ಮಾರ್ಚ್ 6ರಿಂದ 13ರವರೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ವಾರ್ಷಿಕ ಜಾತ್ರೆ, ಮಹಾ ಶಿವರಾತ್ರಿ ಮಹೋತ್ಸವ

0

ಮಾರ್ಚ್ 6ರಿಂದ 13ರವರೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ವಾರ್ಷಿಕ ಜಾತ್ರೆ, ಮಹಾ ಶಿವರಾತ್ರಿ ಮಹೋತ್ಸವ505A7580 7410 4877 BBF6 D5ACB63F06B5 E1614848840142

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಾರ್ಚ್ 6ರಿಂದ 13ರ ವರೆಗೆ ವರ್ಷಾವಧಿ ಜಾತ್ರೆ ಮತ್ತು ಮಹಾಶಿವರಾತ್ರಿ ಮಹೋತ್ಸವ ಆಚರಣೆ ಜರುಗಲಿದೆ.
ಮಾರ್ಚ್ 6: ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜಪೂಜೆ, ಬೆಳಗ್ಗೆ 10.35ಕ್ಕೆ ಧ್ವಜಾರೋಹಣ, ತೈಲಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ, 8 ಗಂಟೆಗೆ ಮಹಾಪೂಜೆ, ಬಲಿ ಉತ್ಸವ , ಶಯನೋತ್ಸವ.
ಮಾರ್ಚ್ 7: ಬೆಳಗ್ಗೆ 10.30ಕ್ಕೆ ಮಹಾ ಮೃತ್ಯುಂಜಯ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ, ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ. 8ಗಂಟೆಗೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 8: ಬೆಳಗ್ಗೆ 10.30ಕ್ಕೆ ಶಿವ ಶಾಸ್ತ್ರನಾಮ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ, ರಾತ್ರಿ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 9:ಬೆಳಗ್ಗೆ 10.30ಕ್ಕೆ ಶಿವ ಪಂಚಾಕ್ಷರಿ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ ರಾತ್ರಿ 7ರಿಂದ 8ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 10: ಬೆಳಗ್ಗೆ 8.15ಕ್ಕೆ ಮಹಾರುದ್ರ ಹೋಮ ಪ್ರಾರಂಭ, ಪಾರ್ವತಿ – ಪರಮೇಶ್ವರ ಯಜ್ಞಮಂಟಪ ಪ್ರವೇಶ ಮತ್ತು ಹಗಲೋತ್ಸವ ಬಲಿ. ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ ರಾತ್ರಿ 7ರಿಂದ 8ರ ತನಕ ಭಜನಾ ಕಾರ್ಯಕ್ರಮ. 8ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಮಾರ್ಚ್ 11:ಬೆಳಗ್ಗೆ 9.30ಕ್ಕೆ ಉಮಾಮಹೇಶ್ವರ ಹೋಮ, 11ಕ್ಕೆ ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, ಮಧ್ಯಾಹ್ನ 1ಕ್ಕೆ ಮಹಾಪೂಜೆ. ರಾತ್ರಿ 8ಕ್ಕೆ ಸೇವಾ ರಥೋತ್ಸವ, 10ಕ್ಕೆ ವಿಷ್ಣುಬಲಿ ಉತ್ಸವ ಮತ್ತು ರಥೋತ್ಸವ. ರಾತ್ರಿ 1ಕ್ಕೆ ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ , ರಥೋತ್ಸವ , ಕೆರೆದೀಪ , ಮಂಟಪ ಪೂಜೆ.
ಮಾರ್ಚ್: 12:ಬೆಳಗ್ಗೆ 10ಕ್ಕೆ ತತ್ವ ಹೋಮ, ಮಧ್ಯಾಹ್ನ 12.30ಕ್ಕೆ ಪಂಚಾಮೃತಾಭಿಷೇಕ , ಮಹಾಪೂಜೆ. ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ. ರಾತ್ರಿ 2ರಿಂದ ಭೂತ ಬಲಿ, ಬಲಿಪೂಜೆ, ಅವಭೃತ ಸ್ನಾನ (ಓಕುಳಿ).
ಮಾರ್ಚ್ 13: ಮಧ್ಯಾಹ್ನ 11ಕ್ಕೆ ಧ್ವಜಾವರೋಹಣ. ರಾತ್ರಿ 8ಕ್ಕೆ ಗುರುಪೂಜೆ ಜರುಗಲಿದೆ.
‌ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಕ್ಷೇತ್ರಾಡಳಿತ ಸಮಿತಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ


Leave a Reply

Your email address will not be published. Required fields are marked *