*ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.

0

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಸತ್ಯಪುರುಷರಾದ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.C1FAB1C9 EAFF 4E08 860C 6591B90644FA

ಪಂಚವರ್ಣದ ಪುಣ್ಯಮಣ್ಣಿನಲ್ಲಿ ಸತ್ಯ,ಧರ್ಮ, ನ್ಯಾಯ, ನೀತಿಗೆ ಬದ್ದರಾಗಿ ಸತ್ಕಾರ್ಯದ ಸೇವೆಗಳನ್ನು ನಿರ್ವಹಿಸಿ ಅಮರೈಕ್ಯರಾದ ಕೋಟಿಚೆನ್ನಯರು ಸಮಸ್ತ ಜನಮಾನಸದಲ್ಲಿ ಪ್ರಾತಃಸ್ಮರಣೀಯರಾಗಿ ನೆಲೆಗೊಂಡಿದ್ದಾರೆ.ಅವಳಿ ಜಿಲ್ಲೆಯ ಸಮಗ್ರ ಉದ್ದಾರದಲ್ಲಿ ಜೋಡು ನಂದಾದೀಪವಾಗಿ ದಾರಿತೋರುತ್ತಿರುವ ಕೋಟಿಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕೆನ್ನುವುದು ಬಹು ಸಮಯದ ಸರ್ವಸಮ್ಮತ ಬೇಡಿಕೆಯಾಗಿದೆ.ಅರಾಧನಾ ಅಂಶವಾಗಿ ಕೋಟಿಚೆನ್ನಯರು ಜಾತ್ಯಾತೀತವಾಗಿ ಸ್ವೀಕೃತಗೊಂಡಿದ್ದಾರೆ.ಅಧಿಕಾರಸ್ಥರು ಇಚ್ಛಾಶಕ್ತಿಯಿಂದ ಮಾಡಬೇಕಿದ್ದ ಕಾರ್ಯವೊಂದು ಇನ್ನಿಲ್ಲದ ನೆಪಗಳ ನಡುವೆ ಪ್ರಸ್ತುತ ಪದೇ ಪದೇ ಸುದ್ದಿಗ್ರಾಸವಾಗುತ್ತಿರುವುದು ವಿಷಾದನೀಯ. ಕೋಟಿಚೆನ್ನಯರ ಹೆಸರಿಡುವುದಕ್ಕೆ ಪ್ರಶ್ನಾತೀತವಾದ ಅಂಶಗಳಿದೆ ಮತ್ತು ಸೂಕ್ತವೂ, ಸಮರ್ಥನೀಯವೂ ಆಗಿದೆ.
ಈ ಕುರಿತಂತೆ ನಾವು ಜಾಗೃತಿಗೊಳ್ಳುವ ಸಮಯ ಬಂದಿದ್ದು ಸಮಸ್ತ ತುಳುನಾಡಿನಾದ್ಯಂತ ಕೋಟಿಚೆನ್ನಯರ ಪವಿತ್ರ ಆರಾಧ್ಯ ತಾಣಗಳಾದ *ಗರೋಡಿ ಸ್ಥಾನದವರು* ಒಮ್ಮತದಿಂದ ಈ ಅಭಿಯಾನದ ಕುರಿತು ಮನವಿಯನ್ನು ನೀಡುವಂತಹ ನಿರ್ಣಯವನ್ನು ತಕ್ಷಣವೇ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆಯು ವಿನಮ್ರವಾಗಿ ವಿನಂತಿಸಿಕೊಳ್ಳುತ್ತದೆ. ಎಲ್ಲಾ ಗರೋಡಿಗಳಲ್ಲಿ ಜಾತ್ಯಾತೀತ ನೆಲೆಯಲ್ಲಿ ಸತ್ಯನಿಷ್ಠವಾಗಿ ನಿಮ್ಮ ಪ್ರಯತ್ನ ಜರಗಲಿ.ಮತ್ತು ಈ ಅಗತ್ಯ ಕಾರ್ಯದ ಕುರಿತು ಯಾವುದೇ ರಾಜಕೀಯವನ್ನು ಮತ್ತು ಪ್ರತಿಷ್ಠೆಯನ್ನು ಹೊರತು ಪಡಿಸಿ ಪಕ್ಷಾತೀತವಾಗಿ ನಾವೆಲ್ಲರೂ ಸಂಘಟಿತರಾಗಿ ಮುನ್ನಡೆಯಲು ನಿರ್ಧರಿಸೋಣ..ಸಹಕಾರವಿರಲಿ.

 

FC9984A5 CCC1 472A 929F 43EF36A1FF3D 150x150

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವಸದಸ್ಯರು,
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ),


Leave a Reply

Your email address will not be published. Required fields are marked *