ರಾಷ್ಟ್ರಮಟ್ಟದ ತಾಂತ್ರಿಕ ಕೌಶಲ ಸ್ಪರ್ಧೆ ಮಂಗಳೂರಿನ ರಾಘವೇಂದ್ರ ಪೂಜಾರಿ ಚಿನ್ನದ ಪದಕ


ರಾಷ್ಟ್ರಮಟ್ಟದ ತಾಂತ್ರಿಕ ಕೌಶಲ ಸ್ಪರ್ಧೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರ ಮಂಗಳೂರಿನ ರಾಘವೇಂದ್ರ ಪೂಜಾರಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಅಲ್ಲದೆ, 2022ರ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಚೀನದ ಶಾಂಘಾಯ್ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ 2021ರಲ್ಲಿ ರಾಘವೇಂದ್ರ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗದಲ್ಲಿದ್ದಾರೆ.

ಅದ್ಭುತ ಕೌಶಲ, ಪ್ರತಿಭೆ ಮತ್ತು ಏಕಾಗ್ರತೆಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ನಡೆದ ರಾಷ್ಟ್ರಮಟ್ಟದ ಇಂಡಿಯಾ ಸ್ಕಿಲ್ ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು 24 ಮಂದಿ ಪದಕ ಪಡೆದುಕೊಂಡಿದ್ದರು. ಈ ಪೈಕಿ ಮಂಗಳೂರಿನ ರಾಘವೇಂದ್ರ ಒಬ್ಬರಾಗಿದ್ದಾರೆ. ಅವರ ಪ್ರಾಜೆಕ್ಟ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಯಾಡ್ ಗೆ ಚಿನ್ನದ ಪದಕ ಲಭಿಸಿದೆ.


You May Also Like

More From Author

+ There are no comments

Add yours