08/08/2026

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ

0
Screenshot

Screenshot


ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ

“A study on N-Covering Zagreb Indices and Posets of a Graph using Mixed Degree Conditions”

ಎಂಬ ಮಹಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (Manipal Academy of Higher Education) ವಿಶ್ವವಿದ್ಯಾನಿಲಯವು 06-10-2025ರಂದು ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.

ಈ ಸಂಶೋಧನಾ ಕಾರ್ಯಕ್ಕೆ ಡಾ. ಸಾಯಿನಾಥ್ ಉಡುಪ ಎನ್.ವಿ. ಹಾಗೂ ಡಾ. ಪೃಥ್ವಿರಾಜ್ ಎಂ. ಇವರು ಮಾರ್ಗದರ್ಶನ ನೀಡಿದ್ದರು.

ಇವರು ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮ, ಬರಾಯದ ಲಕ್ಷ್ಮಣ ಪೂಜಾರಿ ಮತ್ತು ಲೀಲಾವತಿ ದಂಪತಿಯ ದ್ವಿತೀಯ ಪುತ್ರಿಯಾಗಿದ್ದು, ಅಳದಂಗಡಿಯ ಸಿವಿಲ್ ಇಂಜಿನಿಯರ್ ಪ್ರಸಾದ್ ಪೂಜಾರಿ ಇವರ ಪತ್ನಿಯಾಗಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಸೂಳಬೆಟ್ಟು ಮತ್ತು ಬಡಗಕಾರಂದೂರು ಶಾಲೆಗಳಲ್ಲಿ ಮುಗಿಸಿರುವ ಇವರು, SDM ಕಾಲೇಜು, ಉಜಿರೆಯಲ್ಲಿ ಬಿಎಸ್ಸಿ ಹಾಗೂ ಸಂತ ಫಿಲೋಮಿನಾ ಕಾಲೇಜು, ಪುತ್ತೂರು ಇಲ್ಲಿ ಎಂಎಸ್ಸಿ ಗಣಿತಶಾಸ್ತ್ರ ಪದವಿ ಪಡೆದಿದ್ದಾರೆ.

ಇವರು 2018ರಲ್ಲಿ ಕೆ -ಸೆಟ್ (K-SET) ಹಾಗು 2021ರಲ್ಲಿ ನಡೆದ ಕರ್ನಾಟಕ ಸರ್ಕಾರದ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರದಲ್ಲಿ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಅನುಷಾ ಎಲ್ ಅವರ ಈ ಸಾಧನೆಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Leave a Reply

Your email address will not be published. Required fields are marked *

You may have missed