ಪಣಂಬೂರು-ಕುಳಾಯಿ ಘಟಕ ನೊಂದವರ ಬಾಳಿಗೆ ಆಶಾ ಕಿರಣ

0

ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ.  ಹೌದು ಮಿತ್ರರೇ ಇದಕ್ಕೆ ಸಾಕ್ಷಿ ಸುರತ್ಕಲ್ ಇಡ್ಯಾ ಗ್ರಾಮದ ಜನತಾಕಾಲೋನಿ ನಿವಾಸಿ ಉಮೇಶ್ ಮತ್ತು ಮೀರಾ ದಂಪತಿಗಳು. ಇವರಿಗೆ ಇಬ್ಬರು ಮಕ್ಕಳು. ಪವನ್ ಹುಟ್ಟಿನಿಂದಲೇ ಅಂಗವಿಕಲ. ಇದೀಗ ಅವನಿಗೆ 14 ವರ್ಷ ಪ್ರಾಯ. ಶರೀರದಲ್ಲಿ ಬಲವಿಲ್ಲದೆ ತಾಯಿಯನ್ನೇ ಆಶ್ರಯಿಸಿದ್ದು .ತಂದೆ ಹೃದಯ ಸಂಬಂದಿಸಿದಕಾಯಿಲೆಯಿಂದ ಬಳಲು ತ್ತಿದ್ದರೂ 89CBB521 9F32 4C49 AAED 96A7841EED96 E1626543249674ಜೀವನೋಪಾಯಕ್ಕೆ ಹೋಟೆಲ್ ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಇವರ ಕಷ್ಟದ ದಿನಗಳಲ್ಲಿ ಸದಾಭಾಗಿಯಾಗುತ್ತಾ.. ಯುವವಾಹಿನಿ ಪಣಂಬೂರುಕುಳಾಯಿ ಘಟಕ ಗುರುತಿಸಿ ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರ ಮುಂದಾಳತ್ವದಲ್ಲಿ, ಘಟಕದ ಸದಸ್ಯರುಗಳಿಂದ, ಹಾಗೂ ಕೊಡುಗೈ ದಾನಿಗಳ ನೆರವಿನಿಂದ  ಅಂಗವಿಕಲನಾಗಿರುವ ಪವನ್ ಗೆಎರಡು ಕಾಲುಗಳಿಗೆ ಬಲ ಬರಲು 32,500/- ಬೆಲೆಯ ” Ankle boot ” ಮಾಡಿಸಿ ಕೊಡಲಾಯಿತು. ಅಲ್ಲದೆ ಹೆಣ್ಣು ಮಗಳವಿದ್ಯಾಭ್ಯಾಸಕ್ಕೆ ನೆರ ವಾಗಲೆಂದು,ನಮ್ಮ ಘಟಕದ ಸದಸ್ಯರಾದ   ಶಶಾಂಕ್ ಕೋಟ್ಸ್ಯೆಯ್ಯಾಡಿ, ಮಂಗಳೂರಿನ ಮಾಲಕರಾದಶ್ರೀ ಬಾಲಕೃಷ್ಣ N.ರವರ ನೆರವಿನೊಂದಿಗೆ  5000/-ರೂಪಾಯಿಯನ್ನು ದಿನಾಂಕ 13.7.2021ರಂದು ಘಟಕದ ಅಧ್ಯಕ್ಷರಾದ ಹರೀಶ್  ಪೂಜಾರಿ ಯವರು ಹಸ್ತಾoತರಿಸಿದರು. ಇದೇ  ಬಡ ಕುಟುಂಬಕ್ಕೆ  ನಮ್ಮ ಘಟಕವು ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರನೇತೃತ್ವದಲ್ಲಿ 2014-15 ರಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿತ್ತು. ಕಾರ್ಯಕ್ರಮದಲ್ಲಿ ಘಟಕದಅಧ್ಯಕ್ಷರಾದ ಹರೀಶ್ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಸಂಜೀವಸುವರ್ಣ,ಸದಾನಂದ ಪೂಜಾರಿ ಕುಳಾಯಿ.. ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *