ಜೂ. ೧ರಂದು ಲೋಕಾರ್ಪಣೆಗೊಳ್ಳಲಿದೆ ಬಿರುವೆರ್ ಕುಡ್ಲ(ರಿ)ದ ಉಚಿತ ಆಂಬುಲೆನ್ಸ್ ಸೇವೆ

0

ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಿರುವೆರ್ ಕುಡ್ಲ(ರಿ) ವತಿಯಿಂದ ಜೂ. ೧ರಿಂದ 15ಕಿಮೀ ವರೆಗೆ ಉಚಿತ ಆಂಬುಲೆನ್ಸ್ ಸೇವೆ ಒದಗಲಿದೆ. ಜೂ. ೧ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಈ ಸಮಾಜಮುಖಿ ಕಾರ್ಯಕ್ಕೆ ಚಾಲನೆ ದೊರಕಲಿದೆ. (Copyrights owned by: billavawarriors.com )

WhatsApp Image 2021 05 31 At 3.53.53 PM

(Copyrights owned by: billavawarriors.com )

ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ತನ್ನ ಸೇವಾ ಮನೋಭಾವನೆಯ ಮೂಲಕ ಸಮಾನ ಮನಸ್ಕರೊಂದಿಗೆ ಕಟ್ಟಿಕೊಂಡ ಸಂಸ್ಥೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ). ಕಳೆದ ಆರು ವರ್ಷದಿಂದ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಸ್ಥೆಯು ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ದೇಶದಲ್ಲಿಯೂ ಕೂಡಾ ಅಸಹಾಯಕರ ಕಣ್ಣೊರೆಸುವ ಕೆಲಸ ಮಾಡುತ್ತಿದೆ.

WhatsApp Image 2021 05 31 At 3.53.54 PM 1

(Copyrights owned by: billavawarriors.com )

ಕಳೆದ ಆರು ವರ್ಷಗಳಿಂದ ಬಿರುವೆರ್ ಕುಡ್ಲ(ರಿ). ಸಂಸ್ಥೆಯು ಒಂದು ಕೋಟಿ ಎಂಬತ್ತು ಲಕ್ಷಕ್ಕೂ ಮಿಕ್ಕಿ, ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಮತ್ತು ಬಡಜನರಿಗೆ, ದೀನದಲಿತರಿಗೆ ಹಣದ ಸಹಾಯ ಹಸ್ತವನ್ನು ನೀಡಿದೆ. ಇದೀಗ ಸಂಸ್ಥೆಯ ಸ್ಥಾಪಕಾಧ್ಯಕ್ಷರು ಶ್ರೀ ಉದಯ್ ಪೂಜಾರಿ ಬಳ್ಳಾಲ್ ಭಾಗ್ ಅವರು, ಸಮಾಜ ಮುಖಿ ಕಾರ್ಯಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಆಕ್ಸಿಜನ್ ವ್ಯವಸ್ಥೆಯೊಂದಿಗೆ ಸುಸಜ್ಜಿತವಾದಂತಹ ಆಂಬುಲೆನ್ಸ್ ಸೇವೆಯನ್ನು 15ಕಿಮಿ ವರೆಗೆ ಉಚಿತವಾಗಿ ಜಿಲ್ಲೆಯ ಜನತೆಗೆ ನೀಡಲು ಮುಂದಾಗಿದ್ದಾರೆ. ಸದಾ ಬಡವರ ಪರ ಕಾಳಜಿ ವಹಿಸಿಕೊಂಡು ಸಮಾಜ ಸೇವೆ ಮಾಡುವ ಈ ಸಂಸ್ಥೆಯ ಉಚಿತ ಆಂಬುಲೆನ್ಸ್ ಸೇವೆಯು ನಿಜಕ್ಕೂ ಮೆಚ್ಚಲೇಬೇಕು.

WhatsApp Image 2021 05 31 At 3.53.52 PM

(Copyrights owned by: billavawarriors.com )


Leave a Reply

Your email address will not be published. Required fields are marked *