ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಲ್ಲವ ಸಮಾಜದ ಅಭ್ಯುದಯದ ಸಮಾಲೋಚನಾ ಸಭೆಯಲ್ಲಿ ಸಭೆಯಲ್ಲಿ 500 ಕ್ಕೂ ಹೆಚ್ಚು ಸಮಾಜದ ಪ್ರಮುಖರು ಭಾಗವಹಿಸಿದರು

0

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಫೆಬ್ರವರಿ 27ರಂದು ಗೌರವಾನ್ವಿತ ಬಿ. ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿನಡೆದ ಬಿಲ್ಲವ ಸಮಾಜದ ಅಭ್ಯುದಯದ ಸಮಾಲೋಚನಾ ಸಭೆಯಲ್ಲಿ 500 ಕ್ಕೂ ಹೆಚ್ಚು ಸಮಾಜದ ಪ್ರಮುಖರು ಭಾಗವಹಿಸಿಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಭೆಯಲ್ಲಿ ಉಡುಪಿ, .., ಕಾಸರಗೋಡು, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಬಿಲ್ಲವಸಂಘ/ಸಂಸ್ಥೆ/ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಸದಸ್ಯರು  ಪಾಲ್ಗೊಂಡು, ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನುಮೆಟ್ಟಿನಿಂತು ಮುನ್ನಡೆಯಲು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಪ್ರಮುಖ ಅಂಶಗಳು :B37929A7 0A35 4771 AE5C 3A59F025F743B37929A7 0A35 4771 AE5C 3A59F025F743 E1646058187527

1. ಬಿಲ್ಲವ ಸಮಾಜದ ಪ್ರಸ್ತುತ ಆರ್ಥಿಕ/ಸಾಮಾಜಿಕ/ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಆಯಾ ಸಂಘದ ವ್ಯಾಪ್ತಿಯ ಗ್ರಾಮಮಟ್ಟದಲ್ಲಿ ಪ್ರತಿ ಕುಟುಂಬಗಳ ಸಮೀಕ್ಷೆ

2. ನಾರಾಯಣ ಗುರುಗಳ ತತ್ವದನುಸಾರ ಪ್ರತಿ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ನೀಡಿ, ವಿಧ್ಯಾಭ್ಯಾಸಕ್ಕೆ ಸಹಕಾರ ಮತ್ತುಉದ್ಯೋಗಕ್ಕೆ ಪೂರಕವಾದ ತರಬೇತಿ ಒದಗಿಸುವುದು

3. ಬಿಲ್ಲವ ಸಮಾಜದ ಕ್ಷೇತ್ರ/ಮಂದಿರಗಳಲ್ಲಿ ಸಂಸ್ಕಾರಯುತ ಶ್ರೀ ನಾರಾಯಣ ಗುರು ತತ್ವಾದರ್ಶಗಳ ಧಾರ್ಮಿಕ ಶಿಕ್ಷಣ ಕೇಂದ್ರಆರಂಭಿಸುವುದು

4. ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೂಕ್ತ ನೆರವು ದೊರಕುವಂತೆ ಸಹಕರಿಸುವುದು

5. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ನಿಗಮ ಮಂಡಳಿಗಳ ಸ್ಥಾಪನೆಗೆ ಮನವಿ/ಒತ್ತಾಯ

6. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಆಸ್ಪತ್ರೆ ಮುಂತಾದ ಪ್ರಮುಖ ಸಾರ್ವಜನಿಕ ಕೇಂದ್ರಗಳಿಗೆ ಬ್ರಹ್ಮಶ್ರೀ ನಾರಾಯಣಗುರುಹಾಗೂ ಕೋಟಿ ಚೆನ್ನಯರ ಹೆಸರು ಇಡುವಂತೆ ಒತ್ತಾಯ

7. ಸಮಾಜ ಬಾಂಧವರಿಗೆ ಉಪಯುಕ್ತವಾದ ಹಿಂದುಳಿದ ವರ್ಗಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ನೆರವು ನೀಡಲುಒಂದು ತಂಡದ ರಚನೆ

8. ಬಿಲ್ಲವ ಸಮಾಜದ ಸಂಘ ಸಂಸ್ಥೆಗಳಲ್ಲಿ ಯಾವುದೇ ಪಕ್ಷಗಳು ರಾಜಕೀಯ ಪ್ರೇರಿತ ವಿಚಾರಗಳ ಮೂಲಕ ಸಮಾಜವನ್ನುಒಡೆಯುವ ಪ್ರಯತ್ನ ನಡೆಸದಂತೆ ಎಚ್ಚರ ವಹಿಸುವುದು798F5BDE 965B 4E7A 89DD 083DE3C4E93E E1646058258610

ಕೊನೆಯದಾಗಿ ಮಾತನಾಡಿದ ಸನ್ಮಾನ್ಯ ಜನಾರ್ದನ ಪೂಜಾರಿಯವರು, ಸಭೆಯಲ್ಲಿ ಸೇರಿದ ಜನಸ್ತೋಮ ಕಂಡು ಸಂತಸವ್ಯಕ್ತಪಡಿಸುತ್ತಾ ಇಂತಹ ಸಮಾಜದ ಅಭಿವೃದ್ಧಿಯ ಚಟುವಟಿಕೆ ಗಳಿಗೆ ಶ್ರೀ ಗೋಕರ್ಣನಾಥ ದೇವರ ಮತ್ತು ಬ್ರಹ್ಮ ಶ್ರೀ ನಾರಾಯಣಗುರುಗಳ ಕೃಪಾಶೀರ್ವಾದ ಮಾಡಿದ್ದಾರೆ  ಇದರಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಪ್ರಮುಖರು ಶ್ರೀ ಕ್ಷೇತ್ರದಲ್ಲಿ ಸೇರಿದ್ದಾರೆಎಂದರು. ಸಮಾಜದ ಅಭ್ಯುದಯಕ್ಕೆ ಸಂಕಲ್ಪ ತೊಟ್ಟಿರುವ ಎಲ್ಲರಿಗೂ ಕುದ್ರೋಳಿ ಗೋಕರ್ಣನಾಥ ಸಹಿತ ಪರಿವಾರ ದೇವತೆಗಳಹಾಗೂ ಬ್ರಹಶ್ರೀ ನಾರಾಯಣ ಗುರುಗಳ ಅನುಗ್ರಹವಿರಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ  ಬ್ರಹ್ಮ ಶ್ರೀ ನಾರಾಯಣ ಗುರುಗಳ ಫೋಟೋ ಹಾಗೂ ಬಿಲ್ಲವ ಸಮಾಜದ ಅಗ್ರಮಾನ್ಯ ನಾಯಕರಾದ ಜನಾರ್ದನಪೂಜಾರಿಯವರು ಮಾತ್ರ ಇದ್ದು ಉಳಿದ ಸಮಾಜದ ಪ್ರಮುಖರೆಲ್ಲ ವೇದಿಕೆಯ ಮುಂಭಾಗದಲ್ಲಿ ಕುಳಿತು ಸಮಾಜ ಒಗ್ಗಟ್ಟಿನಿಂದಮಾಡ ಬೇಕಾದ ಕೆಲಸ ಕಾರ್ಯಗಳ ಬಗ್ಗೆ ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮ ಸಲಹೆಗಳನ್ನು ನೀಡಿದರು. ಸಲಹೆಗಳ ಆಧಾರದಮೇಲೆ, ಕಾರ್ಯಚಟುವಟಿಕೆಯ ಚೌಕಟ್ಟನ್ನು ರಚಿಸಿ, ಮುಂದಿನ ದಿನಗಳಲ್ಲಿ ಜಿಲ್ಲಾ/ತಾಲೂಕು ಮಟ್ಟದಲ್ಲಿ ಸಭೆಗಳನ್ನುನಡೆಸುವುದೆಂದು ತೀರ್ಮಾನಿಸಲಾಯಿತು.


Leave a Reply

Your email address will not be published. Required fields are marked *