ಬೈಂದೂರು: ಶಾಲೆಗೆ ತೆರಳುತ್ತಿದ್ದ ಬಾಲಕಿಯ ಸಮನ್ವಿ ಪೂಜಾರಿ ಪ್ರಾಣಕ್ಕೆ ಮುಳುವಾಯಿತೇ ಚಾಕಲೇಟ್?

0

ಬೈಂದೂರು, ಜು 20 ಶಾಲೆಗೆ ತೆರಳುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರಜು.20ರಂದು ನಡೆದಿದೆ.0BB0FAA1 A323 45FA AE52 56E2BA3972AA E1658343439780ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಮಗಳನ್ನು ಸಮಧಾನಪಡಿಸಲು ಅಮ್ಮ ಚಾಕಲೇಟ್‌ ನೀಡಿದ್ದಾರೆ. ವೇಳೆ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ ಕವರ್‌ ಸಹಿತಚಾಕಲೇಟ್‌ ನುಂಗಿದ್ದಾಳೆ. ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು, ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬಾಲಕಿಯ ಪಾರ್ಥಿವ ಶರೀರವನ್ನು ಬೈಂದೂರು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನುಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಸಲಾಗುವುದು.

ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.


Leave a Reply

Your email address will not be published. Required fields are marked *