ಬಿಲ್ಲವ ಸಮಾಜದ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.

0

ಬಿಲ್ಲವ ಸಮಾಜದ  ಯುವ ಉತ್ಸಾಹಿ ಬರಹಗಾರ ಕಥೆಗಾರಸಿನಿಮಾ ನಟಸಾಯಿ ದೀಕ್ಷಿತ್ ಪುತ್ತೂರುಇವರ ಸಾಧನೆಯ ಹಾದಿ.B8E4D6CF F993 42B3 AE6C 0F4C42F2C207 E1621810969329

ಸಾಧನೆ ಯಾರ ಪಾಲಿನ ಸ್ವತ್ತು ಅಲ್ಲ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವ ಸಾಧನ ಅಲ್ಲ. ಕಠಿಣ ಪರಿಶ್ರಮ , ಸಂಯಮ , ಏಕಾಗ್ರತೆ, ಸತ್ಚಿತ್ತತೆ, ಇದ್ದರೆ ಮಾತ್ರ ಸಾಧನೆ  ಮತ್ತು ಯಶಸ್ಸು ಒಬ್ಬರ ಪಾಲಾಗುತ್ತದೆ. ಅಂತಹ ಸಾಧಕರ ಪಟ್ಟಿಯಲ್ಲಿ  ಯುವಬರಹಗಾರ, ಕಥೆಗಾರ, ಕವಿ,  ನಟ, ನಿರ್ದೇಶಕ, ಹೀಗೆ ಕಲಾ ಜಗತ್ತಿನ ಎಲ್ಲಾ ಆಯಾಮಗಳಲ್ಲೂ ತನ್ನದೇ ಆದ ವಿಶೇಷ ಛಾಪುಮೂಡಿಸಿರುವ ಪುತ್ತೂರು ತಾಲೂಕಿನ  ಸಾಯಿ ದೀಕ್ಷಿತ್ ಪುತ್ತೂರುಇಂದು ಕೂಲ್ಸಾಧಕರ ಕಾಲಂನಲ್ಲಿ.

ಇವರು ಕೆಯ್ಯೂರು ಗ್ರಾಮದ, ನೂಜಿ  ಶ್ರೀ ಅಣ್ಣಿ ಪೂಜಾರಿ ಮತ್ತು ಶ್ರೀಮತಿ ಶೀಲಾವತಿ  ದಂಪತಿಗಳ ಮೊದಲನೇ ಪುತ್ರ. 19 ಫೆಬ್ರವರಿ1990ರಲ್ಲಿ ಪುತ್ತೂರು, ಆರ್ಯಾಪು ಗ್ರಾಮದ, ಸಂಪ್ಯ ಹೊಸಮನೆ ಎಂಬಲ್ಲಿ ಇವರು ಹುಟ್ಟಿದ್ದು‌. ಇವರದ್ದು, ಸಹೋದರ ದೀಪಕ್ಅಮೀನ್  ಮತ್ತು ತಂಗಿ ದೀಪ್ತಿ ಚಂದ್ರಶೇಖರ್ ಹಾಗೂ ಪತ್ನಿ ಪವಿತ್ರ ಸುವರ್ಣ ಹಾಗೂ ಹೆತ್ತವರು ಇರುವ ಒಂದು ಸಣ್ಣ ಕುಟುಂಬADC411AF 8295 485D 83D2 26100B9707CF E1621811070543

ಬಾಲ್ಯದಿಂದಲೇ ಕಷ್ಟಗಳನ್ನು ಕಂಡ ಇವರು ದೀಕ್ಷಿತ್ ಎಂಬ ಹೆಸರಿನ ಮುಂದೆಸಾಯಿಎಂಬ  ಬಾಬಾ ನಾಮಾಂಕಿತವನ್ನುಸೇರಿಸಿಸಾಯಿ ದೀಕ್ಷಿತ್ಎಂಬ ಹೆಸರಿನಿಂದ ಜನರಿಂದ ಗುರುತಿಸಿಕೊಳ್ಳುತ್ತಿದ್ದಾರೆ.

ಇವರಿಗೆ ಕಥೆ, ಕವನಗಳನ್ನು ಬರೆಯುವುದು ಎಂದರೆ ಏನೋ ಹುಚ್ಚು. ಕುವೆಂಪು ಅವರ ಕವನಗಳನ್ನು ಹೆಚ್ಚಾಗಿ ಓದಿಮನದಲ್ಲಿರಿಸಿಕೊಂಡು ಅನುಭವಗಳನ್ನು ಕಲಿತವರು. ಕುವೆಂಪು ಅವರಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆಅನ್ನೋ ಕವನ ಇವರಿಗೆ ತುಂಬಾ ಇಷ್ಟ. ಏಳನೇ ತರಗತಿಯಿಂದ ಕವನ ಬರೆಯಲು ಪ್ರಾರಂಭ. ಇವರು ಬರೆಯುವ ಕಲೆಯಿಂದ ಇವತ್ತುಒಬ್ಬ ನಟ, ನಿರ್ದೇಶಕನಾಗಿದ್ದಾರೆ. ಮೊದಲಾಗಿ ನಾಟಕ ರಚನೆ ಮಾಡಿ, ನಂತರ ಕಥೆಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ಇವರಬರೆಯುವ ಕಲೆ ಇಂದು ದೊಡ್ಡ ಮಟ್ಟಕ್ಕೆ ಬರೆಯುವಂತೆ ಮಾಡಿದೆ. ಇವರು ಪ್ರತಿಲಿಪಿಯ ಸಾಹಿತಿಯಾಗಿದ್ದು, ಇವರು ಪ್ರತಿಲಿಪಿಯಲ್ಲಿಬರೆದಶೃಂಗಾರ“, “ಅವಳು“, “ಅವಳ ನಗುಮತ್ತುನಾಳೆಯಿಂದಅನ್ನೋ ಕಥೆಗಳು ಇವರಿಗೆ ಒಳ್ಳೆಯ ಹೆಸರನ್ನುತಂದುಕೊಟ್ಟಿದೆ. ಎಲ್ಲಾ ಕಥೆಗಳಿಗೆ ಫೇಸ್ಬುಕ್, ವಾಟ್ಸ್ಯಾಪ್,ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲಾತಾಣಗಳಲ್ಲಿ ಜನರ ಮೆಚ್ಚುಗೆಗೆಪಾತ್ರರಾಗಿದ್ದಾರೆ.544ED65E 86DC 4279 8BDA 676E52B1E556 E1621811124128

ಇವರು ಇವರ ವಿದ್ಯಾಭ್ಯಾಸ 1ರಿಂದ 4ನೇ ತರಗತಿಯವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳಂದೂರಿನಲ್ಲಿ  ಆರಂಭವಾಗಿ, 5ರಿಂದ 7ನೇ ತರಗತಿ ಸರಕಾರಿ ಶಾಲೆ ಆರ್ಯಾಪು ಮತ್ತು 8ರಿಂದ 10ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಬ ಮತ್ತುಪದವಿ ಪೂರ್ವ ವಿದ್ಯಾಭ್ಯಾಸ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಮುಗಿಸಿ, ಐಟಿಐ ಅನ್ನು ಮಂಜುಷಾಐಟಿಐ ಇಲ್ಲಿ ಮುಗಿಸಿದ್ದಾರೆ. ನಂತರ ಒಂದು ವರ್ಷ ಬೆಂಗಳೂರು, 2ವರ್ಷ ಮಂಗಳೂರಿನಲ್ಲಿ, 1ವರ್ಷ ಶಿವಮೊಗ್ಗದಲ್ಲಿ, 1ವರ್ಷಉಡುಪಿ,ಕುಂದಾಪುರದಲ್ಲಿ .ಎಫ್.ಬಿ ಕಂಪನಿಯಲ್ಲಿ ಕೆಲಸದ ಅನುಭವ ಪಡೆದಿದ್ದಾರೆ. ಮತ್ತು ಜಿಮ್ ಟ್ರೈನರ್ ಆಗಿಯೂ 5 ವರುಷಗಳ ಕಾಲ ದುಡಿದಿದ್ದಾರೆ. ಪ್ರಸ್ತುತ ಹಿಂದುಸ್ತಾನ್ ಯುನಿಲಿವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಜೊತೆಗೆ ಕಲಾರಂಗದಲ್ಲಿಮಿಂಚುತ್ತಿದ್ದಾರೆ.07733BB3 E8E1 45F4 A9E1 AE2172DEB00D E1621811171801

  ಕಷ್ಟ ಇದ್ರೇನೆ ಜೀವನದಲ್ಲಿ ಪಾಠ ಕಲಿಯೋದುಅನ್ನೋದು ಇವರ ಅನುಭವದ ಮಾತು. ಇವರ ತಂದೆಯ ಊರು ಕಾಣಿಯೂರುಚಾರ್ವಾಕದ ಕಳಂಗಜೆ. ತಂದೆಯ ಮನೆಯು ತುಂಬಾ ಕಷ್ಟಗಳಿಂದ ಕೂಡಿದ್ದರಿಂದ ಇವರು ಮತ್ತು ಇವರ ತಮ್ಮ ಬಾಲ್ಯದಿಂದಲೇ ತಂದೆತಾಯಿಯಿಂದ ದೂರ ಉಳಿಯಬೇಕಾಯಿತು. ಅಂದರೆ, ಅಂಗನವಾಡಿ ಕಲಿಕೆಯಿಂದಲೇ ತನ್ನ ತಾಯಿಯ ಅಕ್ಕ ಅಂದರೆ, ದೊಡ್ಡಮ್ಮನಮನೆಯಲ್ಲಿ ಬೆಳೆಯುತ್ತಾರೆ. ಒಂದು ಮಗು ತಾಯಿಯ ನೆರಳಿಲ್ಲದೆ ಬದುಕುವುದೆಂದರೆ ಅದರಷ್ಟು ಹಿಂಸೆ ಬೇರಾವುದೂ ಇಲ್ಲ. ಆದರೂ, ಇವರ ದೊಡ್ಡಮ್ಮ ಮತ್ತು ದೊಡ್ಡಪ್ಪ ಜೋತೆಗೆ ಅಣ್ಣ ಅಕ್ಕಂದಿರು ತಮ್ಮಂದಿರು ಪ್ರೀತಿಯಿಂದ ಸಾಕುತ್ತಾರೆ. ನಾಲ್ಕನೇತರಗತಿಯವರೆಗೆ ಇವರ ಸಂತೋಷ ದುಃಖ ಏನೇ ಇದ್ದರೂ ದೊಡ್ಡಮ್ಮ ದೊಡ್ಡಪ್ಪನಲ್ಲಿಯೇ ಕಳೆದುಹೋಗಿತ್ತು. ಇವರು ಐದನೇತರಗತಿಗೆ ಬರುವಾಗ ತಂದೆ ತಾಯಿಗೂ ಕೂಡ ತಂದೆಯ ಮನೆಯಲ್ಲಿ ಜಾಗವಿಲ್ಲದಾಗಿತ್ತು. ಆಗ ತಾಯಿಗೆ ಉಳಿದಿದ್ದು ತವರು ಮನೆಮಾತ್ರ.  ಸಂದರ್ಭದಲ್ಲಿ ತಂದೆ ಮತ್ತು ತಾಯಿ ಗಂಟುಮೂಟೆ ಕಟ್ಟಿಕೊಂಡು ತಾಯಿ ಮನೆಗೆ ಬರುತ್ತಾರೆ. ತಾಯಿ ಮನೆಯವರುಕೃಷಿಕರು ಮತ್ತು ಕೃಷಿ ಜಾಗ ಇದ್ದುದರಿಂದ ಅಜ್ಜ ಮತ್ತು ಮಾವಂದಿರುನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿಯೇ ಇರುಎಂದು ಪಾಲಿನಲ್ಲಿ ಇವರಿಗೆ ಸಿಗಬೇಕಾದ ಆಸ್ತಿಯನ್ನು ನೀಡಿ ಚಿಕ್ಕದಾದ ಮನೆಯನ್ನು ಕಟ್ಟಿ ಕೊಡುತ್ತಾರೆ. ಮನೆ ಆದ ನಂತರದೊಡ್ಡಮ್ಮನ ಮನೆಯಲ್ಲಿ ಇದ್ದ ಇವರನ್ನೂ ಕೂಡ ಹೊಸ ಮನೆಗೆ ಕರೆದುಕೊಂಡು ಬರುತ್ತಾರೆ. ಐದನೇ ತರಗತಿಯಿಂದ ಏಳನೇತರಗತಿಯವರೆಗೆ ಇಲ್ಲೇ ಕಲಿಕೆಯನ್ನು ಆರಂಭಿಸುತ್ತಾರೆ. ಭಾನುವಾರ ಬಂತೆಂದರೆ ತಂದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ಹೋಗಿಶಿಕ್ಷಣಕ್ಕೆ ಬೇಕಾದ ಒಂದಿಷ್ಟು ಖರ್ಚುಗಳನ್ನು ಮಾಡಿಕೊಳ್ಳುತ್ತಿದ್ದರು. ಏಳನೇ ತರಗತಿ ಮುಗಿದ ನಂತರ ಎಲ್ಲರೂಇನ್ನು ಶಿಕ್ಷಣ ಸಾಕುಕೆಲಸಕ್ಕೆ  ಹೋಗ್ಲಿಅಂದ್ರು. ಆದರೆ, ತಾಯಿ ತನ್ನ ತಾಳಿಯನ್ನು ಅಡವಿಟ್ಟು ದೂರದ ಊರಾದ ಕಡಬದಲ್ಲಿ ಸರ್ಕಾರಿ ಹಾಸ್ಟೆಲ್ ಒಂದಕ್ಕೆಸೇರಿಸಿ ಅಲ್ಲಿಂದ ಹಾಸ್ಟೇಲ್ ಕಿರುಕುಳಗಳನ್ನು ಅನುಭವಿಸುತ್ತಾ ತಾಯಿ ತಂದೆಯರ ನೆನಪುಗಳನ್ನು ಬಚ್ಚಿಡುತ್ತಾ, ಅಲ್ಲಿಯೂ ವಾರದರಜೆಗೆ ಕೆಲಸಕ್ಕೆ ಹೋಗಿ ಹತ್ತನೇ ತರಗತಿಯನ್ನು ಉತ್ತಮ ತೇರ್ಗಡೆಯೊಂದಿಗೆ ಉತ್ತೀರ್ಣರಾಗುತ್ತಾರೆ.98163B78 4DA5 4E25 89EF 69949A2D7F92 E1621811228615

ಅಲ್ಲಿಂದ ಮತ್ತೆ ಮನೆಗೆ ಬಂದಾಗ ಇನ್ನು ವಿದ್ಯಾಭ್ಯಾಸ ಸಾಕು ಎಂದು ಹೇಳುವಾಗ, ಇವರು ನನಗೆ ಇನ್ನೂ ಕಲಿಬೇಕು ಅಂತಹಠತೊಟ್ಟರು. ಆಗ ಮತ್ತೆ ತಾಯಿ ಬಿಡಿಸಿದ್ದ ತಾಳಿಯನ್ನು ಅಡವಿಟ್ಟು ಓದುವಂತೆ ಹೇಳುತ್ತಾರೆ. ಆಗ ಇವರಿಗೆ ಇಷ್ಟವಾದ ವಿಜ್ಞಾನವಿಭಾಗವನ್ನು ಆರಿಸಿಕೊಂಡು, ಓದುವುದರ ಜೊತೆಗೆ ಕೂಲಿ ಮಾಡಿಕೊಂಡು ಉತ್ತಮ ರಾಂಕ್ ಪಡೆದುಕೊಂಡು ಉನ್ನತ ಶಿಕ್ಷಣದಕಡೆಗೆ ಹೆಜ್ಜೆ ಇಡುತ್ತಾರೆ. ತಾನು ಇಂಜಿನಿಯರಿಂಗ್ ಮಾಡಬೇಕು ಎಂಬ ಕನಸು ಕಟ್ಟಿಕೊಂಡರಾದರೂ ಆರ್ಥಿಕವಾಗಿ ಬಲಿಷ್ಠರಾಗಿಲ್ಲದೆಮತ್ತು ಯಾರೊಬ್ಬರ ಸಹಾಯ ಹಸ್ತವೂ ಸಿಗದ ಕಾರಣ, ಬ್ಯಾಂಕ್ ಸಾಲಗಳ ಮೊರೆಹೋಗಿ, ಸ್ವಂತ ಆಸ್ತಿ ಮತ್ತು ಒಡವೆಗಳು ಏನೂಇರದ ಕಾರಣ ವಿದ್ಯಾಭ್ಯಾಸದ ಗುರಿಯ ಕನಸು ಅಲ್ಲಿಗೆ ನಾಶವಾಯಿತಾದರೂ ಮುಂದೆ ಒಂದು ಪ್ರೈವೇಟ್ ಐಟಿಐಯಲ್ಲಿ ಪ್ರಾಕ್ಟಿಕಲ್ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್ ಓದುತ್ತಾರೆ. ಅಲ್ಲಿ ಓದುತ್ತಿರುವಾಗಲೇ ಅಷ್ಟರವರೆಗೆ ಕರೆಂಟೇ ಇಲ್ಲದ ಮನೆಗೆ ಇವರುಕಲಿತ‌ವಿದ್ಯೆಯಿಂದಲೇ ತಮ್ಮ ಮತ್ತು ಇವರು ವೈರಿಂಗ್ ಮಾಡುತ್ತಾರೆ. ಇಲ್ಲಿಂದ ಇವರ ಕೆಲಸ ಶುರುವಾಯಿತು. ಅಷ್ಟರಲ್ಲಿ ಬೆಂಗಳೂರಿನಕಂಪೆನಿಗೆ ಆಹ್ವಾನ ಬಂತು, ಅಲ್ಲಿ ಹೋಗಿ ವಾಷಿಂಗ್ ಮೆಷಿನ್ ಸರ್ವಿಸ್ ಇಂಜಿನಿಯರ್ ಆಗಿ ಒಂದು ವರುಷಗಳ ಕಾಲದುಡಿಯುತ್ತಾರೆ. ಅಲ್ಲಿಂದ ನಂತರ ಕರ್ನಾಟಕದ ಬೇರೆಬೇರೆ ಕಡೆಗಳಲ್ಲಿ ದುಡಿಯುತ್ತಾರೆ. ನಂತರ ಮೊದಲೇ ಬಾಲ್ಯದಿಂದಲೂಗೀಚುತ್ತಿರುವ ಹವ್ಯಾಸವಾದ ಕಥೆ ಕವನ, ಅಂತ ಒಂದೊಂದಾಗಿ ನಟನೆಯ ಕೌಶಲ್ಯವನ್ನು ಹಚ್ಚಿಕೊಂಡು ಅದರ ಹಿಂದೆಮುನ್ನಡೆಯುತ್ತಿದ್ದಾರೆ.83DB27C2 72EA 41C2 B7C6 6D20F28350CF E1621811297418

ಇವರು ಮೊದಲು ನಟನೆ ಮಾಡಿದ್ದುಅಡಿಕ್ಟ್ಎಂಬ ಟೆಲಿಚಿತ್ರದಲ್ಲಿ, ಅದಕ್ಕಿಂತ ಮೊದಲು ಬಣ್ಣ ಹಚ್ಚಿದ್ದು ತುಳು ನಾಟಕ  ನನ ಏರ್ಉಲ್ಲೆರ್ಪ್ರಸ್ತುತ ಧರಿತ್ರಿ ಕಲಾವಿದರು ಕುಡ್ಲ ನಾಟಕ ಸಂಸ್ಥೆಯಲ್ಲಿ. ಅದರೊಂದಿಗೆ ನಾಲ್ಕೈದು ಟ್ಯಾಬ್ಲೋಗಳಲ್ಲಿ ಬಣ್ಣ ಹಚ್ಚಿ ಜನರಮೆಚ್ಚುಗೆಗಳಿಸಿದ್ದು ದಯಾನಂದ ಕುಂತೂರು ಇವರ ಸಂಸ್ಥೆಯಲ್ಲಿ. ಅದರ ನಂತರ ಪ್ರಸ್ತುತ ಸಂಸಾರ ಕಲಾವಿದರು ಪುತ್ತೂರು ಇದರಲ್ಲಿಮಗೆ ಮಲ್ಲಾಯೆಎಂಬ ತುಳು ನಾಟಕದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಮುಂದಿನ ದಿನಗಳಲ್ಲಿ ಕಿರುಚಿತ್ರಗಳಾದತರ್ಕಚಿತ್ರದ ಸಂಭಾಷಣೆಯನ್ನು ಬರೆದು ಹಾಗೋ ಹೀಗೋ ಕಷ್ಟ ಪಟ್ಟಾಗ ಸಿಕ್ಕಿದ್ದುಶಟರ್ದುಲಾಯಿತುಳು ಚಲನಚಿತ್ರದಲ್ಲಿ ಚಿಕ್ಕಪಾತ್ರ. ಅದರ ಬಳಿಕಅರೆಮರ್ಲೆರ್ತುಳು ಚಲನಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಮತ್ತುಜೀವನ ಯಜ್ಞಕನ್ನಡ ಚಲನಚಿತ್ರದಲ್ಲಿ ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದಾರೆ. “ಪಿರ್ಕಿಲುಎಂಬ ಚಿತ್ರ ಇನ್ನು ತೆರೆಕಾಣಬೇಕಿದೆ.

ಅಷ್ಟೇ ಅಲ್ಲದೇ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಹಾಕಿಜಿದ್ದುಕನ್ನಡ ಟೆಲಿ ಚಿತ್ರಕ್ಕೆ ಯತೀಶ್ ಪೂಜಾರಿ ಇವರ ಅವಕಾಶದಲ್ಲಿ 3 ಹಾಡುಬರೆದಿದ್ದಾರೆ. ಮೂರು ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. “ಅಮ್ಮುಆಲ್ಬಾಮ್ ಹಾಡು ಸುರೇಂದ್ರ ಪಣಿಯೂರುನಿರ್ದೇಶನದ ಸಾಯಿ ದೀಕ್ಷಿತ್ ಇವರ ಸಾಹಿತ್ಯ ಮತ್ತು ಸುಶ್ಮಿತಾ842ACA72 243C 451C A2BB 089D90753442

ನಂತರಕಾಳಿಎಂಬ ಬಹು ಬಡ್ಜೆಟ್ನ ಸುಷ್ಮಾ ಪೂಜಾರಿ ಇವರ ಕಿರುಚಿತ್ರಕ್ಕೆ ಇವರದ್ದೇ ಕಥೆ, ಸಂಭಾಷಣೆ ಮತ್ತು ಖಳನಾಯಕ ನಟನೆ. ಇದರ ಜೊತೆಗೆಗುಬ್ಬಚ್ಚಿಅನ್ನೋ ಟೆಲಿ ಚಿತ್ರವನ್ನು ಇವರೇ ಕಥೆ,ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಇದರಜೊತೆಗೆ ಯತೀಶ್ ಪೂಜಾರಿ ನಿರ್ದೇಶನದಸರಕಾರಿ ಶಾಲೆ ಕರಂಬಾರುಕನ್ನಡ ಮಕ್ಕಳ ಚಲನಚಿತ್ರಕ್ಕೆ ಕಥೆಯನ್ನು ಹೆಣೆದಿದ್ದಾರೆ.

ಇವರಿಗೆ ನಟನೆ ಒಂದು ದೊಡ್ಡ ಸವಾಲಾಗಿತ್ತು. ಹೋದಲ್ಲೆಲ್ಲಾ ಇವರ ತಿರಸ್ಕಾರವಾದಾಗ ಹಲವಾರು ಜನರ ಜೊತೆ ಒಂದು ನಾಟಕತಂಡ ಮಾಡಬೇಕು ಎಂದು ಕೇಳಿಕೊಂಡರು. ಆಗ ಇವರಿಗೆ ಎಲ್ಲರಿಂದಲೂ ಅವಮಾನ ಆಯಿತು. ನಿನ್ನಿಂದ ಇದೆಲ್ಲಾ ಸಾಧ್ಯವಿಲ್ಲ ಎಂಬಮಾತುಗಳು ಕೂಡ ಬಂತು. ಇವರು ಇವರ ಧೈರ್ಯವನ್ನು ಕೈಬಿಡದೆ ಸ್ವತಃ ಖರ್ಚುವೆಚ್ಚಗಳನ್ನು ಬರಿಸಿಸಾಯಿ ಶೃಂಗಾರಎಂಬನಾಟಕ ತಂಡವನ್ನು ಕಟ್ಟುತ್ತಾರೆ. ತಂಡದಲ್ಲಿ ಶಿವಕುಮಾರ್ ರೈ ಬರೆದಈರ್ ಏರ್ಂಬೆರೆಮತ್ತು ಮೋಹನ್ ದಾಸ್ ಕೊಟ್ಟಾರಿಬರೆದಮೋಕೆ ಒಂತೆ ಜೋಕೆಎಂಬ ನಾಟಕಗಳನ್ನು ಪ್ರದರ್ಶಿಸಿ ಸಕ್ಸಸ್ ಕಂಡು ಜೊತೆಗೆಸಾಯಿ ಕಲಾವಿದರು ಕುಡ್ಲನಾಟಕತಂಡದಲ್ಲಿಲಿಂಕ್ ಲಿಂಗಪ್ಪೆಎಂಬ ನಾಟಕದಲ್ಲಿ ಹೆಸರುಗಳಿಸಿದರು. ಆದರೆ, ಇವರ ಬೆಳವಣಿಗೆ ಕಂಡು ಇವರ ತಂಡಕ್ಕೆ ಮತ್ತು ಇವರಮೇಲೆ ವಕ್ರದೃಷ್ಟಿ ಬಿದ್ದು ತನ್ನ ನಾಟಕ ತಂಡ ತನ್ನವರಿಂದಲೇ ಒಡೆದು ಹೋಗುತ್ತದೆ. ಇದರಿಂದ ಬೇಸರಗೊಂಡಾಗ ಇವರ ಪಾಲಿಗೆಒಲಿದಿದ್ದುಬಲೆತೆಲಿಪಾಲೆಕಾರ್ಯಕ್ರಮ. ಇವರುನಮ್ಮ ಟಿವಿಚಾನೆಲ್ನಲ್ಲಿ ಪ್ರಸಾರವಾಗುವ  ಬಲೆತೆಲಿಪಾಲೆಸೀಸನ್ 7ರಲ್ಲಿಇವರ ಸಾರಥ್ಯದಲ್ಲಿಸಾಯಿ ಶೃಂಗಾರಎಂಬ ತಂಡವನ್ನು ಕಟ್ಟಿಕೊಂಡು ಫೈನಲ್ನಲ್ಲಿ ಮಿಂಚಿ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದುಇವರ ಶ್ರಮ, ಮಾನವೀಯತೆ ಮತ್ತು ಕಲೆಗೆ ಸಿಕ್ಕ ಉಡುಗೊರೆ ಮತ್ತು ಇವರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತು. ನಂತರ ಡೈಜಿವರ್ಲ್ಡ್ಚಾನೆಲ್ ನಲ್ಲಿ ಇವರ ಮಕ್ಕರ್ ಕಾಮಿಡಿ ಪ್ರದರ್ಶನವಾಗಿದ್ದು ಮೊದಲಬಾರಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಹಾಗೆಯೇಮಕ್ಕರ್ಎಂಬ ತಂಡವನ್ನು ಕಟ್ಟಿಕೊಂಡು ಯಶಸ್ವಿಯಾಗಿ ಕಾಮೆಡಿ ಶೋ ನಡೆಸುತ್ತಿದ್ದಾರೆ. ಯಶಸ್ಸಿನ ಜೊತೆ ಇವರ ಆತ್ಮೀಯ ಮಿತ್ರರಾದ    ರಂಜು ರೈ ಸುಳ್ಯ, ಅನಿಲ್ ರೈ ಪೆರಿಗೇರಿ ಹಾಗೂ ಜ್ಯೋತಿ ಕುಲಾಲ್ ಇವರೆಲ್ಲಾ ಜೊತೆಯಾಗಿದ್ದಾರೆ. ಜೊತೆಗೆ ರವಿರಾಮಕುಂಜ, ಪ್ರವೀಣ್ ಅಂಚನ್ ಕಣಿಯಾರು ಹಾಗೂ ನವೀನ್ ರೈ ಬೆಟ್ಟಂಪಾಡಿ ಇವರು ಮುಖ್ಯ ಕಾರಣ ಕರ್ತ್ರುಗಳಾಗಿದ್ದಾರೆ. ಈಗ ಡೈಜಿವರ್ಲ್ಡ್ಚಾನೆಲ್ ನಲ್ಲೂ ತಮ್ಮ ಕಾಮಿಡಿ ಕಮಾಲ್ ನೀಡಲು ರೆಡಿಯಾಗಿದೆ.E3B19874 5E85 4799 B138 A1D754CFA996 E1621811789194

ಈಗಾಗಲೇ ಬಿಡುಗಡೆಗೊಂಡಿರುವಗರ್ವಟೆಲಿಚಿತ್ರದ ನಿರ್ದೇಶನ ಹರ್ಷಿತ್ ಸೋಮೇಶ್ವರ ಮತ್ತು ಸಂಜು ಸಿರಿಯಾನ್ ಬರೆದಿರುವಕಥೆಗೆ ಇವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಟಾಕೀಸ್ ಆಫ್ ನಲ್ಲಿ ತೆರೆಕಂಡಿದೆ. ಅಲ್ಲದೆ ಮಾಣಿಕ್ಷ ಸುಷ್ಮಾಪೂಜಾರಿ ನಿರ್ಮಾಣದ ಅರಸೆ ಕಥಾ ಸಂಪುಟ ಗೀತೆಯ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಕೂಡ ಇವರದ್ದೇ. ಇವರುಕೇವಲ ನಟನೆ ಮತ್ತು ಬರವಣಿಗೆಗೆ ಸೀಮಿತವಾಗದೆ ಹುಟ್ಟು ಹಬ್ಬ ಹಾಗೂ ಇತರೆ ಸನ್ಮಾನ ಕಾರ್ಯಕ್ರಮಗಳ ನಿರೂಪಣೆಯನ್ನುಕೂಡ ಮಾಡಿದ್ದಾರೆ.1E9B21A9 F371 4505 8B5F 1D6504751646 E1621811836232

ಈಗ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಅದರಲ್ಲಿ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ನೀಡುತ್ತಾಬಂದಿದ್ದಾರೆ. ದಾರಿ ತಪ್ಪಿಸಿದ ಹೊಗೆ, ಕಲಾವಿದೆ ಮತ್ತು ಕೊರೋನಾ ಕಂಗಾಲ್ ಇದರಲ್ಲಿ ಬಿಡುಗಡೆಗೊಂಡ ಕಾಮಿಡಿಗಳು.  ಇವರ  ಎಲ್ಲಾ ಸಾಧನೆಗಳಿಗೊಂದು ಸಲಾಮ್ ಹೇಳಬೇಕು .ಇವರ ಸಾಧನೆಗಳನ್ನು ಇನ್ನೂ ಹೆಚ್ಚು ಜನರು ಗುರುತಿಸುವಂತಾಗಬೇಕು. ನಮ್ಮತುಳುನಾಡಿನ ಕಲಾವಿದರು ನಮ್ಮ ಹೆಮ್ಮೆ. ಕಷ್ಟಗಳಿಂದ ಮೇಲೆ ಬರುತ್ತಿರುವ ಛಲ ಸಾಯಿ ದೀಕ್ಷಿತ್ ಅವರದ್ದು. ಇವರ ಪ್ರತಿಭೆಯನ್ನುಇಡೀ ದೇಶವೇ ಹೊಗಳಬೇಕು ಅನ್ನೋ ಆಸೆ ನನ್ನದು.

ನಿಮ್ಮೆಲ್ಲರ ಸಹಕಾರ ಇವರ ಮೇಲಿರಲಿ, ಇವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.

✍ : ರಂಜನಿ ಬಂಗೇರಹವ್ಯಾಸಿ ಬರಹಗಾರರು ಕಳಂಗಜೆ


Leave a Reply

Your email address will not be published. Required fields are marked *