ಅನಂತಾಡಿಯಲ್ಲಿ ಕುದ್ರೋಳಿ ಗುರು ಬೆಳದಿಂಗಳು ಸಂಘಟನೆಯಿಂದ ‘ಗುರುವನ’ ಲೋಕಾರ್ಪಣೆ

0

ಬದುಕಿನಲ್ಲಿ ಕನಸು ಕಾಣುವುದು ಸುಲಭ ಆದರೆ ಅದನ್ನು ನನಸು ಮಾಡುವುದು ಬಲುಕಷ್ಟತ್ಯಾಗ, ಪರಿಶ್ರಮ, ಇಚ್ಚಾಶಕ್ತಿ ಇರುವತಂಡವೊಂದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯ ಎಂದು ಹಿಂದುಳಿದ ವರ್ಗ ಹಾಗೂ ಸಮಾಜಕಲ್ಯಾಣ ಸಚಿವರಾದ ಕೋಟಶ್ರೀನಿವಾಸ ಪೂಜಾರಿರವರು ಹೇಳಿದರು.3F673AB1 6F67 4B3D 9A8D 646A9CD35371 E1630952591386

ಅವರು   ಗುರು ಬೆಳದಿಂಗಳು ರಿ. ಕುದ್ರೋಳಿ ಇದರ ವತಿಯಿಂದ ಅನಂತಾಡಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಶ್ರೀಬ್ರಹ್ಮಬೈದರ್ಕಳ ಗರಡಿಯಲ್ಲಿ  ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೭ನೇ ಜನ್ಮದಿನಾಚರಣೆಯ ಪ್ರಯುಕ್ತ ೧೬೭ ಔಷದೀಯ ಸಸಿನೆಡುವ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿರುವ  ಗುರುವವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಬದುಕಿನ ಜೊತೆಗೆ ಪರಿಸರವನ್ನು ಉಳಿಸಿಬೆಳೆಸುವ ಕೆಲಸ ಎಲ್ಲರಿಂದ ಆಗಬೇಕಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿಸಮಾಜದಲ್ಲಿರುವ ಕಟ್ಟಕಡೇಯ ವ್ಯಕ್ತಿಗೂ ಸಹಕಾರ ಮಾಡಬೇಕೆನ್ನುವುದು ಆಶಯ ನನ್ನದಾಗಿದೆ. ಗುರುಬೆಳದಿಂಗಳು ಸಂಸ್ಥೆಯಯೋಜನೆ ಯೋಚನೆಗಳು ಹಲವಿದ್ದು ಅವೆಲ್ಲವೂ ಸಫಲವಾಗಲಿ ಎಂದರು. DB35AF77 782B 4296 8277 0333B8E253B5 E1630952689869

ಮುಖ್ಯ ಅತಿಥಿಯಾಗಿ ಆಗಮಿಸಿದ  ಮಾಜಿ ಸಚಿವರಾದ ರಮಾನಾಥ ರೈರವರು ಮಾತನಾಡಿ ಗುರುಗಳು ನಡೆದು ಬಂದ ಹಾದಿಅವಿಸ್ಮರಣೀಯ. ಈಗಿನ ಪೀಳಿಗೆ ಹಿಂದಿನ ಪೀಳಿಗೆಯನ್ನು ಅರ್ಥಮಾಡಿಕೊಂಡು ಮುನ್ನಡೆಯ ಬೇಕಾದುದು ಅಗತ್ಯ. ಗುರುಬೆಳದಿಂಗಳು ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ದೈವಗಳ ಸಾನಿಧ್ಯವಿರುವ ಬಾಕಿಲದ ಮಣ್ಣಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಔಷದೀಯ ವನವನ್ನು ನಿರ್ಮಿಸಿರುವುದು ಒಂದು ಒಳ್ಳೆಯಬೆಳವಣಿಗೆಯಾಗಿದೆ ಎಂದರು.E8D701C7 97D6 40D6 834B 4894761299E2 E1630952771274

ಗುರುಬೆಳದಿಂಗಳು ರಿ.ಕುದ್ರೋಳಿ ಇದರ ಅಧ್ಯಕ್ಷರಾದ ಪದ್ಮರಾಜ್ ಆರ್. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನುಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಬ್ರಹ್ಮ ಶ್ರೀನಾರಾಯಣಗುರುಗಳ ೧೬೭ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇವೆ. ಬಾಕಿಲಗುತ್ತಿವಿನಲ್ಲಿ ೧೬೭ಔಷದೀಯಗಿಡಗಳನ್ನು‌ ನೆಟ್ಟು ಇದೀಗ  ಗುರುವನವನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಸಿದ್ದಂತವನ್ನುನಾವೆಲ್ಲರೂ ಸಾಧಿಸುತ್ತೇವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ, ನಿರ್ಗತಿಕರಿಗೆ ಆಸರೆ, ಅನಾರೋಗ್ಯದಿಂದಿರುವ ಬಡವರನ್ನುಚಿಕಿತ್ಸೆಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಹಲವಾರು ಸಮಾಜ ಮುಖಿ‌ಕಾರ್ಯವನ್ನು ನಡೆಸುವ ಇರಾದೆಇದೆ ಎಂದು ಅವರು ಹೇಳಿದರು.0F2008F7 A168 4B5C 8B5D 41B54B59F3B9 E1630952821985

ಮುಖ್ಯ ಅತಿಥಿಯಾಗಿ  ಬಂದರು ಹಾಗೂ ಮೀನುಗಾರಿಕ ಸಚಿವರಾದ ಅಂಗಾರ ಎಸ್., ಬಂಟ್ವಾಳ ಶಾಸಕರಾದ ರಾಜೇಶ್ನಾಯ್ಕ್,ರವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.B297F4D5 0264 4877 B2D9 8E55797FB726 E1630952871322

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಅನಂತಾಡಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ ಕ್ಷೇತ್ರದ ಆಡಳಿತ ಅಧ್ಯಕ್ಷ ವಸಂತಪೂಜಾರಿ, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜಯಾನಾಂದ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ. ರಾಜಾರಾಮ್ಕೆ.ಬಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು‌.

ಇಂತಹ ಕಾರ್ಯಕ್ರಮ ರಾಜ್ಯದ್ಯಂತ ನಡೆಯಬೇಕು:

ಎಸ್. ಅಂಗಾರ

ಕಾರ್ಯಕ್ರಮಕ್ಕೆ ಆಗಮಿಸಿದ ಬಂದರು ಹಾಗೂ ಮೀನುಗಾರಿಕ ಸಚಿವರಾದ ಎಸ್ ಅಂಗಾರರವರು ಪತ್ರಕರ್ತರೊಂದಿಗೆ ಮಾತನಾಡಿC3D8871B CB1B 4C90 83B8 F4A14D8CE1BD E1630952941593

ಗಿಡಮೂಲಿಕೆಗಳ ಸಸಿಗಳನ್ನು ನೆಟ್ಟು ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಾಕಿಲದಲ್ಲಿ ಔಷದೀಯ ವನವನ್ನುನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಗಿಡಮೂಲಿಕೆ ಗಿಡಗಳನ್ನು ನೆಟ್ಟುಬೆಳೆಸುವುದು ಅಗತ್ಯವಾಗಿದೆ. ಇಂತಹ ಮಹತ್ಕಾರ್ಯಗಳಿಗೆ ಸರಕಾರದ ಭಾಗದಿಂದ ಸಹಕಾರವನ್ನು ನೀಡಲು ಶ್ರಮಿಸುತ್ತೇನೆ. ಇಂತಹಕಾರ್ಯಕ್ರಮಗಳು ನಮ್ಮ ಜಿಲ್ಲೆಗೆ ಮಾತ್ರ ಸೀಮಿತವಾಗದೆ  ರಾಜ್ಯಾದ್ಯಾಂತ ಔಷದೀಯ ಸಸಿಗಳನ್ನು ನೆಟ್ಟು ಬೆಳೆಸುವಕಾರ್ಯವಾಗಬೇಕು ಎಂದರು


Leave a Reply

Your email address will not be published. Required fields are marked *