ಕುದ್ರೋಳಿ; ತಿರಂಗಾ ಕಲಾಕೃತಿ ಶ್ಲಾಘಿಸಿದ ಜಿಲ್ಲಾಧಿಕಾರಿ

0

 

ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ 900 ಕಿಲೋ ಧವಸಧಾನ್ಯ ಹಾಗೂ ಪುಷ್ಪಗಳಿಂದ ರೂಪಿಸಿದ ತಿರಂಗಾ ಕಲಾಕೃತಿಯನ್ನು ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ಅವರು ಸೋಮವಾರ ವೀಕ್ಷಿಸಿ ಶ್ಲಾಘಿಸಿದರು.

IMG 20220815 WA0031 E1660578618466

ಸುದ್ದಿಗಾರರ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹರ್‌ಘರ್ ತಿರಂಗ ಅಭಿಯಾನ ಯಶಸ್ವಿಯಾಗಿ ಸಾಕಾರವಾಗಿದೆ. ಈ ಪೈಕಿ ಕುದ್ರೋಳಿ ಕ್ಷೇತ್ರದಲ್ಲಿ ದೇಶಾಭಿಮಾನ ಬಿಂಬಿಸುವ ತಿರಂಗಾ ಕಲಾಕೃತಿ ರೂಪಿಸಿರುವುದು ಶ್ಲಾಘನೀಯ ಕಾರ್ಯ. ಧವಸಧಾನ್ಯವನ್ನೇ ಬಳಸಿಕೊಂಡು ಕ್ರೀಯಾಶೀಲ ಮಾದರಿಯಲ್ಲಿ ತಿರಂಗ ರೂಪಿಸಿರುವುದು ಅಭಿನಂದನೀಯ’ ಎಂದರು.

IMG 20220815 WA0032 E1660578677728

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *