ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ

0
Screenshot

Screenshot


ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.

ಶ್ರೀ ರಾಜರಾಜೇಶ್ವರಿ ಭಜನ ಮಂಡಳಿ ಯವರ ಭಜನೆಯ ಮೂಲಕ‌ ಪ್ರಾರಂಭಗೊಂಡು ನಂತರ ಬಿಲ್ಲವ ಸಮಾಜದ ಪುಟಾಣಿ ಮಕ್ಕಳು, ಮಹಿಳೆಯರ ಹಾಗೂ ಪುರುಷರ ತಂಡಗಳ‌ ನೃತ್ಯ ಭಜನೆ ನೆರವೇರಿತು.

ಕಾರ್ಯಕ್ರಮದಲ್ಲಿ‌ ಅತ್ಯಧಿಕ  ಸಂಖ್ಯೆಯಲ್ಲಿ‌ ಭಕ್ತರು ಪಾಲ್ಗೊಂಡಿದ್ದು ಮಹಾಪೂಜೆಯ ನಂತರ  ಭಕ್ತರಿಗೆ ಮಹಾಪ್ರಸಾದ ಹಾಗೂ ಅನ್ನ ಸಂತರ್ಪಣೆಯೂ‌ ನಡೆಯಿತು.

ಮಹರ್ಷಿ ದರ್ಶನ ಖ್ಯಾತಿಯ ಶ್ರೀ ಆನಂದ ಗುರುಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಪ್ರಸಾದವನ್ನು ಸ್ವೀಕರಿಸಿದರು.

ಸಂಘಟನೆಯ ಅಧ್ಯಕ್ಷರಾದ ದೀಪಕ್ ಎಸ್ ಪಿ ಹಾಗೂ ಎಲ್ಲಾ ಪದಾಧಿಕಾರಿಗಳು ಪೂಜೆಯ ಸಿದ್ಧತೆ, ಪ್ರಸಾದ ಹಾಗೂ ಅನ್ನಸಂತರ್ಪಣೆಯ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.


Leave a Reply

Your email address will not be published. Required fields are marked *