ಮರ ಸೇಬು ಹಣ್ಣಿನ ಬಗ್ಗೆ ನಿಮಗೆ ತಿಳಿದಿರದ ಪ್ರಯೋಜನಕಾರಿ ಮಾಹಿತಿಗಳು

0

ಮಳೆಗಾಲದಲ್ಲಿ ಸಿಗುವ ಹಣ್ಣು ಪಿಯರ್ಸ್‌. ಇದನ್ನು ಮರಸೇಬು ಅಥವಾ ಪೇರಿಕಾಯಿ ಎಂದು ಕರೆಯುತ್ತಾರೆ. ಸೇಬಿನ ಆಕಾರವನ್ನುಕೊಂಚ ಹೋಲುವ ಈ ಮರ ಸೇಬು ಗುಣದಲ್ಲಿ ಭಿನ್ನವಾಗಿರುತ್ತದೆ. ಪ್ರಾಚೀನ ಕಾಲದಿಂದಲೂ ಪಿಯರ್ಸ್‌ನ್ನು ಪ್ರಪಂಚದಾದ್ಯಂತಉಪಯೋಗಿಸಲ್ಪಡುತ್ತದೆ. ಮೂಲ ಯೂರೋಪ್‌ ದೇಶದ್ದಾದರೂ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಇದನ್ನುಬೆಳೆಯಲಾಗುತ್ತದೆ. ಹಸಿರು ಬಣ್ಣವಿರುವ ಪಿಯರ್ಸ್‌ ಕೊಂಚ ಗಟ್ಟಿಯಾಗಿರುತ್ತದೆ. ಇದನ್ನು ನೋಡುವುದಕ್ಕೆ ಸ್ವಲ್ಪ ಪೇರಳೆ ಹಣ್ಣುಮತ್ತು ಸೇಬಿನ ಆಕಾರದಲ್ಲಿ ಇರುತ್ತದೆ. ಆದರೆ ಇದು ರುಚಿಯಲ್ಲಿ ಮತ್ತು ಗುಣದಲ್ಲಿ ಬೇರೆ ಬೇರೆಯಾಗಿರುತ್ತದೆ. ಪ್ರಾಚೀನಕಾಲದಿಂದಲೂ ಕೂಡ ಇದನ್ನು ಪ್ರಪಂಚದಂತೆ ಉಪಯೋಗ ಮಾಡುತ್ತಿದ್ದಾರೆ.26C2E13B 252C 4580 8EA5 A0EA9570B61A 1024x577

ದೇಹದ ಆರೋಗ್ಯ ಉತ್ತಮವಾಗಲು ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಸಮೃದ್ಧವಾದ ಪೌಷ್ಟಿಕಾಂಶ ಮತ್ತು ದೇಹಕ್ಕೆ ಬೇಕಾದಪ್ರೋಟೀನ್​ ಅಂಶಗಳನ್ನು ನೀಡುತ್ತವೆ. ಅಂತಹ ಹಣ್ಣುಗಳಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಸುಲಭವಾಗಿ ಸಿಗುವ ಮರ ಸೇಬುಹಣ್ಣುಗಳಲ್ಲಿ ಯಥೇಚ್ಛವಾದ ಫೈಬರ್​ ಅಂಶ ಅಡಕವಾಗಿದೆ. ಅದೇ ರೀತಿ ಕೊಕೋ ಮತ್ತು ಸೇಬುಹಣ್ಣುಗಳಲ್ಲಿರುವ ಕ್ಯಾಟೆಷಿನ್​ಗಳುಮರ ಸೇಬು ಹಣ್ಣಿನಲ್ಲಿವೆ. ಇವು ದೇಹವನ್ನು ಸುರಕ್ಷಿತವಾಗಿಡುತ್ತವೆ. ಇನ್ನೂ ಮುಖ್ಯವಾಗಿ ದೇಹದ ತೂಕ ಇಳಿಕೆಗೆ ಇದು ಸಹಾಯಕಏಕೆಂದರೆ ಮರ ಸೇಬು ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಅಂಶವಿದೆ.

pears coveer 1

ಹಸಿವೆಯನ್ನು ನಿಯಂತ್ರಿಸುತ್ತದೆ: ಫೈಬರ್​ ಅಂಶಗಳನ್ನು ಹೊಂದಿರುವ ಮರ ಸೇಬು ಹಣ್ಣು ಹಸಿವೆಯನ್ನು ನಿಯಂತ್ರಿಸುತ್ತದೆ. ಇದೇಕಾರಣದಿಂದ ಡಯೆಟ್​ಗೂ ಕೂಡ ಮರ ಸೇಬುಅತ್ಯುತ್ತಮ ಆಹಾರವಾಗಿದೆ. ಮಧುಮೇಹಿಗಳಿಗೂ ಉತ್ತಮ ಆಹಾರವಾಗಿರುವ ಮರಸೇಬು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಇನ್ನು ಈ ಹಣ್ಣನ್ನು ಸೇಬು ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಕಂಪೇರ್ ಮಾಡಿ ನೋಡುವುದಾದರೆ ಸೇಬುಹಣ್ಣಿನ ಗಿಂತ ಕಡಿಮೆಪೌಷ್ಟಿಕಾಂಶಗಳನ್ನು ಹೊಂದಿದ್ದರೂ ಕೂಡ ಇದರಲ್ಲಿ ಉತ್ತಮವಾದ ನಾರಿನಂಶ ಇದೆ. ಹಾಗಾಗಿ ಯಾರಿಗೆ ಮಲಬದ್ಧತೆಯ ಸಮಸ್ಯೆಇರುತ್ತದೆ ಅಂತಹವರು ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತೆ ಯಾರಿಗೆ ಮೂಲವೇದಿಅಂತಹ ಸಮಸ್ಯೆ ಇರುತ್ತದೆಯೋ ಅಂತ ಅವರಿಗೂ ಕೂಡ ಈ ಹಣ್ಣು ತುಂಬಾನೇ ಪ್ರಯುಕ್ತ. ಯಾಕೆಂದರೆ ಮೂಲವ್ಯಾದಿ ಮತ್ತುಮಲಬದ್ಧತೆಯಂತಹ ಸಮಸ್ಯೆಯಿದ್ದವರು ತುಂಬಾನೇ ನಾರಿನಂಶ ಇರುವಂತಹ ಆಹಾರವನ್ನು ಮತ್ತು ಹಣ್ಣನ್ನು ಹಂಪಲುಗಳನ್ನುಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಅವರು ಈ ಹಣ್ಣನ್ನು ಸೇವನೆ ಮಾಡಿದರೆ ತುಂಬಾನೆ ಒಳ್ಳೆಯದು.

ಪೇರಳೆ ಹಣ್ಣುಗಳನ್ನು ತಿನ್ನುವುದು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೇರಳೆಯಲ್ಲಿ ಸೋಡಿಯಂ ಕಡಿಮೆಇರುತ್ತದೆ, ಆದ್ದರಿಂದ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೂತ್ರಪಿಂಡದ ಕಾಯಿಲೆಯನ್ನುತಡೆಯಬಹುದು. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ದೇಹದಲ್ಲಿ ಸೋಡಿಯಂ ಮತ್ತು ನೀರನ್ನುಸಮತೋಲನಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಡಯಾಲಿಸಿಸ್ ಮತ್ತು ಚೇತರಿಕೆಯಿಂದ ನಿಮ್ಮನ್ನುತಡೆಯಲು ಕಡಿಮೆ ಸೋಡಿಯಂ ಆಹಾರವನ್ನು ಹೊಂದಿರುವುದು ಅತ್ಯಗತ್ಯ.

ಪಿಯರ್ಸ್‌ನ್ನು ರಸ ಮಾಡಿ ಸೇವಿಸುವ ಬದಲು ಉಪ್ಪು–ಖಾರದ ಜೊತೆಗೆ ಹಾಗೆ ಸೇವಿಸಿದರೆ ಅದರ ರುಚಿ ಹೆಚ್ಚುತ್ತದೆ. ಕಾಲದಲ್ಲಿಸಿಗುವ ಹಣ್ಣುಗಳನ್ನು ತಿಂದು ಅದರ ಪ್ರಯೋಜನ ಪಡೆದುಕೊಂಡರೆ ಪೌಷ್ಟಿಕಾಂಶದ ಕೊರತೆ ನೀಗಿಸಬಹುದು.


Leave a Reply

Your email address will not be published. Required fields are marked *