ತಾಳೆ ಮರದಿಂದ ಬಿದ್ದು ಪ್ರಕಾಶ್ ಕೆದ್ದೇಲು ಮೃತ್ಯು

0

ಬಂಟ್ವಾಳ: ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ.

WhatsApp Image 2022 01 28 At 10.54.36 AM E1643347980659

ಕೆದ್ದೇಲು ನಿವಾಸಿ ಪ್ರಕಾಶ್ ಕೆದ್ದೇಲು ಮೃತಪಟ್ಟ ವ್ಯಕ್ತಿ. ಗುರುವಾರ ಬೆಳಿಗ್ಗೆ 10.30 ರವೇಳೆ ಮನೆಯಿಂದ ಹೋಗಿದ್ದ ಪ್ರಕಾಶ್ ಅವರು ಮತ್ತೆ ಮನೆಗೆ ಬಂದಿದ್ದು ಶವವಾಗಿ.

ಕಳೆದ 20 ವರ್ಷಗಳಿಂದ ತಾಳೆ ಮರದಿಂದ ಶೇಂದಿ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಪ್ರಕಾಶ್ ಅವರು ಗುರುವಾರ ಕೂಡ ಅದೇ ಕಾಯಕದಲ್ಲಿ ಮುಂಜಾನೆ ಯಿಂದ ತೊಡಗಿಸಿಕೊಂಡಿದ್ದ ರು.

ಗುರುವಾರ ಬೆಳಿಗ್ಗೆ ಕೆಲವು ತಾಳೆ ಮರಗಳ ಮೂರ್ತೆದಾರ ಕೆಲಸ ಮುಗಿಸಿ ಬಾಕಿ ಉಳಿದ ಅತೀ ಎತ್ತರದ ಹಳೆಯ ತಾಳೆ ಮರದ ಶೇಂದಿ ತೆಗೆಯಲು ಮರ ಏರಿದ್ದರು. ತಾಳೆ ಮರದಲ್ಲಿ ಮೂರ್ತೆದಾರಿಕೆ ಮಾಡುತ್ತಿದ್ದ ವೇಳೆಯಲ್ಲಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.ಅಬಳಿಕ ಆಸ್ಪತ್ರೆಗೆ ದಾಖಲಾಗಿಸಲಾಯಿತಾದರೂ ಚಿಕಿತ್ಸೆ ನೀಡುವ ಮೊದಲೇ ಅವರು ಮೃತಪಟ್ಟಿದ್ದರು.

ಆದರೆ ವಿಧಿಯ ಆಟಕ್ಕೆ ಪ್ರಕಾಶ್ ಅವರು ಸಣ್ಣ ಪ್ರಾಯದಲ್ಲಿ ಯೇ ಬಲಿಯಾಗಿದ್ದಾರೆ. ಸುಮಾರು 11.30 ಸಮಯದಲ್ಲಿ ಸ್ಥಳೀಯರು ತಾಳೆ ಮರದ ಬುಡದಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಗಂಭೀರ ವಾಗಿ ತಲೆಗೆ ಗಾಯಗೊಂಡಿದ್ದರಿಂದ ಅದಾಗಲೇ ಪ್ರಕಾಶ್ ಮೃತ ಪಟ್ಟಿರುವುದಾಗಿ ವೈದ್ಯ ರು ತಿಳಿಸಿದ್ದಾರೆ .


Leave a Reply

Your email address will not be published. Required fields are marked *