ಯುವವಾಹಿನಿ (ರಿ) ಬೆಂಗಳೂರು ಘಟಕದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ತ ಜನನಿ ಹೆಣ್ಣು, ಜಗದ ಕಣ್ಣು-2021

0

ಯುವವಾಹಿನಿ (ರಿ) ಬೆಂಗಳೂರು ಘಟಕದಲ್ಲಿವಿಶ್ವ ಮಹಿಳಾ ದಿನಾಚರಣೆ ಯ ನಿಮಿತ್ತ ಜನನಿ ಹೆಣ್ಣು, ಜಗದ ಕಣ್ಣು, ಮನೆ ಮಂದಿರಕ್ಕೆ ಮಂದಾರ ಪುಷ್ಪ ಎಂಬ ಕಾರ್ಯಕ್ರಮವನ್ನು 2021 ಮಾರ್ಚ್ 21ರ ಭಾನುವಾರ , ನಂದಿನಿ ಲೇಔಟ್ ನ ಸರ್ಕ್ಯುಲರ್ ಪಾರ್ಕ್ ಎಂಬಲ್ಲಿ ಬಹಳ ವಿಜ್ರಂಭಣೆಯಿಂದ ಆಚರಿಸಿಕೊಳ್ಳಲಾಯಿತು.

AF2FFBF2 8924 4F3C 8908 5CFAEFADF9A5 E1616461853670

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅವರು ಯುವವಾಹಿನಿ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವನೆ ಇಟ್ಟು ಸಭೆಗೆ ಅತಿಥಿಗಳೆಲ್ಲರನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀಯುತ ವೇದಕುಮಾರ್  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ನಾರಾಯಣ ಗುರುಗಳು ತೋರಿಸಿದ ಮಾರ್ಗದ ಅಡಿಪಾಯದಲ್ಲಿ ಸಮಾಜದ ಒಗ್ಗಟ್ಟಿಗೆ ಕರೆಕೊಟ್ಟರು. ಎಲ್ಲರ ಒಗ್ಗಟ್ಟಿನೊಂದಿಗೆ ನಾರಾಯಣಗುರು ನಿಗಮದ ಸ್ಥಾಪನೆಗೆ ಸರ್ಕಾರವನ್ನು ಮತ್ತೊಮ್ಮೆ ನಾವೆಲ್ಲರೂ ಮನವೊಲಿಸಬೇಕೆಂದು ಕೇಳಿಕೊಂಡರು.29B90842 E218 4EDA 95B8 487253720878

ಬಳಿಕ ಸಮಾಜದಲ್ಲಿ ಸಾಧನೆಗೈದ ಮಹಿಳೆಯರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾಕ್ಟರ್ ಉಷಾ ಮೋಹನ್ ಮಹಿಳೆಯರ ಸ್ವಾವಲಂಬಿಗಳಾಗಿ ಸಮಾಜಕ್ಕೆ ಇನ್ನಷ್ಟು ಕೊಡುಗೆಗಳನ್ನು ಕೊಡಬೇಕು ಎಂದು ಹೇಳಿದರು. ಮಕ್ಕಳ ರಕ್ಷಣೆ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಚಿತ್ರಾ ಅಂಚನ್ ಅವರು ಸನ್ಮಾನವನ್ನು ಸ್ವೀಕರಿಸಿ 1098 ಚೈಲ್ಡ್ ಹೆಲ್ಪ್ ಲೈನ್ ಬಗ್ಗೆ ತಿಳಿಹೇಳಿದರು.

ಶ್ರೀಮತಿ ಮೀನಾ ಮತಿನ ಅವರು ತಮಗೆ ಯುವವಾಹಿನಿ ತಂಡದಿಂದ ಸಿಕ್ಕ ಗೌರವಕ್ಕೆ ಕೃತಜ್ಞತೆಯನ್ನು ಅರ್ಪಿಸಿ ಶ್ರೀ ನಾರಾಯಣ ಗುರುಗಳ ತತ್ವದಂತೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು.4A5EA053 616D 488B 8F89 14E1DE67A214 E1616462400459

ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮೂಡಿಬಂದ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್ (ACP) ಶ್ರೀಮತಿ ರೀನಾ ಸುವರ್ಣ ಇವರು ಸನ್ಮಾನವನ್ನು ಸ್ವೀಕರಿಸಿ, ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿ, ಕೆಲಸದ ಒತ್ತಡ ಹಾಗೂ ಸಮಾಜ ಸೇವಾಕಾರ್ಯಗಳ ನಡುವಿನ ಸಮತೋಲನವನ್ನು ಕಾಪಾಡುವುದು ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ ಎಂದರು.

ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ರೇಷ್ಮಾ ಯತೀಶ್* ಇವರು ರಾಷ್ಟ್ರೀಯ ಮಟ್ಟದ ತಮ್ಮ ಸಾಧನೆಯ ಮೈಲುಗಲ್ಲನ್ನು ಸಭೆಯ ಮುಂದೆ ತೆರೆದಿಟ್ಟರು.

ಯುವವಾಹಿನಿ ಬೆಂಗಳೂರು ಘಟಕದ ಹಿರಿಯ ಮಹಿಳಾ ಸದಸ್ಯೆ ಮತ್ತು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂತಹ ಶ್ರೀಮತಿ ರುಕ್ಮಿಣಿ ರಾಮಕೃಷ್ಣ* ಇವರನ್ನು ಕೂಡ ಸನ್ಮಾನಿಸಲಾಯಿತು.FD48C520 D7BE 45B4 97B1 8608FA024246 E1616462481961

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಯುತ ಗೋವಿಂದ ಬಾಬು ಪೂಜಾರಿ* ಅವರು ಮತ್ತೊಮ್ಮೆ ಯುವವಾಹಿನಿಯ ಸಾಧನೆಗಳನ್ನು ಕೊಂಡಾಡಿ ಯುವಕರನ್ನು ಪ್ರೋತ್ಸಾಹಿಸಿ, ಸಂಘಟನೆಗಳಿಂದ ಇನ್ನಷ್ಟು ಯುವ ಸಮಾಜ ಬಲಯುತವಾಗಬೇಕು. ಮಹಿಳೆಯರು ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಸ್ಥಳದಾನ ಮಾಡಿದಂತಹ ನಂದಿನಿ ಲೇಔಟ್ ವಾರ್ಡ್ ನ ಮಾಜಿ ಕಾರ್ಪೊರೇಟರ್ ಆದ ಶ್ರೀ ರಾಜೇಂದ್ರ ಕುಮಾರ್ ಕೆ ವಿ ಅವರು ಯುವ ಸಂಘಟನೆಗಳ ಮೂಲಕ ಮಹಿಳೆಯರ ಬಲವರ್ಧನೆ ಯಾಗಬೇಕು ಎಂದು ಹೇಳಿದರು.


Leave a Reply

Your email address will not be published. Required fields are marked *