ಮೂಡುಬಿದಿರೆ:ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ತೆರಳಿ ತಪ್ಪು ಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಜಗದೀಶ್ ಅಧಿಕಾರಿ

0

ಕೋಟಿ-ಚೆನ್ನಯ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ ಅವರು ಗುರುವಾರ ಪುತ್ತೂರು ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಹಾಕಿದ್ದಾರೆ.671568A2 A0FE 4DB7 8371 79D9569F74AE E1613058408352

ಡುಮಲೆಗೆ ತೆರಳಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿ, ಕೆಲವು ದಿನಗಳ ಹಿಂದೆ ನಾನು ಕೋಟಿ ಚೆನ್ನಯ ಹಾಗೂ ಬಿಲ್ಲವರ ಬಗ್ಗೆ ಮಾತನಾಡಿದ್ದು, ಆ ಸಮಾಜದ ಬಂಧುಗಳಿಗೆ ನೋವಾಗಿದೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿದ್ದು, ನನ್ನಿಂದ ತಪ್ಪಾಗಿದೆ ಎಂಬುವುದಾಗಿ ಒಪ್ಪಿಕೊಂಡಿದ್ದಾರೆ.

ಬಿಲ್ಲವ ಸಮಾಜದವರಲ್ಲಿ ನಾನು ಕ್ಷಮೆಯಾಚಿಸಿ, ನನ್ನಿಂದ ಆದ ತಪ್ಪಿಗೆ ಕೋಟಿ ಚೆನ್ನಯ, ದೇಯಿ ಬೈದತಿಗೆ ತಪ್ಪು ಕಾಣಿಕೆ ಹಾಕಿದ್ದೇನೆ. ಕಾರಣಿಕ ಪುರುಷರಾದ ಅವಳಿ ಪುರುಷರ ಅನುಗ್ರಹದಿಂದ ನಾವೆಲ್ಲರೂ ಸೌಹಾರ್ದತೆಯಿಂದ ಬದುಕುವಂತಾಗಲಿ ಎಂದು ತಿಳಿಸಿದ್ದಾರೆ.ಡ


Leave a Reply

Your email address will not be published. Required fields are marked *