ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ ಹೆಮ್ಮೆಯ ಬಿರುವೆರ್ ಉದಯಣ್ಣ..

0

ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ  ಹೆಮ್ಮೆಯ ಬಿರುವೆರ್ ಉದಯಣ್ಣ..

ಬಡವರ ,ನೊಂದವರ ,ತುಳಿ ಕ್ಕೊಳಗಾದವರ ಪಾಲಿಗೆ ಪ್ರೀತಿಯ ಅಣ್ಣ..

ಕಿರಿಯರ ನಿರ್ಲಕ್ಷದಿಂದ ಅನಾಥರಾದ ಹಿರಿಯರಿಗೆ ಆಶ್ರಯ ಕೊಟ್ಟು ಸಲಹುವ ಪ್ರೀತಿಯ ಮಗ.3D2771EA 9A27 4B2A B4E9 4B8C5E230B83 E1621096336323

ಜೀವನದಲ್ಲಿ ಭವಿಷ್ಯದ ಬರವಸೆಗಳನ್ನೆಲ್ಲ ಕಳೆದುಕೊಂಡು ಕೈ ಚೆಲ್ಲಿ ಕುಳಿತ ಸಾವಿರಾರು ಯುವಕರಿಗೇ ಭರವಸೆ ಮೂಡಿಸುವಪ್ರೀತಿಯ ಗೆಳೆಯ.

ನಗು ಮೊಗದ ಸರದಾರಬಿರುವೇರ್ ಕುಡ್ಲದಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್…!

ಹೊಸ ತಲೆಮಾರಿನ ಪೀಳಿಗೆಗೆ ಇರುವ ತಾಕತ್ತು, ಸಾವಿನೊಂದಿಗೆ ಬೇಕಾದ್ರೂ ಕೈಕುಲುಕಿ ಬರಬಲ್ಲ ನಿರ್ಭೀತ ಮನಸ್ಥಿತಿಯ ಗಟ್ಟಿತನಇವರದ್ದು..!

ಜೀವನ ಮತ್ತು ಸಮಾಜ ಒದಗಿಸಿರೋ ಅವಕಾಶವನ್ನು ಬಡವರ ಕಣ್ಣೀರನ್ನು ಒರೆಸಲು ಬಳಸಿಕೊಂಡರು.!

ಹಠ ಮತ್ತು ದ್ವೇಷ ಸಾಧಿಸುವ ಗುಣವನ್ನು ನಾನು ಯಾವತ್ತೋ ಬಿಟ್ಟಿದ್ದೇನೆ.ಜೀವ ಬೇಕಾದ್ರೂ ಕೊಡುವಗೆಳೆಯರಿದ್ದಾರೆ.ಬೆಂಬಲಿಸುವ ಜನರಿದ್ದಾರೆ.ಮತ್ತೇನು ಬೇಕು ಹೇಳಿಅನ್ನುವ ಇವರು ಜನ ನಾಯಕನು ಹೌದು.ಜನ ಸೇವಕನು ಹೌದು!

ಉದಯ್ ಪೂಜಾರಿಯವರು ಕಟ್ಟಿ ಬೆಳೆಸಿದಬಿರುವೇರ್ ಕುಡ್ಲಇವತ್ತು ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡು ಅಶಕ್ತರಿಗೆಸೇವೆಯ ನೆರಳನ್ನು ನೀಡುತ್ತಿದೆ.ಅದರಲ್ಲೂ ಮಂಗಳೂರು ಹುಲಿವೇಷದ ಸಂಘಟನೆಯ ಮೂಲಕ ಸಾವಿರಾರು ಕಾರ್ಯಕರ್ತರನ್ನುಒಗ್ಗೂಡಿಸಿ ಎರಡು ಕೋಟಿಗಿಂತಲೂ ಹೆಚ್ಚು ಮೊತ್ತದ ಸಹಾಯವನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು.

ಕಳೆದ ವರ್ಷ ಕೊರೋನ ಸಂದರ್ಭದಲ್ಲಿ ಇವರ ಸೇವೆ ಅನನ್ಯವಾದುದು.ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಬಿರುವೆರ್ ಕುಡ್ಲದ ಶಾಖೆತೆರೆದು ಎಲ್ಲ ವರ್ಗದ ದುರ್ಬಲರ ಸೇವೆಗೆ ಚಾಲನೆ ಕೊಟ್ಟರು.ಸುಮಾರು 30 ಲಕ್ಷ ಫುಡ್ ಕಿಟ್ಸ್ ನ್ನೂ ಕೇವಲ ಮಂಗಳೂರು ನಗರದಲ್ಲೇಹಂಚಿದ್ದಾರೆ ಅಂದರೆ ಇವರ ಸೇವಾಗುಣದ ವಿಶಾಲತೆಯನ್ನು ನೀವು ಆಲೋಚಿಸಬಹುದು.

ಬಿಲ್ಲವರ ಬಗ್ಗೆ ಯಾರೂ ಏನೇ ಹೇಳಲಿ ಮೊದಲಾಗಿ ದ್ವನಿ ಎತ್ತುವ ಯುವಕ ಇವರು. ಹೆಸರಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಆಗುವಮುಂದಾಳುಗಳು ನನ್ನಲ್ಲಿ ತುಂಬಾ ಜನ ಇದ್ದಾರೆ.ಆದರೆ ಕೆಲಸ ಮಾಡುವ ಇಚ್ಛಾಶಕ್ತಿಯ ಕೊರತೆ ಅವರಲ್ಲಿ ಕಾಣುತ್ತದೆ.

ಕೋಟಿ ಚೆನ್ನಯರು ಎಂದೂ ಸುಮ್ಮ ಸುಮ್ಮನೆ ತಪ್ಪೆಸಗಿದವರಲ್ಲ.ಹಾಗಂತ ಅನ್ಯಾಯ ಕಂಡಾಗ ಕಣ್ಣಿದ್ದೂ ಕುರುಡರಂತೆಇದ್ದವರಲ್ಲ.ಅದೇ ಆದರ್ಶದಲ್ಲಿ ಉದಯ್ ಬದುಕುತ್ತಿದ್ದಾರೆ..

ಹಿರಿಯರು ಎನಿಸಿಕೊಂಡ ಸಮಾಜದ ಮುಖಂಡರು ಸ್ಥಾನಮಾನಗಳನ್ನು ಯುವಕರಿಗೆ ಒಪ್ಪಿಸಿ ಗೌರವಯುತವಾಗಿ ಹೊರನಡೆಯಲು ಇದು ಸಕಾಲ.ಇಲ್ಲವಾದರೆ ಕಾಲ ಕಳೆದಂತೆ ನೀವು ನೇಪಥ್ಯಕ್ಕೆ ಸರಿಯು ದಲ್ಲದೇ ಸಮಾಜಕ್ಕೆ ಸಾರತಿಯಾಗಬೇಕಾದ ಸಂಘಸಂಸ್ಥೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದು ಕೊಳ್ಳುದರಲ್ಲಿ ಸಂದೇಹ ವಿಲ್ಲ.”

ನಿಟ್ಟಿನಲ್ಲಿ ಬಿರುವೆರ್ ಉದಯ್ ಅಣ್ಣ ನಮಗೆಲ್ಲ ಆಶಾಕಿರಣ ಎನಿಸಿಕೊಂಡಿದ್ದಾರೆ.ಪ್ರತಿ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುವ  ಮನಸ್ಸುಅವರದ್ದು. ಏನೇ ಸಹಾಯ ಬೇಕಾದ್ರೂ ನಾನಿದ್ದೇನೆ ನಿಮ್ಮ ಜೊತೆಗೆ ಅನ್ನುವ ಭರವಸೆ ಕೊಡುವ ಮನಸ್ಸಿರುವ ಉದಯ್ ಇನ್ನಷ್ಟುಬೆಳೆಯಲಿ ಮತ್ತಷ್ಟು ಬೆಳಗಲಿ

 

✍️ಉದಯ್ ಕುಂದಾಪುರ

            (ಮುಂಬೈ)


Leave a Reply

Your email address will not be published. Required fields are marked *