ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭ ಮಾಣಿಂಜ

0

ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭಮಾಣಿಂಜ4C9D37AC F512 4AB2 B914 340E08A67E2B E1630780131892

ಬದುಕು ನಿಂತ ನೀರನ್ನಾಗಿಸದೇ ಸದಾ ನಿರ್ಮಲ ಸೇವಾ ಮನೋಭಾವದ ಜಲಪಾತವನ್ನಾಗಿಸಿ ಕೊಂಡಾಗ ಮಾತ್ರ ಬದುಕುಬಂಗಾರವಾಗಿ

ಸಾರ್ಥಕ್ಯ ಜೀವನ ಎನ್ನಿಸಿಕೊಳ್ಳಲು ಸಾಧ್ಯ.

ಗುರಿಯಾಗಿ ಆತ್ಮ ಶಕ್ತಿಯೊಂದೇ ಸರ್ವದಾ ಮನ ತುಂಬಿದ್ದರೆ ಯಶಸ್ಸಿನ ಗರಿ ಶಾಶ್ವತ. ದೇವರು ಮೆಚ್ಚುವಂತಹ ಸತ್ಯ ಧರ್ಮ ನ್ಯಾಯದಪಥದಲ್ಲಿ ಸರ್ವದಾ ಬಾಳು ಮುಂದುವರಿದರೆ ದೇವರೊಲುಮೆಯ ಆದರ್ಶ ಜೀವನದಿಂದ ಬದುಕು ನಂದನವನವಾಗುವುದು.26B11A27 FE5F 4961 BE3A 1D7262501061 E1630780198704

ಮುಖಂಡರಾಗಲು

ಇಚ್ಚಿಸುವವರಲ್ಲಿ ಮೊದಲಿಗೆ ಇರಬೇಕಾದುದು ಹೃದಯ ಸಂಪನ್ನತೆ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ

ಸಾಮಾಜಿಕ ,ಆಧ್ಯಾತ್ಮಿಕ, ಧನಾತ್ಮಕ ಹಿತಚಿಂತನೆಗಳ ಮುಖೇನ ಓರ್ವ ಆದರ್ಶವ್ಯಕ್ತಿಯಾಗಿ, ಉತ್ಸಾಹಿ ಸೇವಾ ಕಾರ್ಯಕರ್ತರಾಗಿ, ಮನೋಜಾಗೃತರಾಗಿ, ಧಾರ್ಮಿಕ ಮಾರ್ಗದರ್ಶಕರಾಗಿ,

ಶಕ್ತಿ ಯುಕ್ತಿಪ್ರೇರಕರಾಗಿ ಜನಮಾನಸದ ಹೃದಯದಿ ಶೋಭಿಸುತ್ತಿರುವ ನಿಸ್ವಾರ್ಥ ಸೇವಾ ಮಾಣಿಕ್ಯ. ಧೀಮಂತ ನಾಯಕನಾಗಿಪ್ರಾಮಾಣಿಕತೆ, ದಕ್ಷತೆ, ಶಿಸ್ತುಗಾರವಾಗಿ ನೇರನುಡಿಪಾಲಕನಾಗಿ,

ನಿಷ್ಟುರವಾದಿಯಾಗಿ,

ಮಿತಭಾಷಿಯಾಗಿ, ರಾಜ ಗಾಂಭೀರ್ಯ ಕಳೆಯ ಸುಂದರ ಅಜಾನುಬಾಹು ಆಕರ್ಷಕ ಮೈಕಟ್ಟು, ಚುರುಕುತನದ ಬುದ್ಧಿವಂತಿಕೆಯಿಂದಕೂಡಿದ್ದು

ಸಭೆ ಸಮಾರಂಭಗಳಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾದರಸದಂತೆ ಕ್ರಿಯಾಶೀಲರಾಗಿ ಸರ್ವರ ಕಣ್ಮನ ಸೆಳೆದು ಮಿಂಚುತ್ತಿರುವಹಿರಿಯ ನಿಷ್ಠಾವಂತ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗೌರವಾನ್ವಿತ ಶ್ರೀಮಾನ್ ನಿರ್ಮಲ್ ಪದ್ಮನಾಭ ಮಾಣಿಂಜರವರಯಶಸ್ವಿ ಸಾಧನೆಯ ಯಶೋಗಾಥೆ.07804E1C 2CE6 47C2 B6A5 AE2065E60A10 E1630780244419

ತುಳುನಾಡಿನ ಅಳಿಯ ಕಟ್ಟಿನ ಪ್ರತಿಷ್ಠಿತ ಮುಗ್ಗಗುತ್ತು ಮನೆತನದ ಕೇಶವ ಪೂಜಾರಿ ಮತ್ತು ಕುಕ್ಕಿನಡ್ಡ ಮನೆತನದ ಮೋಹಿನಿದಂಪತಿಗಳ ಪ್ರಥಮ ಪುತ್ರನಾಗಿ 1937 ನೇ ಸಪ್ಟೆಂಬರ್ 5 ರಂದು ಶುಭ ಜನನ.ಪಾಣೆಮಂಗಳೂರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೊರೈಸಿ ತದನಂತರ ಮಂಗಳೂರು ಸರ್ಕಾರಿ ಪದವಿ ಶಿಕ್ಷಣ ವ್ಯಾಸಂಗ ಮಾಡಿರುತ್ತಾರೆ.

ಅಜ್ಞಾನದಿಂದ ಸುಜ್ಞಾನದೆಡೆಗೆ ಎಂಬ ಪೂರ್ವಜರ ಮಾತಿಗೆ ಸರಿಸಾಟಿವೆಂಬಂತೆ

ಪದ್ಮನಾಭ ಮಾಣಿಂಜರವರು ಬದುಕಿನ ಯೌವ್ವನದ ಪುಟದೀ ಶೈಕ್ಷಣಿಕ ಖಾತೆ ತೆರೆದು ಅವಿರತ ಕಲಿಕಾಶ್ರಮದಿಂದ ಪ್ರಪಥಮವಾಗಿ1959 ರಲ್ಲಿ  ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ವಲಯ ಅರಣ್ಯಾಧಿಕಾರಿ ತರಬೇತಿಗೆ ಆಯ್ಕೆಯಾಗಿ ಮುಂದೆಕೊಯಮೂತ್ತೂರಿನ ಅರಣ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅರಣ್ಯ ಶಾಸ್ತ್ರದ ಉನ್ನತ ವಿದ್ಯಾಭ್ಯಾಸವನ್ನು07AE47C2 F6F6 4194 A767 C6E970F4C5C8 E1630780285341

ಅಧ್ಯಯನ ಮಾಡಿದ ಯಶಸ್ಸಿನ ಮೆಟ್ಟಿಲು ಇವರದ್ದು. ತನ್ನ ಕರ್ತವ್ಯದ ಬದುಕಿನಲ್ಲಿ ಓರ್ವ  ಜವಾಬ್ದಾರಿಯುತ ಸರ್ಕಾರಿ  ನೌಕರನಾಗಿಪ್ರಾಮಾಣಿಕತೆ, ನಿಷ್ಠೆ,ದಕ್ಷತೆಗೆ ಸವಾಲೆಂಬಂತೆ  1961 ನೇ ನವೆಂಬರಿನಲ್ಲಿ ಕರ್ನಾಟಕ ಸರ್ಕಾರದ ವಲಯ ಅಧಿಕಾರಿಯಾಗಿನೇಮಕಗೊಂಡು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆದರ್ಶ ಅರಣ್ಯ ಅಧಿಕಾರಿಯಾಗಿ ಬಹು ನಿಷ್ಠೆಯಿಂದ ಕರ್ತವ್ಯನಿರ್ವಹಿಸಿರುವರು.1978 ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ

ಭಡ್ತಿಗೊಂಡ ನಂತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.1983 ರಲ್ಲಿ ಆಫ್ರಿಕಾ ಖಂಡದ ಝಂಬಿಯು ,ಜಿಂಬಾಬ್ವೆಮತ್ತು ಸ್ಕಾಟ್ಲ್ಯಾಂಡ್ ದೇಶವಿದೇಶಗಳಲ್ಲಿ ಅರಣ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪರಿಣಿತಿ ಪಡೆದಿರುತ್ತಾರೆ. ಅಷ್ಟೇ ಅಲ್ಲದೆಜಗತ್ಪ್ರಸಿದ್ದ ಇಂಗ್ಲೆಂಡ್ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರಣ್ಯ ಶಾಸ್ತ್ರದ ಅಧ್ಯಯನ ನಡೆಸಿದಂತಹ ಇವರ ಹಿರಿಮೆ ಅಕ್ಷರಶಃಅಸಾಧಾರಣವಾದದ್ದು. ತನ್ನ ನಿರಂತರ 1990 ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ

ಭಡ್ತಿಗೊಂಡು ಮಂಗಳೂರು ಮತ್ತು ಕಾರ್ಕಳದಲ್ಲಿ ಸೇವೆ ಸಲ್ಲಿಸಿರುತ್ತಾರೆ. ತನ್ನ ಸಾರ್ಥಕ್ಯ  ವೃತ್ತಿ ಪುಟದಲ್ಲಿ ಧೀಮಂತಿಕೆಯಿಂದಸುದೀರ್ಘ 35 ವರ್ಷದ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ 1995 ರಲ್ಲಿನಿವೃತ್ತಿಗೊಂಡಿರುವಂತಹ  ಟಾಕುಟೀಕೆಯ ಅಧಿಕಾರಿ.ಇವರು ರಾಜ ಗಾಂಭೀರ್ಯದ ಹುಲಿಯಂತೆ ಘರ್ಜಿಸುತ್ತ,ಯಾರನ್ನು ಲೆಕ್ಕಿಸದೆಧೈರ್ಯದಿಂದ ಸತ್ಯವನ್ನು ಕಡ್ಡಿ ತುಂಡಾದಂತೆ ಉಲ್ಲೇಖಿಸುವ ನಿಷ್ಠುರವಾದಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಭೃಷ್ಟರ ಪಾಲಿಗೆಸಿಂಹಸ್ವಪ್ನರಾಗಿರುವ ನಿವೃತ್ತ ಅಧಿಕಾರಿ ಪದ್ಮನಾಭ ಮಾಣಿಂಜರವರು ತುಳುನಾಡಿನ ಹೊನ್ನ ಕಲಶ.58B0C215 F8B5 42DD 82E3 68A2B5AF4013 E1630780349495

ಪದ್ಮನಾಭ ಮಾಣಿಂಜರವರು 1964 ರಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿ ಶ್ರೀಮತಿ ಇಂದಿರಾರವನ್ನು ಬಾಳ ತೇರಿಗೆ ಒಲುಮೆಯಸಂಗಾತಿಯನ್ನಾಗಿ ಸ್ವೀಕರಿಸಿ ಸಂಸ್ಕಾರಯುತ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಂಡು ಪ್ರಸ್ತುತ ಮೂರು ಗಂಡು ಮಕ್ಕಳುಹಾಗೂ ನಾಲ್ಕು ಮೊಮ್ಮಕ್ಕಳ  ಸವಿಜೇನ ಒಡನಾಟದ  ಕೂಡುಕುಟುಂಬದೊಂದಿಗೆ ಸುಖಿಸಂಸಾರದ ಪಯಣದಲ್ಲಿ ಸಫಲರಾಗಿದ್ದಾರೆ. ತನ್ನ ವೃತ್ತಿ ನಿರತ ಸಮಯದಲ್ಲೂ ಹಲವಾರು ಸಮಾಜಮುಖಿ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಷ್ಟೇಅಲ್ಲದೆ ತನ್ನ ನಿವೃತ್ತಿಯ ನಂತರವೂ ಸಹ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಶೈಲಿಯಲ್ಲಿ ಕೊಡುಗೆಯನ್ನು ನೀಡುತ್ತಾ ಸರ್ವರ ಹೃದಯದೀ ಪ್ರಶಂಸಾರ್ಹರಾಗಿರುತ್ತಾರೆ .

ಧಾರ್ಮಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕು ಕನ್ಯಾಡಿ ಶ್ರೀ ರಾಮಮಂದಿರದ ನಿರ್ಮಾಣದ ಕಾಲಾವಧಿಯಲ್ಲಿ ಅವಿರತ ಶ್ರಮದಿಂದ  ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು ತನುಮನಗಳಿಂದ ಸಹಕರಿಸುತ್ತ ಕನ್ಯಾಡಿ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿಸ್ವಾಮೀಜಿಯವರ ಆತ್ಮೀಯ ನಿಕಟವರ್ತಿಯಾಗಿರುತ್ತಾರೆ.

ಅಷ್ಟೇ‌ ಅಲ್ಲದೆ ಶ್ರೀರಾಮ ಕ್ಷೇತ್ರದ  ಟ್ರಸ್ಟಿಯಾಗಿರುತ್ತಾರೆ. ಹಾಗೇ ಗುರುದೇವ ಮಠ ನಿರ್ಮಾಣದಲ್ಲಿ ಸಂಪೂರ್ಣವಾಗಿತೊಡಗಿಸಿಕೊಂಡು ಕ್ಷೇತ್ರದ ಟ್ರಸ್ಟಿಯಾಗಿ ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ.4A8A30DA C204 4295 AA9F 4EE8CFE62934 E1630780415181

ಬ್ರಹ್ಮಶ್ರೀ ನಾರಾಯಣ ಗುರುವರ್ಯರ #ಸಂಘಟನೆಯಿಂದ ಬಲಯುತರಾಗಿರಿ #ಎನ್ನುವ ತತ್ವ ಸಂದೇಶಗಳ ಪರಿಪಾಲಕನಾಗಿ, ಅನುಯಾಯಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸ್ಥಾಪನೆಗೆ ಕೊಡುಗೈ ದಾನಿಯಾಗಿ ಹಾಗೂ#ನಾರಾಯಣ ಗುರು ವಾಣಿಜ್ಯ ಸಂಕೀರ್ಣ #ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು  ಪ್ರಸ್ತುತ ಎರಡನೇ ಬಾರಿ #ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಮಾಜಿಕ ಸೇವಾಕರ್ತರು. ಇವರು ಯಾವುದೇ ಪ್ರಚಾರಗಿಟ್ಟಿಸಿಕೊಳ್ಳದೇ ಅದೆಷ್ಟೋ ಸಂಘ ಸಂಸ್ಥೆಗಳಿಗೆ ಹೆಚ್ಚೆಚ್ಚು ದೇಣಿಗೆ ನೀಡುತ್ತ ಸಹಕರಿಸಿದ ಸಹಕಾರ ಮೂರ್ತಿ.

#ವಿದ್ಯೆಯಿಂದ ಸ್ವತಂತ್ರರಾಗಿರಿ #ವಿದ್ಯೆಯಿಂದ ಜ್ಞಾನ ಉಂಟಾಗುತ್ತದೆ  ಸಮಾಜದಲ್ಲಿ ಶಿಕ್ಷಣ ಪ್ರಸಾರಕ್ಕೆ  ಮಹತ್ವ ನೀಡುವ ಗುರು ತತ್ವಆದೇಶದಂತೆ ಹಿಂದುಳಿದ ಬಡ ವಿದ್ಯಾರ್ಥಿಗಳಿಗಾಗಿ ಗುರುದೇವ ಎಜುಕೇಶನಲ್ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದುಪ್ರಸ್ತುತ ಟ್ರಸ್ಟ್ ಉಪಾಧ್ಯಕ್ಷರಾಗಿರುತ್ತಾರೆ.11936192 2BFD 4FA9 B2D5 C4334D4724C9 E1630780500163

ರಾಷ್ಟ್ರೀಯ ರಬ್ಬರ್ ಬೋರ್ಡ್ ಮಾಜಿ

ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಪ್ರಬುದ್ಧತೆಯ ವ್ಯಕ್ತಿತ್ವ. ‌ಕುಕ್ಕಿನಡ್ಡ ಫ್ಯಾಮಿಲಿಯ ಟ್ರಸ್ಟಿ  ಅಧ್ಯಕ್ಷರಾಗಿ ಬೆಳ್ತಂಗಡಿ ರಬ್ಬರ್ಸೊಸೈಟಿ ಉಜಿರೆ  ಮಾಜಿ ಉಪಾಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿದ್ದು ಮಾತ್ರವಲ್ಲದೆ #ಮಾಸ್ ಲಿಮಿಟೆಡ್ ಮಂಗಳೂರು ಮಾಜಿನಿರ್ದೇಶಕರಾಗಿರುತ್ತಾರೆ. ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ ಎಂಬ ಗುರು ಸಂದೇಶಕ್ಕೆ ಸರಿಸಮನ್ವಯವಾಗುವಂತೆ  ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಮಾಜಿ ಶಾಸಕರಾದ ಶ್ರೀ ವಸಂತ ಬಂಗೇರ, ಶ್ರೀ.ಕೆ.ಜಿ ಬಂಗೇರ, ವಕೀಲರಾದ ಶ್ರೀಭಗೀರಥ.ಜಿ ಹೀಗೆ ಹತ್ತು ಹಲವು ಸಹಕಾರ ಮನೋಭಾವನೆಯುಳ್ಳ ಸಹಪಾಠಿಗಳನ್ನು ಸೇರಿಸಿಕೊಂಡು ಉತ್ತಮ ಸಾಮಾಜಿಕಹಿತಚಿಂತನೆಯುಳ್ಳ  ಆರ್ಥಿಕ ಸಂಸ್ಥೆಯಾದ #ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘ #ಹುಟ್ಟು ಹಾಕಿರುವುದು ನಿಜಕ್ಕೂಶ್ಲಾಘನೀಯ. ಸಂಸ್ಥೆಯ ಉನ್ನತಿಗಾಗಿ ಸತತವಾಗಿ ಹನ್ನೊಂದು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಬಯಸದೆ #ಶ್ರೀ ಗುರುದೇವವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿರುತ್ತಾರೆ.  ತನ್ನ ವೃತ್ತಿಜೀವನದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ಇವರು ಇಂದು ತನ್ನ ಪೂರ್ಣ ಪ್ರಮಾಣದ ಸಹಕಾರವನ್ನು ಸಾಮಾಜಿಕ, ಧಾರ್ಮಿಕ, ಆರ್ಥಿಕ ಸೇವಾ ರಂಗದಲ್ಲೂಮುಂದುವರಿಸಿಕೊಂಡು ಬಂದಿರುತ್ತಾರೆ. ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘವನ್ನು ಸಹಕಾರದ ಕ್ಷೇತ್ರದಲ್ಲಿ ಅಭಿವೃದ್ಧಿಯಪಥದಲ್ಲಿ ಸಾಗಿಸಿರುವುದು ಇವರ ದಕ್ಷ ಆಡಳಿತಕ್ಕೆ ಹಿಡಿದಂತಹ ಕೈಗನ್ನಡಿಯ ಪ್ರತಿರೂಪ. ಇವತ್ತು ಶ್ರೀ ಗುರುದೇವ ವಿವಿಧೋದ್ಧೇಶಸಹಕಾರ ಸಂಘ ನಿಯಮಿತ ರಾಜ್ಯಮಟ್ಟದ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರೆಅದಕ್ಕೆ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಪ್ರತಿಫಲ ಎಂದರೆ ತಪ್ಪಾಗಲಾರದು. 85 ವರ್ಷಕ್ಕೆ ಕಾಲಿಡುತ್ತಿರುವ ಇಳಿವಯಸ್ಸಿನಲ್ಲೂ ವೃತ್ತಿಯಲ್ಲಿ ತೋರಿಸುವ ನವಹುರುಪು, ಉಲ್ಲಾಸದ ಯುವಕನಂತಿರುವ ಇವರು ಇಂದಿಗೂ ಕಾರನ್ನುಚಲಾಯಿಸಿಕೊಂಡು ಹೋಗುವಂತಹ  ನವಚೈತನ್ಯಯುತ ಆರೋಗ್ಯ,ಹುಮ್ಮಸ್ಸನ್ನು ನೋಡಿದರೆ ಯುವ ಪೀಳಿಗೆಯನ್ನೇ  ನಾಚಿಸುವಂತಿದೆ. ಇವರ  ನಿಸ್ವಾರ್ಥ ಸೇವಾ ಮನೋಭಾವದ ಅವಧಿ ಫಲಪ್ರದವಾಗಿ ಪ್ರಸ್ತುತ 13 ಶಾಖೆಗಳನ್ನು ತೆರೆದಿದ್ದು ಮುಂದಿನಯೋಜನೆಯಡಿ 5 ಶಾಖೆಗಳನ್ನು ತೆರೆಯಲು ಸರಕಾರದಿಂದ ಅನುಮತಿ ಮಂಜೂರಾತಿಯಾಗಿರುತ್ತದೆ. ಈಗಾಗಲೇ ಬೆಳ್ತಂಗಡಿ ಕೇಂದ್ರಕಚೇರಿಗೆ ಒಂದು ಕೋಟಿ ರೂಪಾಯಿಯೊಳಗಿನ ನಿವೇಶನ ಹೊಂದಿದ್ದು,ಭವಿಷ್ಯದ ಕನಸಿನ ಕೂಸಿಗಾಗಿ ಸುಮಾರು 3.5 ಕೋಟಿರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದೆ. ಇವರ ಪ್ರಬಲ ಅಧ್ಯಕ್ಷತೆಯಲ್ಲಿ ಮುನ್ನಡೆಸಿಕೊಂಡುಬರುತ್ತಿರುವ ಶ್ರೀಗುರುದೇವ ವಿವಿದ್ಧೋದ್ಧೇಶ ಸಹಕಾರ ಸಂಘ(ನಿ.) ಸಂಸ್ಥೆಯು ಪ್ರಸ್ತುತ 50 ಸಿಬ್ಬಂದಿಗಳ ಕುಟುಂಬಕ್ಕೆಅನ್ನದಾಸೋಹಿಯಾಗಿ, ಆಶ್ರಯದಾತವಾಗಿರುವಂತಹುದು ಸಾಕ್ಷಾತ್ ಸೌಭಾಗ್ಯವೇ ಸರಿ.8C032270 7318 4189 A406 CD1681C46667 E1630780576413

ಬೆಳ್ತಂಗಡಿ ಮಾಜಿ ಶಾಸಕರಾದ  ಸನ್ಮಾನ್ಯ ಶ್ರೀಯುತ ವಸಂತ ಬಂಗೇರರ ಬಲು ತೀರದ ನಿಕಟವರ್ತಿಯಾಗಿದ್ದು, ಸಭೆಸಮಾರಂಭಗಳಲ್ಲಿ ವಸಂತ ಬಂಗೇರರಿಂದಪದ್ಮನಾಭ ಮಾಣಿಂಜರವರು ಹುಲಿಯೆಂದೇ ಉಲ್ಲೇಖಿಸಿ ವರ್ಣನೆಗಳೊಗಾದಹೆಮ್ಮೆಯ  ಅಧಿಕಾರಿ. ಇವರು ಕೇವಲ ಕಟ್ಟುನಿಟ್ಟಿನ ಸರ್ಕಾರಿ ಅಧಿಕಾರಿಯಾಗಿರದೇ ಕೈ ಕೆಸರಾದರೆ ಬಾಯಿ ಮೊಸರೆಂಬ ಮಾತಿಗೆಪುಷ್ಟಿ ನೀಡುವಂತೆ ಉತ್ತಮ ಕೃಷಿಕನಾಗಿಯೂ ಪಳಗಿ ರಬ್ಬರ್,ಹಣ್ಣು ಹಂಪಲು, ಅಡಿಕೆ, ತೆಂಗು, ಗೇರು ಬೆಳೆಗಾರನಾಗಿ ಸಮಾಜದ

ಯುವಜನಾಂಗಕ್ಕೆ ಮಾದರಿ ಯಶಸ್ವಿ ಕೃಷಿಕರಾಗಿರುತ್ತಾರೆ.A6D6AD0B 04A7 423D BA66 DEFC47AE50DF E1630780676491

ದೀಪದ ಪಾವಿತ್ರ್ಯವೂ ಲೋಕದ ಅಂಧಕಾರವನ್ನು ದೂರವಾಗಿಸಿ ಪ್ರಖರತೆಯ ಜ್ಯೋತಿ ನೀಡಿದಾಗ ಸಕಾರಾತ್ಮಕಬೆಳವಣಿಗೆಯಾಗುವುದು. ಹಾಗೇ ಇವರ ಹಿರಿತನದ ಸಾಧನೆಯ ಅನುಭವದ ಸಾರವು ಯುವಜನತೆಗೆ ಸ್ಪೂರ್ತಿಯಾಗಿ, ಮಾರ್ಗದರ್ಶಿಯಾಗಿ ಲೋಕಕ್ಕೆ ಮಾದರಿಯಾಗಲಿ, ಸಾಧನೆಯ ಗರಿ ಕೀರ್ತಿಪತಾಕೆ ಕಂಪು ಬಾನಂಗಳದ ಅಷ್ಟದಿಕ್ಕಿನಲ್ಲೂರಾರಾಜಿಸಲಿ, ಸಮಾಜಮುಖಿ ಕಲ್ಯಾಣದ ರೂಪುರೇಷೆಗಳು, ಆದರ್ಶ ಜೀವನದ ಮೌಲ್ಯಗಳು, ಪ್ರಾಮಾಣಿಕತೆ, ನೈತಿಕತೆ,

ಶಿಸ್ತು ಬದ್ಧತೆ ಪರರಿಗೆ ದಾರಿದೀಪವಾಗಲಿ. ದೈವ ದೇವರ ಕೃಪಾಕಟಾಕ್ಷವಿದ್ದು ಇನ್ನಷ್ಟು ಸಮಾಜ ಹಿತಚಿಂತನೆ ಅನಾವರಣವಾಗಲಿ,  ಮಿತಭಾಷಿಯಾಗಿ ಮಾತು  ಮಾಣಿಕ್ಯ, ಮೌನ ಬಂಗಾರವೆಂಬಂತೆ ಮಾತಿಗಿಂತ ಹೆಚ್ಚುತನ್ನ ಕೃತಿಗೆ ಒತ್ತು ಕೊಟ್ಟು ಅಚಲ ನಿರ್ಧಾರದದಿಟ್ಟ ಹೆಜ್ಜೆಯಿಂದ ಕಾರ್ಯ ಸಾಧಿಸುತ್ತ ಮಂದಸ್ಮಿತ ಭೂಷಣರಾಗಿ  ಗಮನಸೆಳೆದಿರುವ ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವದಅಪರೂಪದ ನೆಚ್ಚಿನ ಜನಮನನಾಯಕನಿಗೆ ಪದಪುಂಜದೀ ಹೆಣೆದಿಹ ಅಭಿಮಾನಗೌರವದ ಪುಷ್ಪಾರ್ಚನೆ ಅರ್ಪಣೆಯಾಗಲಿ

ಶುಭಾಶಂಸನೆಗಳೊಂದಿಗೆ

ಅರ್ಚನಾ ಎಂ ಬಂಗೇರ ಕುಂಪಲ


Leave a Reply

Your email address will not be published. Required fields are marked *