08/08/2026

‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯ: ಆರ್. ಪದ್ಮರಾಜ್

0

ಮಂಗಳೂರು: ಮಂಗಳೂರು ದಸರಾ ಮಹೋತ್ಸವ ವಿಶ್ವವಿಖ್ಯಾತವಾಗಿದ್ದು, ಈ ಬಾರಿಯೂ ಸಂಪ್ರದಾಯ ಪ್ರಕಾರ ಮಂಗಳೂರು ದಸರಾ ಮಹೋತ್ಸವ ನಡೆಸಲೇಬೇಕು ಎಂಬ ಆಗ್ರಹ ಭಕ್ತಾದಿಗಳಿಂದ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ದಸರಾ ಮಹೋತ್ಸವವನ್ನು “ನಮ್ಮ ದಸರಾ-ನಮ್ಮ ಸುರಕ್ಷೆ” ಘೋಷವಾಕ್ಯದೊಂದಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದರು.

 

ಮಂಗಳೂರು ದಸರಾ ಸಂದಭ೵ ಪೂಜೆ, ಪುರಸ್ಕಾರ, ಪ್ರಸಾದ ವಿತರಣೆ, ಮಕ್ಕಳು, ಹಿರಿಯರ ಸುರಕ್ಷತೆ ಸೇರಿದಂತೆ ಪ್ರತಿಯೊಂದು ವಿಚಾರ ಗಮನದಲ್ಲಿಟ್ಟು ಕ್ಷೇತ್ರದ ಆಡಳಿತ ಮಂಡಳಿ ಕೆಲವೊಂದು ನಿಧಾ೵ರಗಳನ್ನು ತೆಗೆದುಕೊಳ್ಳಲಿದೆ. ಮಂಗಳೂರು ದಸರಾ ನಮ್ಮೆಲ್ಲರ ಉತ್ಸವ, ಪ್ರತಿಯೊಬ್ಬರು ನಮ್ಮ ಸುರಕ್ಷತೆಗೆ ಒತ್ತು ನೀಡುವುದರ ಜತೆ ಉತ್ಸವ ಯಶಸ್ವಿಯಾಗಿ ನಡೆಸೋಣ ಎಂದು ಪದ್ಮರಾಜ್ ಹೇಳಿದರು.    


Leave a Reply

Your email address will not be published. Required fields are marked *

You may have missed