣ್ ಪೂಜಾರಿ


Leave a Reply

Your email address will not be published. Required fields are marked *