07/08/2026

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು

0
bca3e3cd-5dce-4eb1-b44e-8b712ea48c6c

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಉಡುಪಿ ಜಿಲ್ಲೆಯ ಅಂಬಲಪಾಡಿ ವಿಠೋಬ ರುಕುಮಾಯಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಪೂಜಾರಿಯವರ ನೇತೃತ್ವದಲ್ಲಿ ಫೆಬ್ರವರಿ 12ರಂದು ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ನಾರಾಯಣ ಗುರು ಅರ್ಬನ್ ಕೊ.ಒಪ್. ಬ್ಯಾಂಕಿನ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್,ಗೋಪಾಲ್ ಬಂಗೇರಾ,ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತಿ ಇದ್ದರು.

ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಂದವರು ಪಾಲ್ಗೊಳ್ಳಬೇಕಾಗಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರು ವಿನಂತಿಸಿದರು.


Leave a Reply

Your email address will not be published. Required fields are marked *

You may have missed