“ಗರೋಡಿ ಜಾತ್ರೆ” ಯಲ್ಲಿ ಬಿಲ್ಲವ ಬ್ರಿಗೇಡ್ (ರಿ) ಕೇಂದ್ರೀಯ ಮಂಡಳಿ ವತಿಯಿಂದ ಸ್ಟಿಕ್ಕರ್ ಅಭಿಯಾನ

0

ಬಿಲ್ಲವ ಬ್ರಿಗೇಡ್ (ರಿ) ಕೇಂದ್ರೀಯ ಮಂಡಳಿ , ಮಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಪ್ರಸಿದ್ಧ ಇತಿಹಾಸ ಪುರುಷರಾದ ಕೋಟಿ- ಚೆನ್ನಯ್ಯ ರ ಹೆಸರನ್ನು ಇಡಬೇಕೆಂದು ಆಗ್ರಹಿಸಿ ಈಗಾಗಲೇ ನಾವು ಸ್ಟಿಕ್ಕರ್ ಅಭಿಯಾನ ಆರಂಭಿಸಿರುತ್ತೇವೆ.

WhatsApp Image 2021 12 22 At 12.33.23 PM E1640156913511

ಇದರ ಅಂಗವಾಗಿ ನಿನ್ನೆ ಮಂಗಳವಾರದಂದು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಂಕನಾಡಿಯ “ಗರೋಡಿ ಜಾತ್ರೆ” ಯ ಶುಭ ಸಂಧರ್ಭದಲ್ಲಿ ನಮ್ಮ ಅಭಿಯಾನದ ಬಗೆಗಿನ “ಸ್ಟಿಕ್ಕರ್ ಹಾಗೂ ಭಿತ್ತಿಪತ್ರಗಳ ವಿತರಣೆ” ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಈ ಅಭಿಯಾನದಲ್ಲಿ ಗಣ್ಯರು, ಸಮಸ್ತ ಭಕ್ತಾದಿಗಳು ಮೊಬೈಲ್ ಕವರ್‌ಗೆ ಸ್ಟಿಕ್ಕರನ್ನು ಅಳವಡಿಸಿ ಅಭಿಯಾನಕ್ಕೆ ಬೆಂಬಲಿಸಿ ಶುಭ ಹಾರೈಸಿದರು. ಅದೇ ರೀತಿ ಆಗಮಿಸಿದ ಸಮಸ್ತರಿಗೆ ಮನೆಗೆ ಹಾಗೂ ವಾಹನಗಳಿಗೆ ಅಳವಡಿಸುವಂತಹ ಅಭಿಯಾನದ ಸ್ಟಿಕ್ಕರನ್ನು ನೀಡಿ ಬೆಂಬಲಿಸುವಂತೆ ವಿನಂತಿಸಲಾಯಿತು.

WhatsApp Image 2021 12 22 At 12.33.20 PM E1640156942463
ಮುಂದಿನ ಹಂತವಾಗಿ ಈ ತುಳುನಾಡಿನಾದ್ಯಂತ ಅಭಿಯಾನವನ್ನು ಮುಂದುವರಿಸಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂತೆಯೇ ಮನೆ ಮನೆಗಳಲ್ಲಿ ತೆರಳಿ, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ರ ಹೆಸರಿಡುವ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ಸ್ಟಿಕ್ಕರ್ ಅಭಿಯಾನ ನಡೆಯಲಿದೆ.

WhatsApp Image 2021 12 22 At 12.33.20 PM 1 E1640157015665


Leave a Reply

Your email address will not be published. Required fields are marked *