ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ

0
79712837-eb56-4b15-a570-bfd8c844a4e1

ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ ಸಮಾಜದ ಐಕ್ಯತೆಗಾಗಿ  ಗೆಜ್ಜೆಗಿರಿ ಕ್ಷೇತ್ರದ ಮೂಲಕ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಹಾಗೂ ಕ್ಷೇತ್ರಾಡಳಿತ ಸಮಿತಿಗೆ ಶುಭ ಹಾರೈಸಿ ಗುರುದೇವರ  ಫೋಟೋ ನೀಡಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಕಾರ್ಕಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್, ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಉಡುಪಿ ಜಿಲ್ಲಾ ಸಂಚಾಲಕರಾದ ರಘುನಾಥ ಮಾಬಿಯಾನ್, ಉಡುಪಿ ಯುವವಾಹಿನಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು, ಗೆಜ್ಜೆಗಿರಿ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಅರವಿಂದ ಕೋಟ್ಯಾನ್ ಕಾಪು ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *