ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.

0

ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆIMG 20251128 WA0016 882x1024.

ಅವರು ಕಾರ್ಕಳ ತಾಲೂಕು ದೊಂಡೇರಂಗಡಿ, ಕುಕ್ಕುಜೆ ಗ್ರಾಮದ ಅರ್ಪಿತ ನಿಲಯದ ಜಯ ಪೂಜಾರಿ ಹಾಗೂ ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ಅಂಜಗುಡ್ಡೆ, ಉದಯ ನಿವಾಸ್‌ನ ಶೋಭಾ ಪೂಜಾರಿ ದಂಪತಿಯವರ ಪುತ್ರಿಯಾಗಿದ್ದಾರೆ.

ನಿಶಾ ಪೂಜಾರಿ ಅವರ ಈ ಸಾಧನೆ ಕುಟುಂಬಸ್ಥರು, ಬಂಧುಗಳು ಹಾಗೂ ಊರಿನವರಿಗೆ ಹೆಮ್ಮೆಯ ವಿಷಯವಾಗಿದ್ದು, ಅವರ ಮುಂದಿನ ವೃತ್ತಿ ಜೀವನಕ್ಕೆ ಎಲ್ಲರಿಂದಲೂ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು


Leave a Reply

Your email address will not be published. Required fields are marked *