08/08/2026

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ

0
Screenshot

Screenshot


  ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್ ಪೂಜಾರಿ ಪರಂಪರೆಯ ಕೌಟುಂಬಿಕ  ಹಿನ್ನಲೆಯ ಬೈದ್ಯೇರುಗಳ  ದರ್ಶನ ಪಾತ್ರಿಯಾಗಿ ಪ್ರಸಿದ್ದಿಯನ್ನು ಪಡೆದವರು. ಉಡುಪಿ ಜಿಲ್ಲೆಯ ಹಲವಾರು ಪ್ರಸಿದ್ದ ಗರೋಡಿಗಳಲ್ಲಿ ಸೇವೆ ಸಲ್ಲಿದವರು.ಪರಂಪರೆ, ಸಂಪ್ರದಾಯ, ಕಟ್ಟುಕಟ್ಟಲೆಗಳಿಗೆ ವಿಶೇಷ ಒತ್ತನ್ನು ನೀಡುತಿದ್ದ ಶ್ರೀ ಸುರೇಶ್ ಪೂಜಾರಿಯವರು ಬೈದ್ಯೇರುಗಳ ಸೇವೆಯನ್ನು ಕಾಯ ವಾಚಾ ಮನಪೂರ್ವಕವಾಗಿ ನೇರವೇರಿಸಿಕೊಂಡು ಬಂದವರು. ಸಮಕಾಲಿನ ಸ್ಥಿತ್ಯಂತರದ ನಡುವೆಯೂ ಕೂಡಾ ಬೈದ್ಯೇರುಗಳ ದರ್ಶನ ಪರಂಪರೆಗೆ ವಿಶೇಷ ಕಳೆಯನ್ನು ನೀಡಿದವರು ಇಂದು ಬೈದ್ಯೇರುಗಳ ಪಾದ ಸೇರಿರುವುದು ತುಳುನಾಡಿನ ಗರೋಡಿ ಪರಂಪರೆಗೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಆತ್ಮಕ್ಕೆ ಬೈದ್ಯೇರುಗಳು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.


Leave a Reply

Your email address will not be published. Required fields are marked *

You may have missed