ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ

0

ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು‌ ಒಬ್ಬರು.

ವಸಂತಣ್ಣ,ತನ್ನಲ್ಲಿ ಅತಿದೊಡ್ಡ ದಾದ ಅಧಿಕಾರವಿಲ್ಲ, ಅತಿಹೆಚ್ಚಾದ ಆರ್ಥಿಕ ತನವು ಇಲ್ಲ ಆದರೆ ಜಿಲ್ಲೆಯ ಎಷ್ಟೋ ಭಾಗಗಳಲ್ಲಿಅಧಿಕಾರ, ಹಣದ ಬಲವಿಲ್ಲದೆಯೂ ಇವರ‌ ಹೆಸರು ಅತ್ಯಂತ ಆಳವಾಗಿ ಜನರ‌‌ ಮನಸ್ಸಿನಲ್ಲಿ ನಿಂತಿದೆ, ವಸಂತಣ್ಣನ ಸೇವಾಮನೋಭಾವ ಹೇಳಲು ಹೊರಟರೆ‌ ಮುಗಿದಷ್ಟು ಉದ್ದನೆಯದಾಗಿದೆ, ಇಂದು ಶಾಸಕರೊಬ್ಬರ ಹಿಂದೆ ರಾಮನ ಜೊತೆಯಲ್ಲಿಹನುಮನಿದ್ದಂತೆ, ಅವರ ಬೆಳವಣಿಗೆಗೆ ಕಿಂಚಿತ್ತೂ ಕೊರತೆ ಬಾರದಂತೆ ರಕ್ಷಣೆಯಾಗಿ ನಿಂತಿದ್ದಾರೆ, ಇಷ್ಟೇ ಅಲ್ಲ ತನಗೆ ಇರುವಂತಹಜನಬಲದಿಂದ ಯಾವತ್ತೋ‌ ನಾಯಕನಾಗಬಹುದಿತ್ತು ಆದರೆ, ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಸೂಕ್ತ ಅಭ್ಯಾರ್ಥಿಯ ಹಿಂದೆ‌ ನಿಂತುಅವರ ಯಶಸ್ಸಿನ ಬಹುಪಾಲು ವಸಂತಣ್ಣ ರಾಗಿದ್ದಾರೆ ಇದು ಇವರ ರಾಜಕೀಯ ಸೇವೆಯಾದರೆ.A3B3135D 6CED 40D0 93AE 3070E6A2BB8A

ಹಿಂದೂ ಸಂಘಟನೆಯ ಮೂಲಕ ಕೇಸು ಆದತ್ತಂಹ ಎಷ್ಟೋ ಯುವಕರ  ಜೊತೆಯಲ್ಲಿ ನಿಂತು ಅವರಿಗೆ ಯಾವರೀತಿ ಸಹಾಯಮಾಡಬಹುದು ಎನ್ನುವ ನಿರ್ದಿಷ್ಟ ಗುರಿಯನ್ನಿಟ್ಟು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾ ಹಿಂದುತ್ವದಲ್ಲಿ ತನ್ನ ಸೇವೆಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗದೆ  ತನ್ನ‌‌ಮನೆಯ ಪರಿಸ್ಥಿತಿ ಎದುರಿಸಲಾಗದಂತಹ ಸಂದರ್ಭದಲ್ಲಿ ಯುವಕರ ಜೊತೆಯಲ್ಲಿ ನಿಂತುಅವರಿಗೆ ಉದ್ಯೋಗಕ್ಕೆ ಬೇಕಾದ ಸೂಕ್ತ ಸಲಹೆನ್ನು ನೀಡುವ ಮೂಲಕ‌ ವಿದ್ಯಾರ್ಥಿಗಳ ಜೊತೆಯಲ್ಲೂ ಆತ್ಮೀಯರಾಗಿದ್ದಾರೆ.

ಇನ್ನು ನಮ್ಮ ಸಂಘಟನೆಯ ವಿಚಾರಬಿರುವೆರ್ ಕುಡ್ಲಎನ್ನುವ ಸೇವಾ ಸಂಘಟನೆಯ ಭಾಗವಾಗಿರುವ ಬಜಪೆ ಘಟಕದ ಎಷ್ಟೋಸದಸ್ಯರ ತಮ್ಮ ವಯಕ್ತಿಕ ಜೀವನದ ಸಮಸ್ಯೆಯನ್ನು ಇವರ ಬಳಿ ತಿಳಿಸಿದಾಗ ನಿರಂತರವಾಗಿ ವಿಚಾರದ ಹಿಂದೆಯೆ ತಿರುಗಿ ನಮ್ಮಸಂಘಟನೆಯ ಯುವಕರಿಗೆ ಸ್ಪಂದಿಸುತ್ತಿದ್ದಾರೆ.

ಇಂತಹ ಇವರ ಇನ್ನಷ್ಟು ಕಾರ್ಯಗಳನ್ನು ಬರವಣೆಗೆಯ ಮೂಲಕ ತಿಳಿಸಲು ಅಸಾದ್ಯ ಆದರೆ ತುಳುನಾಡಿನ ಅದೆಷ್ಟೋ ಭಾಗದಯುವಕರಲ್ಲಿ ಇವರ ಹೆಸರು ಅಜರಾಮರವಾಗಿ ನಿಂತಿದೆ. ಇವರಿಗೆ ಇನ್ನಷ್ಟು ದೇವರ ಅನುಗ್ರಹ ಜೊತೆಗೆ ಗುರುಗಳಆಶಿರ್ವಾದವಿರಲಿ ಎಂದು ಕೋರುವ.

ಬಿರುವೆರ್ ಕುಡ್ಲ ಬಜಪೆ ಘಟಕ ®️


Leave a Reply

Your email address will not be published. Required fields are marked *