”ನಾನು ಕಾರು ಮಾತ್ರವಲ್ಲದೆ ಟ್ರ್ಯಾಕ್ಟರ್​ಗಳನ್ನು ಕೂಡ ಓಡಿಸುತ್ತೇನೆ” 90ರ ವೃದ್ಧೆ

0

ಮಧ್ಯ ಪ್ರದೇಶದ ದೇವಾಸ್​ ಜಿಲ್ಲೆಯ 90 ವರ್ಷದ ವೃದ್ಧೆಯೊಬ್ಬರು ವೃದ್ಧೆ ಕಾರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Vidoe

ದೇವಾಸ್​ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿಯಾಗಿರುವ ರೇಷಮ್​ ಬಾಯ್​ ತನ್ವರ್ ಎಂಬ ವೃದ್ಧೆ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತುಕೊಂಡಿದ್ದಾರೆ. ​

ಈ ಕುರಿತು ಮಾತನಾಡಿರುವ ವೃದ್ದೆ, “ನನಗೆ ಡ್ರೈವಿಂಗ್​ ಮಾಡುವುದೆಂದರೆ ತುಂಬಾ ಸಂತೋಷ. ನಾನು ಕಾರು ಮಾತ್ರವಲ್ಲದೆ ಟ್ರ್ಯಾಕ್ಟರ್​ಗಳನ್ನು ಕೂಡ ಓಡಿಸುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಅಜ್ಜಿಯ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​​ ಸಿಂಗ್​ ಚೌಹಾಣ್​ ಅವರು ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ. ಈ ವಯಸ್ಸಿನಲ್ಲಿ ಡ್ರೈವಿಂಗ್​ ಕಲಿತಿರುವ ಅವರು ಎಲ್ಲರಿಗೂ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Leave a Reply

Your email address will not be published. Required fields are marked *