ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯ ಸೋಮೇಶ್ವರದಲ್ಲಿ ಕರಾವಳಿಯ ಶ್ರೇಷ್ಠ ಸಾಹಿತಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ

0

ಕತೆ, ಕಾದಂಬರಿಗಾರ, ನಟ ನಿರ್ದೇಶಕ, ಪತ್ರಕರ್ತ ಹಾಗೂ ರಾಜಕಾರಣಿ ಹೀಗೆ ತನ್ನ ಐದು ದಶಕಗಳ ಯಶೋಗಾಥೆಯ ಬದುಕಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಈ ನಾಡು ಕಂಡ, ಕರಾವಳಿಯ ಶ್ರೇಷ್ಠ ಸಾಹಿತಿ ವಿಶುಕುಮಾರ್ ರವರ ಸ್ಮರಣಾರ್ಥ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೊಲ್ಯ ಸೋಮೇಶ್ವರದಲ್ಲಿ ಜರುಗಿತು.

WhatsApp Image 2021 11 08 At 4.53.00 PM

ವಿಶುಕುಮಾರ್ ರವರು ಅತ್ಯಲ್ಪ ಕಾಲ ಬದುಕಿದರೂ, ಅವರು ಬದುಕಿದ ರೀತಿ ಈ ಸಮಾಜಕ್ಕೆ ಮಾದರಿ. ನೇರಾನೇರ ವ್ಯಕ್ತಿತ್ವದ, ಪ್ರಶ್ನಾತೀತ ವ್ಯಕ್ತಿಯಾಗಿರುವ, ಈ ನಾಡು ಕಂಡ ಶ್ರೇಷ್ಠ ಸಾಹಿತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಅವರ ಹೆತ್ತವರು ಪೂಜನೀಯರು ಎಂದು ವಿಶುಕುಮಾರ್ ಪ್ರಶಸ್ತಿ ಯನ್ನು ಸ್ವೀಕರಿಸಿ ಮಾತನಾಡಿದ ಇತಿಹಾಸ ಮತ್ತು ಜನಪದ ಸಂಶೋಧಕರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ ಬಂಟ್ವಾಳದ ಅಧ್ಯಕ್ಷರಾಗಿರುವ ಡಾ.ತುಕರಾಮ ಪೂಜಾರಿಯವರು ಅಭಿಮತ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆಗೈದು ಮಾತನಾಡಿದ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ರಿ ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಕೊಲ್ಯರವರು ಈ ಕರಾವಳಿಯಲ್ಲಿ ಹುಟ್ಟಿ ಬೆಳೆದ ಓರ್ವ ಅದ್ಭುತ ಸಾಹಿತಿಯ ಹೆಸರನ್ನು ನೆನಪಿಸುವ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ ಎಂದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಯು.ಟಿ.ಖಾದರ್ ರವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮಗಳು, ಶಿಕ್ಷಣ, ಸಾಹಿತ್ಯ, ಔದ್ಯೋಗಿಕ ಕ್ಷೇತ್ರದಲ್ಲಿ ಯುವಪೀಳಿಗೆಗಳ ಅಭ್ಯುದಯಕ್ಕೆ ಮಾದರಿ ಎಂದು ಶ್ಲಾಘಿಸಿದರು.

WhatsApp Image 2021 11 08 At 4.53.01 PM

ಇದೇ ಸಂದರ್ಭದಲ್ಲಿ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತಿರುವ ಯುವಸಾಹಿತಿ ಶ್ರೀ ಇಂದುಚೇತನ ಬೋರುಗುಡ್ಡೆ ಇವರಿಗೆ ಪ್ರದಾನಗೈಯಲಾಯಿತು.

ವಿಶುಕುಮಾರ್ ಪ್ರಶಸ್ತಿ ಪ್ರದಾನಗೈದ ಶಿಕ್ಷಣ ತಜ್ಞ, ರಂಗಭೂಮಿ ಕಲಾವಿದರೂ ಆಗಿರುವ ಶ್ರೀ ಮಹಾಬಲೇಶ್ವರ ಟಿ ಹೆಬ್ಬಾರ್ ರವರು ಯಾವುದೇ ಪ್ರಶಸ್ತಿಗಳಿಗೆ ತನ್ನದೇ ಆದ ಮೌಲ್ಯಗಳಿವೆ, ತೂಕಗಳಿವೆ. ಈ ನಾಡು ಕಂಡ ಶ್ರೇಷ್ಠ ಸಾಹಿತಿಯ ಹೆಸರಿನಲ್ಲಿ ಕೊಡಮಾಡಲ್ಪಡುವ ಪ್ರಶಸ್ತಿಯು ಅರ್ಹ ವ್ಯಕ್ತಿಗೆ, ಸೂಕ್ತ ಸಮಯದಲ್ಲಿ ಒದಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಶ್ರೀ ಭಾಸ್ಕರ್ ರೈ ಕುಕ್ಕುವಳ್ಳಿಯವರು ಯುವಸಾಹಿತಿ ಪ್ರಶಸ್ತಿಯನ್ನು ಪ್ರದಾನಗೈದು ಶುಭಾಶಂಸನೆಯ ನುಡಿಗಳನ್ನಾಡಿದರು.

ವಿಶುಕುಮಾರ್ ರವರ ಸಾಹಿತ್ಯ ಕ್ಷೇತ್ರದ ನೆನಪು ಇಂದಿನವರೆಗೂ ಶಾಶ್ವತವಾಗಿ ನೆಲೆಸುವಂತೆ ಹಗಲಿರುಳು ಶ್ರಮಿಸಿದ ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಪ್ರಭಾಕರ ನೀರುಮಾರ್ಗ ಮತ್ತು ಶ್ರೀ ಟಿ. ಶಂಕರ ಸುವರ್ಣರವರನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೌರವಿಸಲಾಯಿತು.

WhatsApp Image 2021 11 08 At 4.52.59 PM E1636370914336

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವವಾಹಿನಿ ರಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ಯವರು ನಮ್ಮ ಸಮಾಜದಲ್ಲಿ ಸಾಹಿತ್ಯದ ಯುವಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬರಬೇಕು, ಸಮಾಜದ ಅಂಕುಡೊಂಕುಗಳು, ಭ್ರಷ್ಟತೆಗಳನು ಸರಿಪಡಿಸುವ ಸಾಮರ್ಥ್ಯ ಲೇಖನಿಗಿದೆ. ಸಾಹಿತ್ಯವೆಂಬುದು ಒಂದು ಶಕ್ತಿ ಎಂದು ಈ ಮೂಲಕ ಯುವವಾಹಿನಿಯ ಧ್ಯೇಯೋದ್ದೇಶಗಳಲ್ಲಿ ಸಾಹಿತ್ಯದ ಅಗತ್ಯತೆಯನ್ನು ಅರುಹಿದರು.

ಕಾರ್ಯಕ್ರಮದ ಆರಂಭದಲ್ಲಿ ಯುವವಾಹಿನಿ ರಿ ಕೊಲ್ಯ ಘಟಕದ ಸದಸ್ಯರು ಗುರುಶ್ಲೋಕ ಮತ್ತು ನಾಡಗೀತೆಯನ್ನು ಹಾಡಿದರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕರಾದ ಶಶಿಧರ್ ಕಿನ್ನಿಮಜಲು ಸ್ವಾಗತಿಸಿದರು. ಯುವವಾಹಿನಿ ರಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಲಹೆಗಾರರು ಆಗಿರುವ ಟಿ.ಶಂಕರ್ ಸುವರ್ಣರವರು ಪ್ರಸ್ತಾವನೆಗೈದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿ ಯುವವಾಹಿನಿ ರಿ ಕೊಲ್ಯ ಘಟಕದ ಮಾಜಿ ಕಾರ್ಯದರ್ಶಿಯಾಗಿರುವ ಆನಂದ್ ಆಮೀನ್ ಸೋಮೇಶ್ವರರವರಿಗೆ ನುಡಿನಮನವನ್ನು ಸಲ್ಲಿಸಿ ಒಂದು ನಿಮಿಷದ ಮೌನಾಚರಣೆನ್ನು ನಡೆಸಲಾಯಿತು.

ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕೋಶಾಧಿಕಾರಿಯಾದ ಶ್ರೀ ಮನೋಜ್ ರವರು ವಿಶುಕುಮಾರ್ ಪ್ರಶಸ್ತಿ ಪಡೆದ ಡಾ.ತುಕರಾಮ್ ಪೂಜಾರಿಯವರ ಪರಿಚಯ ಪತ್ರವನ್ನು ವಾಚಿಸಿದರು. ಯುವವಾಹಿನಿ ರಿ ಕೊಲ್ಯ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶ್ರೀ ಜೀವನ್ ಕೊಲ್ಯರವರು ಯುವಸಾಹಿತಿ ಪ್ರಶಸ್ತಿಗೆ ಭಾಜನರಾದ ಶ್ರೀ ಇಂದುಚೇತನ ಬೋರುಗುಡ್ಡೆಯವರ ಪರಿಚಯ ಪತ್ರವನ್ನು ವಾಚಿಸಿದರು.

ಅಕ್ಷಯ ಚೆಂಡೆ ಬಳಗ ನೀರುಮಾರ್ಗ ಇವರಿಂದ ಮೂಡಿಬಂದ ಚೆಂಡೆ ನರ್ತನ ಸಭಿಕರ ಮನಸೂರೆಗೊಂಡಿತು. ಇದೇ ಸಂದರ್ಭದಲ್ಲಿ ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯ ಶಿಬಿರವನ್ನು ಆಯೋಜಿಸಲಾಯಿತು.

ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಮೋಹನ್ ಮಾಡೂರುರವರು ಧನ್ಯವಾದ ಸಮರ್ಪಿಸಿದರು. ಪ್ರಜ್ಞಾ ಒಡಿಲ್ನಾಳ ಮತ್ತು ದಯಾನಂದ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.   WhatsApp Image 2021 11 08 At 4.53.04 PM1

WhatsApp Image 2021 11 08 At 4.53.04 PM1 WhatsApp Image 2021 11 08 At 4.53.04 PM

WhatsApp Image 2021 11 08 At 4.53.04 PM


Leave a Reply

Your email address will not be published. Required fields are marked *