ದೆಹಲಿಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದಾಗ

0

ನನಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿತು 2006 ರಲ್ಲಿ. ಆಗ ನಾನು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯನಾಗಿದ್ದೆ. ಅಮೇರಿಕದ ಸಾಂಸ್ಕೃತಿಕ ಸಂಘದವರಿಗೆ ನಮ್ಮ ದೈವಾರಾಧನೆ ಕುರಿತು ತಿಳಿಸುವ ಜವಾಬ್ದಾರಿಯಿತ್ತು. ಅದಕ್ಕಾಗಿ ತುಳುನಾಡಿನಕೋಲ ಹೇಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಉದ್ದೇಶ. ಅದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿಯಿಂದ ತಂಡವನ್ನುದೆಹಲಿಗೆ ಒಯ್ಯುವ ಹೊಣೆ ನನಗೆ. ಸರಿ ನನ್ನೊಂದಿಗೆ ನಾಲ್ಕು ಜನರ ತಂಡವಿತ್ತು. ನಾವು ದೆಹಲಿ ತಲುಪಿ ಕರ್ನಾಟಕ ಸಂಘದಲ್ಲಿಉಳಿದುಕೊಂಡಿದ್ದೆ.

ಒಂದು ದಿನ ಮುಂಜಾನೆ ನಾನು ಕುತೂಹಲಕ್ಕಾಗಿ ದೆಹಲಿಯಲ್ಲಿದ್ದ ಮತ್ತು ಆಗ ರಾಜ್ಯ ಸಭಾ ಸದಸ್ಯರಾಗಿದ್ದ ಬಿ.ಜನಾರ್ಧನಪೂಜಾರಿಯವರಿಗೆ ಫೋನ್ ಮಾಡಿದೆ. ಆಕಡೆಯಿಂದ ದೂರವಾಣಿ ಕರೆ ತೆಗೆದುಕೊಂಡರು. ‘ಸಾರ್ ನಾನು ಚಿದಂಬರ’ ಎಂದೆ. ‘ ಹೋಎಲ್ಲಿದ್ದೀರಿ’ ಪ್ರಶ್ನೆ ಬಂತು. ‘ನಾನು ದೆಹಲಿಗೆ ಬಂದೆ’ ಎಂದೆ. ‘ಯಾವಾಗ ಬಂದಿರಿ’ ಎಂದರು. ‘ ಸಾರ್ ಮೂರು ದಿನವಾಯ್ತು’ಎಂದೆ. ‘ಛೇ ಛೇ ಮೂರು ದಿನವಾದರೂ ಯಾಕೆ ನನಗೆ ಹೇಳಲಿಲ್ಲ ?, ಯಾವಾಗ ಹೋಗುತ್ತೀರಿ ?’ ಮತ್ತೆ ಪ್ರಶ್ನೆ. ‘ಇಲ್ಲ ಸಾರ್ ನಾಳೆಹೋಗುತ್ತೀನಿ’. ‘ ಹಾಗಾದರೆ ಈಗಲೇ ಬನ್ನಿ ನನ್ನ ಮನೆಗೆ’ ಎಂದವರೇ ಮನೆಯ ವಿಳಾಸ ಹೇಳಿದರು.‘ ಏನಾದರೂ ಸಮಸ್ಯೆಯಾದರೆಫೋನ್ ಮಾಡಿ, ಕಾಯುತ್ತೇನೆ’ ಎಂದು ಫೋನ್ ಇಟ್ಟರು.6D3A463F 7318 4EDA 9BA9 57A992DAE501

ಈಗ ನನಗೆ ಸಮಸ್ಯೆ, ಅಲ್ಲಿಗೆ ಹೋಗುವುದು ಹೇಗೆಂದು. ಸರಿ ನಾನು ನನ್ನ ಗೆಳೆಯ ಡಾ. ಪುರುಷೋತ್ತಮ ಬಿಳಿಮಲೆ (ದೆಹಲಿಯಕರ್ನಾಟಕ ಸಂಘದ ಅಧ್ಯಕ್ಷ)ಯನ್ನು ಕೇಳಿ ವಿಳಾಸ ತಿಳಿಸಿದೆ. ಅವರು ಹೇಳಿದಂತೆ ಟ್ಯಾಕ್ಸಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಅವರಿಗೇ ಹೇಳಿದೆ ಟ್ಯಾಕ್ಸಿ ಮಾಡಿಕೊಡಿ ಯಾಕೆಂದರೆ ನಾನು ಕೇಳಿದರೆ ಬಾಡಿಗೆ ದುಬಾರಿ ಹೇಳಬಹುದೆಂದೆ. ಅವರೇ ತಕ್ಷಣ ಒಂದುಟ್ಯಾಕ್ಸಿಗೆ ಫೋನ್ ಮಾಡಿ ಬರಲು ಹೇಳಿದರು. ಟ್ಯಾಕ್ಸಿ ಬಂತು.

‘ನಾನು ಬಿ.ಜನಾರ್ಧನ ಪೂಜಾರಿ ಮನೆಗೆ ಹೋಗಬೇಕು ’ ಓ ಪೂಜಾರಿಜೀ ಯೇ ಬಹುತ್ ಅಚ್ಛಾ ಆಧ್ಮಿ, ವೋ ತೋತೋ ಸಬ್ಕೋಮಾಲೂಮ್ ಹೈ’ ಎಂದ ಟ್ಯಾಕ್ಸಿ ಡ್ರೈವರ್. ನನಗೆ ಅಚ್ಚರಿ. ಜನಾರ್ಧನ ಪೂಜಾರಿ ಈ ಮನುಷ್ಯನಿಗೂ ಪರಿಚಯವಲ್ಲಾ ಎಂದು.

ಟ್ಯಾಕ್ಸಿ ಹೊರಟಿತು ಪೂಜಾರಿ ಮನೆಗೆ. ಟ್ಯಾಕ್ಸಿ ಡ್ರೈವರ್ ಗೂ ಯಾಕೋ ಸಂಶವಾಯಿತು. ಅಲ್ಲಿದ್ದವರನ್ನು ವಿಚಾರಿಸಿದ. ಆತ ಬಂದಜಾಗ ಸರಿಯಾಗಿತ್ತು. ಮತ್ತೆ ಆತ ನನಗೆ ಹೇಳಿದ ನಾನು ತುಂಬಾ ದಿನವಾಯ್ತು ಬಂದು. ಅದಕಾಗಿಯೇ ಅಲ್ಲೇ ಇದ್ದಾರೋ ಬದಲಾಗಿಬೇರೆ ಎಲ್ಲಿಗಾದರೂ ಹೋಗಿದ್ದಾರೋ ಎಂದು ಕೇಳಿದೆ, ನಿಮಗೆ ತೊಂದರೆಯಾಗಲಿಲ್ಲ ತಾನೇ ಕೇಳಿದ. ನಾನು ಇಲ್ಲ ಎಂದೆ. ಟ್ಯಾಕ್ಸಿಯನ್ನು ಸರಿಯಾಗಿ ಪೂಜಾರಿಯವರಿದ್ದ ಮನೆಯ ಮುಂದೆ ನಿಲ್ಲಿಸಿ ಆ ಗೇಟ್ ತೆಗೆದು ಹೋಗಿ ಎಂದ.3EF5BB1D 7419 4416 9257 B0C52334B229

ನಾನು ಅಳುಕುತ್ತಲೇ ನಿಧಾನವಾಗಿ ಗೇಟ್ ತೆಗೆದುಕೊಂಡು ಹೋದೆ. ಅದು ದೊಡ್ಡ ಮನೆ. ನಾಲ್ಕು ಸುತ್ತಲೂ ಕಾಂಪೌಂಡ್. ವಿಶಾಲವಾದ ಜಾಗದಲ್ಲಿತ್ತು ಮನೆ. ಹೊರಗಿನಿಂದ ಗಲಾಟೆ, ಜನಜಂಗುಳಿಯಿಲ್ಲ, ಪ್ರಶಾಂತವಾದ ವಾತಾವರಣ. ಸಮಯ ಬೆಳಿಗ್ಗೆ 11 ಗಂಟೆಯಾಗಿತ್ತು. ನಾನು ಮನೆಯ ಕಾಲಿಂಗ್ ಬೆಲ್ ಒತ್ತಿದೆ. ಸ್ವಲ್ಪ ಸಮಯದಲ್ಲಿ ಬಾಗಿಲು ತೆರೆದುಕೊಂಡಿತು. ‘ಕ್ಯಾ ಚಾಯಿಯೇ’ ಪ್ರಶ್ನೆಓರ್ವ ಅಪರಿಚಿತ ವ್ಯಕ್ತಿಯಿಂದ. ನಾನು ಬಿ.ಜನಾರ್ಧನ ಪೂಜಾರಿ ಕೋ ಮಿಲ್ನೇಕೇಲಿಯೇ ಆಯೇ ’ ಎಂದೆ. ತಕ್ಷಣ ಒಳಗೆ ಬರಲುಹೇಳಿದರು. ಅವರು ಸ್ನಾನ ಮಾಡುತ್ತಿದ್ದಾರೆ, ಕೂತುಕೊಳ್ಳಿ ಎಂದು ಒಳಗೆ ಹೋದರು. ಸ್ವಲ್ಪ ಹೊತ್ತಲ್ಲಿ ಬಂದು ‘ಚಹಾ, ಕಾಫಿ ಏನುತೆಗೆದುಕೊಳ್ಳುತ್ತೀರಿ’ ಎಂದರು. ಬೇಡಾ ಬಿಡಿ ಎಂದೆ, ಆದರೂ ಒತ್ತಾಯ ಮಾಡಿದಾಗ ಚಹಾ ಎಂದೆ. ಸ್ವಲ್ಪಹೊತ್ತಲ್ಲಿ ಚಹಾ ಬಂತು. ಕುಡಿದು ಅಲ್ಲಿದ್ದ ಪೇಪರ್ ನೋಡುತ್ತಾ ಕುಳಿತೆ.

ಸ್ವಲ್ಪ ಸಮಯದ ಬಳಿಕ ಬಿ.ಜನಾರ್ಧನ ಪೂಜಾರಿ ಬಂದರು . ಶುದ್ಧ ಬಿಳಿ ಪ್ಯಾಂಟ್, ಬಿಳಿ ಅಂಗಿ ಧರಿಸಿದ್ದರು. ಕನ್ನಡವನ್ನುಬಟ್ಟೆಯಿಂದ ಉಜ್ಜಿಕೊಂಡು ನಗುತ್ತಲೇ ಬಂದರು. ‘ದಾನೆಗೇ ಬರಿಯೆರೆ ಕಷ್ಟ ಆಂಡ್’ (ಏನಂತೆ ಬರಲು ಕಷ್ಟವಾಯಿತೇ). ನಾನುಇಲ್ಲವೆಂದೆ. ಆಮೇಲೆ ಪೂಜಾರಿಯವರಿಂದ ಚಹಾ ಕುಡಿಯಲು ಒತ್ತಾಯ. ನಾನು ಕುಡಿದೆ ಎಂದರು ಒಪ್ಪಲಿಲ್ಲ ಮತ್ತೆ ಕುಡಿಯಿರಿಎಂದು ಚಹಾ ತರಿಸಿದರು.

ಹಾಗೆ ಮಾತಾಡುತ್ತಾ ಕುಳಿತೆವು. ಸ್ಥಳೀಯ ರಾಜಕೀಯದ ಕುರಿತೇ ಮಾತು. ನಾವಿಬ್ಬರೇ ಕುಳಿತುಕೊಂಡಿದ್ದೆವು, ಅಲ್ಲಿಗೆ ಬೇರೆ ಯಾರೂಬರಲಿಲ್ಲ. ಸದ್ದು–ಗದ್ದಲವಿಲ್ಲದೆ ಮಾತನಾಡಿದೆವು. ಪೂಜಾರಿ ಮಕ್ಕಳ ಕುರಿತು ವಿಚಾರಿಸಿದರು. ಯಾಕೆ ಬಂದದ್ದು ಪ್ರಶ್ನೆಗೆ ವಿವರಿಸಿದೆ. ಸುಮಾರು ಒಂದು ಗಂಟೆ ಕಾಲ ಮಾತನಾಡಿದೆವು. ನಾನು ಹೊರಟು ನಿಂತೆ. ಪೂಜಾರಿಯವರು ಊಟ ಮಾಡಿಕೊಂಡು ಹೋಗಲುಒತ್ತಾಯಿಸಿದರು. ನಾನು ಬೇಡವೆಂದು ಹೇಳಿ ಮತ್ತೆ ಅಮೇರಿಕಾ ತಂಡವನ್ನು ಭೇಟಿ ಮಾಡುವ ನೆಪಕೊಟ್ಟು ಹೊರಡಲು ಬಯಸಿದೆ.

ಸರಿ ಪೂಜಾರಿಯವರು ಸಮ್ಮತಿಸಿದರು. ನಾನಿನ್ನು ಬರ್ತ್ತೇನೆ ಎಂದು ಕೈಮುಗಿದೆ. ‘ಇಲ್ಲಾ ಇಲ್ಲಾ ಬನ್ನಿ ’ಎನ್ನುತ್ತಾ ನನ್ನೊಂದಿಗೆ ಗೇಟ್ವರೆಗೂ ಬರಲು ಸಜ್ಜಾದರು. ನಾನು ‘ ಬೇಡ ಸಾರ್ ನಾನು ಹೊಗ್ತೇನೆ ’ ಎಂದರು ಕೇಳಲಿಲ್ಲ. ‘ನೀವು ನನ್ನ ಗೆಸ್ಟ್ ಬನ್ನಿ’ ಎನ್ನುತ್ತಾನಡೆದುಕೊಂಡು ಬಂದು ಅವರೇ ಗೇಟ್ ತೆಗೆದು ಟ್ಯಾಕ್ಸಿ ತನಕ ಬಂದು ನನ್ನ ಟ್ಯಾಕ್ಸಿ ಅಲ್ಲಿಂದ ಹೊರಟ ಮೇಲೆ ಗೇಟ್ ಹಾಕಿಕೊಂಡರು.

ಒಬ್ಬ ಕೇಂದ್ರ ಸಚಿವರಾಗಿದ್ದವರು ಹೇಗೆ ನಡೆದುಕೊಂಡರು ಎನ್ನುವುದನ್ನು ತಿಳಿಸಲು ಇಷ್ಟೆಲ್ಲಾ ಹೇಳಬೇಕಾಯಿತು. ಪೂಜಾರಿಯವರುಮುಂಗೋಪಿ, ಸಿಡುಕಿನವರು ಎನ್ನುವ ಅಭಿಪ್ರಾಯ ಎಷ್ಟು ಸಹಜ ಮತ್ತು ಎಷ್ಟು ಸುಳ್ಳು ಎನ್ನುವುದೇ ನನಗೆ ಅರ್ಥವಾಗಲಿಲ್ಲ. ಸಿಡುಕಿನ ವ್ಯಕ್ತಿಯಲ್ಲೂ ಎಂಥ ಗುಣಗಳಿರುತ್ತವೆ, ಎಷ್ಟು ಮನುಷ್ಯತ್ವ ಇರುತ್ತದೆ ಅಂದುಕೊಂಡೆ. ನನ್ನನ್ನು ಮನೆಯಿಂದ ಬೀಳ್ಕೊಟ್ಟಾಗನನ್ನೊಂದಿಗೆ ಬಂದ ಬಿ.ಜನಾರ್ಧನ ಪೂಜಾರಿಯವರಲ್ಲೂ ಇಷ್ಟೊಂದು ಸೌಜನ್ಯವಿದೆಯಲ್ಲ ಎಂದುಕೊಂಡೆ.

–ಚಿದಂಬರ ಬೈಕಂಪಾಡಿ


Leave a Reply

Your email address will not be published. Required fields are marked *