ಶ್ರೀ ದೇವದಾಸ್ ಶಾಂತಿಯವರಿಗೆ ತಂತ್ರ ದೀಕ್ಷೆ

0

ನಮ್ಮ ನಾರಾಯಣ ಗುರು ವೈದಿಕ ಸಮಿತಿಯ(ರಿ.) ಸದಸ್ಯರಾದ ಶ್ರೀ ದೇವದಾಸ್ ಶಾಂತಿಯವರಿಗೆ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಋದಂಭರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಶ್ರೀ ಮಾತ್ತಾನಂ ಅಶೋಕನ್ ತಂತ್ರಿ ಹಾಗೂ ಶ್ರೀ ಉಷೇಂದ್ರನ್ ತಂತ್ರಿ ಯವರ ನೇತೃತ್ವದಲ್ಲಿ ತಾ. 20-02-2021 ನೇ ಶನಿವಾರ ಕೇರಳದ ಶ್ರೀ ಕ್ಷೇತ್ರ ಮಾತ್ತಾನಂ ಚೆರ್ತಲದಲ್ಲಿ ಜರಗಿತು.

WhatsApp Image 2021 02 20 At 5.24.20 PM 1 E1613822401634
ಶ್ರೀಯುತರು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ, ಶ್ರೀ ನಾರಾಯಣ ಶಾಂತಿಯವರಿಂದ ವೈದಿಕ ಶಿಕ್ಷಣ ಪ್ರಾರಂಭಿಸಿ,

ಕೊಕ್ಕಡ ದಿವಂಗತ ಶ್ರೀ ಅನಂತ ಪದ್ಮನಾಭ ಶಾಸ್ತ್ರಿಯವರಿಂದ ಹಾಗೂ ಶ್ರೀ ಅಮರಸಿಂಹಜ ಇವರಿಂದ ಸಂಸ್ಕೃತ ಶಿಕ್ಷಣ ಪಡೆದು,
ಶ್ರೀ ಕ್ರಷ್ಣಮೂರ್ತಿ ಪೆಜತ್ತಾಯ , ಮಹೇಶ್ ಮೂರ್ತಿ ಐತ್ತಾಳ್, ಭಾಷ್ಯಂ ಸ್ವಾಮಿ ಮತ್ತು ದಿವಂಗತ ಶ್ರೀ ವಿಜಯನ್ ತಂತ್ರಿಯವರಿಂದ ಜ್ಯೋತಿಷ್ಯ ಅಭ್ಯಾಸ ಮಾಡಿದರು.

WhatsApp Image 2021 02 20 At 5.24.20 PM 2 E1613822459552ಶ್ರೀ ಶ್ರೀನಿವಾಸ ಶಾಸ್ತ್ರಿ , ದಿವಂಗತ ಶ್ರೀ ಸುಬ್ಬರಾವ್ ಮತ್ತು ಶ್ರೀ ದಿವಾಕರ ಅಗ್ನಿಹೋತ್ರಿ ಯವರಿಂದ ವೇದೋಕ್ತ ಪೌರೋಹಿತ್ಯವನ್ನು ಅಭ್ಯಸಿಸಿರುತ್ತಾರೆ.

ಸುಮಾರು 20 ವರ್ಷಗಳ ಕಾಲ, ದಿವಂಗತ ಶ್ರೀ ಮಾತ್ತಾನಂ ವಿಜಯನ್ ತಂತ್ರಿಯವರಿಂದ ಹಾಗೂ , ಅವರ ಶಿಷ್ಯ ಪರಂಪರೆಯಿಂದ ಶಾಸ್ತ್ರೀಯವಾಗಿ ತಂತ್ರೋಕ್ತ ವಿಧಿ ವಿಧಾನಗಳನ್ನು ಅಧ್ಯಯನ ಮಾಡಿರುತ್ತಾರೆ.

WhatsApp Image 2021 02 20 At 5.24.20 PM E1613822549975

ಕರ್ನಾಟಕದ ನಾರಾಯಣ ಗುರು ಪರಂಪರೆಯಲ್ಲಿ ತಂತ್ರಗಮವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ತಂತ್ರ ದೀಕ್ಷೆಯನ್ನು ಪಡೆದ ಮೊದಲಿಗರಾಗಿರುತ್ತಾರೆ.

ತಮ್ಮನ್ನು ನಾರಾಯಣ ಗುರು ವೈದಿಕ ಸಮಿತಿಯು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

ನಿಮ್ಮಿಂದ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಸೇವೆ ಲಭಿಸಲಿ ಹಾಗೂ ನಮ್ಮ ಸಮಾಜದ ಯುವ ಪೀಳಿಗೆಗಳಿಗೆ ಮಾರ್ಗದರ್ಶನ ನೀಡುವಂತಹ ಶಕ್ತಿಯನ್ನು ಶ್ರೀ ನಾರಾಯಣ ಗುರುಗಳು ಮತ್ತು ಶ್ರೀ ದೇವರು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ.

ನಾರಾಯಣ ಗುರು ವೈದಿಕ ಸಮಿತಿ(ರಿ.) ಕರ್ನಾಟಕ. ಮಂಗಳೂರು


Leave a Reply

Your email address will not be published. Required fields are marked *