08/08/2026

ತಮ್ಮ ಅನಾರೋಗ್ಯದ ನಡುವೆಯೂ ಆಸ್ಕರ್ ಆರೋಗ್ಯ ವಿಚಾರಿಸಿ ಕಣ್ಣೀರಿಟ್ಟ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ

0

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫರ್ನಾಂಡಿಸ್‌ ಅವರ ಆರೋಗ್ಯ ವಿಚಾರಿಸಲು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಗರದ ಯೆನಪೋಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಜನಾರ್ದನ ಪೂಜಾರಿ ಅವರು ತಮ್ಮಅನಾರೋಗ್ಯದ ಮಧ್ಯೆಯೂ ಆಪ್ತನ ಆರೋಗ್ಯ ವಿಚಾರಿಸಿ ಆಸ್ಕರ್ ಅವರ ಕುರಿತು ಮಾಧ್ಯಮದೊಂದಿಗೆ ಮಾತನಾಡುತ್ತಾ ಗದ್ಗದಿತರಾಗಿ ಕಣ್ಣೀರು ಹಾಕಿದರು.

ಹಲವು ತಿಂಗಳ ಬಳಿಕ ಜನಾರ್ದನ ಪೂಜಾರಿಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು , ಆಪ್ತ ಆಸ್ಕರ್ ಅವರ ಆರೋಗ್ಯ ಸ್ಥಿತಿ ಕಂಡು ಭಾವುಕರಾಗಿದ್ದಾರೆ.

ಕಣ್ಣೀರಿಡುತ್ತಲೇ ಭಾವುಕರಾಗಿ ಮಾತನಾಡಿದ ಪೂಜಾರಿ, “ಆಸ್ಕರ್ ಆರೋಗ್ಯವಾಗಿ ಬರುತ್ತಾರೆ. ದೇವರು ಅವರಿಗೆ ಸಹಾಯ ಮಾಡುತ್ತಾರೆ. ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.


Leave a Reply

Your email address will not be published. Required fields are marked *

You may have missed